108 ವಾಹನದಲ್ಲಿ ಅವಳಿ ಮಕ್ಕಳಿಗೆ ಜನ್ಮ

ಅರಕೇರಾ: ಹೆರಿಗೆ ಬೇನೆ ಕಾಣಿಸಿಕೊಂಡಿದ್ದರಿಂದ 108 ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ನೋವು ಹೆಚ್ಚಾಗಿ ಗರ್ಭಿಣಿಯೊಬ್ಬರು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸಜ್ಜಲಗುಡ್ಡ ಗ್ರಾಮದ ಆಂಜಿನಮ್ಮ ಸ್ವಾಮಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ. ಬುಧವಾರ ರಾತ್ರಿ ಗಲಗ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯುವಾಗ ನೋವು ಹೆಚ್ಚಾಗಿದ್ದು, ಕಜ್ಜಿಬಂಡಿ ಗ್ರಾಮದ ಬಳಿ ಹೆರಿಗೆಯಾಗಿದೆ. ಶುಶ್ರೂಷಕ ಹನುಮಂತ್ರಾಯ, ಚಾಲಕ ವಿಜಯರ್ ಸಹಾಯದೊಂದಿಗೆ ಹೆರಿಗೆ ಮಾಡಿಸಿ ಗಲಗ ಪಿಎಚ್‌ಸಿಗೆ ದಾಖಲಿಸಿದ್ದು, ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ.