ಹನುಮಂತ್ಯುತ್ಸವಕ್ಕೆ ಓಕಳಿ ರಂಗು

ಅರಕಲಗೂಡು: ತಾಲೂಕಿನ ಕೀರನಕಟ್ಟೆ ನವಿಲೆ ಗ್ರಾಮದಲ್ಲಿ ಶ್ರೀ ರಾಮ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಹನುಮಂತ್ಯುತ್ಸವದಲ್ಲಿ ಗ್ರಾಮಸ್ಥರು ಓಕುಳಿಯಾಡಿ ಸಂಭ್ರಮಿಸಿದರು. ಗ್ರಾಮದ ಶ್ರೀರಾಮ ಮಂದಿರದ ಆವರಣದಲ್ಲಿ ಹನುಮಂತ್ಯುತ್ಸವದ ಆಚರಣೆ ರಂಗೇರಿತ್ತು.


ಹನುಮಂತ ಸ್ವಾಮಿಗೆ ರುದ್ರಾಭಿಷೇಕ, ಪವಮಾನ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.


ಬಳಿಕ ಹನುಮಂತಸ್ವಾಮಿಯನ್ನು ಟ್ರಾೃಕ್ಟರನಲ್ಲಿ ಪ್ರತಿಷ್ಠಾಪಿಸಿ ಭಕ್ತರು ಭಜನೆ ಮಾಡುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು.


ಮೆರವಣಿಗೆ ಮುಗಿಯುತ್ತಿದ್ದಂತೆ ಮಕ್ಕಳಿಂದ ಓಕಳಿ ಪ್ರಾರಂಭವಾಯಿತು. ನಂತರ ಮಹಿಳೆಯರು, ಪುರುಷರು ವಯೋಮಾನದ ಹಂಗಿಲ್ಲದೆ ಪ್ರತಿ ಮನೆ ಮುಂದೆ ದೊಡ್ಡ ದೊಡ್ಡ ಹಂಡೆ, ಡ್ರಮ್‌ಗಳಲ್ಲಿ ಇಟ್ಟಿದ ಬಣ್ಣ ಬಣ್ಣದ ನೀರನ್ನು ಪರಸ್ಪರ ಎರಚಿಕೊಂಡು ಸಂಭ್ರಮಿಸಿದರು.

Leave a Reply

Your email address will not be published. Required fields are marked *