ದೊಡ್ಡಬಳ್ಳಾಪುರ : ಏ.1ರೊಳಗೆ ಹಾಲು ಖರೀದಿ ಬೆಲೆ ಏರಿಕೆ ಕುರಿತಂತೆ ರೈತರ ಬೇಡಿಕೆ ಈಡೇರಿಸಬೇಕು ಎಂದು ಬಮೂಲ್ ನಿರ್ದೇಶಕ ಬಿ.ಸಿ ಆನಂದಕುಮಾರ್ ಒತ್ತಾಯಿಸಿದರು.
ನಗರದ ಹಾಲು ಶೀತಲ ಕೇಂದ್ರದ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಉಪ ಕಸುಬಾದ ಹೈನುಗಾರಿಕೆ ಕರ್ನಾಟಕ ಸಹಕಾರಿ ೇತ್ರದಲ್ಲಿ ಗಟ್ಟಿಯಾಗಿ ಬೇರೂರಿದೆ. ಆದರೆ, ಇದೀಗ ಸರ್ಕಾರದ ಬೇಜವಾಬ್ದಾರಿ ಧೋರಣೆಯಿಂದ ರೈತರು ಹೈನುಗಾರಿಕೆ ಬಿಟ್ಟು ಬೇರೆ ಕೆಲಸ ನೋಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದರು.
‘ಪ್ರಸ್ತುತ ರೈತರಲ್ಲಿ ಇಲ್ಲದ ಒಗ್ಗಟ್ಟನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳು ರೈತರಿಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಸಾಲ ಮಾಡಿ ರೈತರು ಹಸುಗಳನ್ನು ದುಬಾರಿ ಬೆಲೆಗೆ ಹಿಂಡಿ, ಬೂಸ ಮತ್ತು ಪಶು ಆಹಾರಗಳನ್ನು ಖರೀದಿಸಬೇಕಿದೆ. ಹಾಗಾಗಿ ಹಾಲಿನ ದರ ಏರಿಕೆ ಮಾಡುವುದರ ಜತೆಗೆ ಪಶು ಆಹಾರ ಬೆಲೆ ಇಳಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಹಾಲಿಗೆ ನೀಡುವ ಪ್ರೋತ್ಸಾಹಧನವನ್ನು ಪ್ರತಿ ಲೀಟರ್ಗೆ ರೂ. 5 ರಿಂದ 10ಕ್ಕೆ ಹೆಚ್ಚಿಸಬೇಕು. ರೈತ ಸ್ನೇಹಿ ಯೋಜನೆಗಳನ್ನು ಜಾರಿ ಮಾಡಿದರೆ ರೈತ ಕುಟುಂಬದ ಜೀವನ ಹಸನಾಗುತ್ತದೆ ಎಂದರು. ರೈತ ಸಂದ ಜಿಲ್ಲಾ ಅಧ್ಯಕ್ಷ ಪ್ರಸನ್ನ ಮಾತನಾಡಿ, ಗ್ಯಾರಂಟಿ ಯೋಜನೆಗಳು ಜನರ ಸ್ವಾವಲಂಬಿ ಬದುಕಿಗೆ ಪೆಟ್ಟು ನೀಡುತ್ತಿವೆ. ಇನ್ನೊಂದು ವಾರದೊಳಗೆ ರೈತರ ಹಾಲು ಖರೀದಿಗೆ ಹೊಸ ದರ ೂಷಣೆ ಮಾಡದೇ ಇದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.