ಸಿಡಿಲು ಬಡಿದು ಜೋಡೆತ್ತು ಸಾವು

ಅರಕೇರಾ: ಗ್ರಾಮದ ಮಾಲಿಗೌಡರ ಓಣಿಯಲ್ಲಿ ಮನೆ ಮುಂದೆ ಕಟ್ಟಿಹಾಕಿದ್ದ ಜೋಡೆತ್ತುಗಳು ಶುಕ್ರವಾರ ರಾತ್ರಿ ಸಿಡಿಲು ಬಡಿದು ಸತ್ತಿವೆ. ರೈತ ಶಿವಮಾನ್ಯ ಮೂಕಯ್ಯಗೆ ಸೇರಿದ ಎತ್ತುಗಳು. ಕೃಷಿಗೆ ಆಧಾರವಾಗಿರುವ ಎತ್ತುಗಳು ಸಾವಿಗೀಡಾಗಿದ್ದು ರೈತನನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಗ್ರಾಪಂ ಅಧ್ಯಕ್ಷ ಸಿದ್ದಪ್ಪ ಪೈಕಾರ, ಕಂದಾಯ ನಿರೀಕ್ಷಕ ಭೀಮರಾಯ ಗೋವಿಂದಪಲ್ಲಿ, ಗ್ರಾಮಲೆಕ್ಕಿಗ ಮಲ್ಲಿಕಾರ್ಜುನ, ಪಶು ಆಸ್ಪತ್ರೆ ವೈದ್ಯ ಸಿದ್ದಪ್ಪ ಚವ್ಹಾಣ್, ನಿಜಲಿಂಗಪ್ಪ ಭೇಟಿ ನೀಡಿ ಪರೀಶಿಲಿಸಿದರು. ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *