ಅರಕಲಗೂಡು ದಸರಾ ವೈಭವ ಹೆಚ್ಚಿಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನ

ಅರಕಲಗೂಡು: ರಾಜ್ಯ ಮಟ್ಟದಲ್ಲಿ ಹೆಚ್ಚು ಪ್ರಸಿದ್ಧಿಗೆ ಪಾತ್ರವಾಗುತ್ತಿರುವ 2019-20 ನೇ ಸಾಲಿನ ಅರಕಲಗೂಡು ದಸರಾವನ್ನು ಈ ಬಾರಿ ಇನ್ನಷ್ಟು ವೈಭವೋಪೇತವಾಗಿ ಆಚರಿಸುವ ಸಂಬಂಧ ಬುಧವಾರ ಚಿಲುಮೆ ಮಠದ‌ ಶ್ರೀ ಜಯದೇವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಹಿಂದಿನ ಸಮಿತಿಯನ್ನು ವಿಸ್ತೃತವಾಗಿ ಪುನಾರಚಿಸಲು ತೀರ್ಮಾನ ಕೈಗೊಳ್ಳಲಾಯಿತು.

ಶಾಸಕ‌ ಎ.ಟಿ.‌ರಾಮಸ್ವಾಮಿ ಅವರು ದಸರಾವನ್ನು ಆಕರ್ಷಣೀಯವಾಗಿಸಲು‌ ಸಾರ್ವಜನಿಕರಿಂದ ಮಹತ್ವದ ಸಲಹೆಗಳನ್ನು ಸ್ವೀಕರಿಸಿದರು.

ಇದೇ 29 ರಿಂದ ಒಂಬತ್ತು ದಿನಗಳ ಕಾಲ ನಡೆಯುವ‌ ದಸರಾ ಉದ್ಘಾಟನೆಗೆ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಿ ಮತ್ತಷ್ಟು ಖ್ಯಾತಿ ಹೆಚ್ಚಿಸಬೇಕು, ದಸರಾ ಪ್ರಶಸ್ತಿ ವಿತರಣೆ ಹಾಗೂ ಅಂಬಾರಿ ಮೇಲೆ ಗ್ರಾಮದೇವತೆ ಉತ್ಸವ ನಡೆಸಲು ಮೂರು ದಿನ ಮುಂಚಿತವಾಗಿ ಆನೆ ಕರೆಸಿ ಮಾವುತರಿಂದ ತಾಲೀಮು ನಡೆಸಿ ದಸರಾ ವೈಭವ ಕಳೆಗಟ್ಟಿಸಬೇಕು ಎಂದು ಸಭೆಯಲ್ಲಿದ್ದ ಮುಖಂಡರು ಸಲಹೆಗಳನ್ನು ನೀಡಿದರು.

ಶಾಸಕರು ಸಭೆಗೆ ಕಳೆದ ಸಾಲಿನ ದಸರಾ ಜಮಾ ಖರ್ಚು ಮಾಹಿತಿ ನೀಡಿದರು. ಕಳೆದ ಬಾರಿ ಸರ್ಕಾರ ದಸರಾ ಕಾರ್ಯಕ್ರಮಕ್ಕೆ 10 ಲಕ್ಷ‌ ರೂ. ಅನುದಾನ ನೀಡಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ೯,೭೭೬೬೩ ರೂ ನೀಡಿತ್ತು. ಒಟ್ಟು ದಸರಾಕ್ಕೆ ೭,೮೪೯೯೨ ರೂ ಖರ್ಚು ಮಾಡಲಾಗಿದ್ದು ೧೧೯೭೧ ರೂ ಉಳಿಕೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.

ಗ್ರೇಡ್- ೨ ತಹಸೀಲ್ದಾರ್ ಪಾರ್ಥಸಾರಥಿ, ಸಿಪಿಐ ದೀಪಕ್,‌ ದಸರಾ ಸಮಿತಿ ಕಾರ್ಯದರ್ಶಿ ಎ.ಪಿ.‌ ಶಂಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *