ಪಾಕ್​ ವಿರುದ್ಧದ ಭರ್ಜರಿ ಜಯದ ನಂತರ ದೇಶಭಕ್ತಿಯ ಪೋಸ್ಟ್​ ಹಾಕಿದ ರೋಹಿತ್​ ಶರ್ಮಾಗೆ ಭಾರಿ ಮೆಚ್ಚುಗೆ

ನವದೆಹಲಿ: ಐಸಿಸಿ ವಿಶ್ವಕಪ್​ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಭರ್ಜರಿ ಜಯಗಳಿಸಿದ ಬಳಿಕ ರೋಹಿತ್​ ಶರ್ಮಾ ತಮ್ಮ ಶತಕದ ಸಂಭ್ರಮಾಚರಣೆಯನ್ನು ದಾಖಲಿಸಿದ್ದು ಹೀಗೆ…

ಈ ಪಂದ್ಯದಲ್ಲಿ ಭಾರತ ಪರ ರೋಹಿತ್​ ಶರ್ಮಾ (140) ಭರ್ಜರಿ ಶತಕ ದಾಖಲಿಸಿ ಭಾರತ ತಂಡ ಬೃಹತ್​ ಮೊತ್ತ ದಾಖಲಿಸುವಲ್ಲಿ ನೆರವಾದರು. ಆ ಸಂಭ್ರಮದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಫೋಟೊ ಜತೆಗೆ ‘ವಂದೆ ಮಾತರಂ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅಭಿಮಾಗಳಿಂದ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ಪಂದ್ಯದಲ್ಲಿ ರೋಹಿತ್​ ಶರ್ಮಾ ತಮ್ಮ 24ನೇ ಶತಕ ಪೂರೈಸಿದರು. ಹಾಗೆಯೇ 2019ರ 12ನೇ ಸಾಲಿನ ವಿಶ್ವಕಪ್​ನಲ್ಲಿ ಭಾರತ ಆಡಿದ ಮೂರು ಪಂದ್ಯಗಳಲ್ಲಿ ಇವರು ಎರಡು ಶತಕಗಳನ್ನು ದಾಖಲಿಸಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಐಸಿಸಿ ವಿಶ್ವಕಪ್​ 2019ರಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸತತ ಏಳನೇ ಬಾರಿಗೆ ಪಾಕಿಸ್ತಾನ ಭಾರತದೆದುರು ಸೋತು ಮಂಡಿಯೂರಿದ್ದು ಮತ್ತೆ ಮುಖಭಂಗ ಅನುಭವಿಸಿದೆ. (ಏಜೆನ್ಸೀಸ್​)

View this post on Instagram

🇮🇳

A post shared by Rohit Sharma (@rohitsharma45) on

Leave a Reply

Your email address will not be published. Required fields are marked *