ಬಂಡಿಹಳ್ಳಿ ಶ್ರೀ ರೇವಣ್ಣ ಸಿದ್ದೇಶ್ವರಸ್ವಾಮಿ ರಥೋತ್ಸವ

ಅರಸೀಕೆರೆ: ತಾಲೂಕಿನ ಬಂಡಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ರೇವಣ್ಣ ಸಿದ್ದೇಶ್ವರಸ್ವಾಮಿ ರಥೋತ್ಸವ ಮಂಗಳವಾರ ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಏ.22ರ ಸೋಮವಾರ ಬೆಳಗ್ಗೆಯಿಂದಲೇ ಕೊಂಡ ಹಾಯುವುದು, ಮೆರವಣಿಗೆ ಮುಂತಾದವರು ನೆರವೇರಿದವು. 23ರಂದು ಮಧ್ಯಾಹ್ನ ಮಹಾಮಂಗಳಾರತಿ ನೆರವೇರಿಸಿ ರೇವಣಸಿದ್ದೇಶ್ವರಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಭಕ್ತರು ರಥಕ್ಕೆ ಬಾಳೆಹಣ್ಣ, ದವನ ಎಸೆಯುವ ಮೂಲಕ ಭಕ್ತಿ ಮೆರೆದರು. ಪನ್ನಸಮುದ್ರ, ಸೂಳೆಕೆರೆ, ಲಕ್ಷ್ಮೀದೇವರಹಳ್ಳಿ, ಬೊಮ್ಮೇನಹಳ್ಳಿ, ದುಮ್ಮೇನಹಳ್ಳಿ, ಅಗ್ಗುಂದ, ಸಿದ್ದರಹಳ್ಳಿ, ಕೆಲ್ಲಂಗೆರೆ, ಕೆರೆ ಕೋಡಿಹಳ್ಳಿ ಸೇರಿ ಶ್ರೀ ಕ್ಷೇತ್ರದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಪ್ರಸಾದ ವಿನಿಯೋಗ ವ್ಯವಸ್ತೆ ಕಲ್ಪಿಸಲಾಗಿತ್ತು.

Leave a Reply

Your email address will not be published. Required fields are marked *