ಉಪತಹಸೀಲ್ದಾರ್ ನೇಮಕ ಮಾಡಿ

ಹಾನಗಲ್ಲ: ತಾಲೂಕಿನ ಬೊಮ್ಮನಹಳ್ಳಿ ಹೋಬಳಿಯಲ್ಲಿ ಕಂದಾಯ ಇಲಾಖೆ ಉಪತಹಸೀಲ್ದಾರ್ ಹುದ್ದೆ ಖಾಲಿ ಇದ್ದು ಕೂಡಲೇ ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ಕರವೇ (ಪ್ರವೀಣ ಶೆಟ್ಟಿ ಬಣ) ವತಿಯಿಂದ ಸೋಮವಾರ ತಹಸೀಲ್ದಾರ್​ಗೆ ಮನವಿ ಸಲ್ಲಿಸಲಾಯಿತು.

ಬೊಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 52 ಗ್ರಾಮಗಳಿವೆ. ಉಪತಹಸೀಲ್ದಾರ್ ಇಲ್ಲದ್ದರಿಂದ ವಿಧವಾ ವೇತನ, ಜಾತಿ, ಆದಾಯ ಪ್ರಮಾಣಪತ್ರ, ಸಣ್ಣ ಹಿಡುವಳಿ, ವಾರಸಾ ಪ್ರಮಾಣಪತ್ರ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳು ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ಇದರಿಂದ ಬಡವರು-ಕೂಲಿ ಕಾರ್ವಿುಕರು ತಮ್ಮ ಮಕ್ಕಳ ಶಿಕ್ಷಣ ಮತ್ತಿತರ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಮುಂಗಾರು ಹಂಗಾಮು ಪ್ರಾರಂಭಗೊಂಡಿದ್ದು, ರೈತರಿಗೆ ಅಗತ್ಯವಿರುವ ದಾಖಲೆಗಳಿಗೂ ಸಮಸ್ಯೆಯಾಗುತ್ತಿದೆ. ಕಳೆದ 6 ತಿಂಗಳುಗಳಿಂದ ಉಪತಹಸೀಲ್ದಾರ್ ಹುದ್ದೆ ಖಾಲಿಯಿದ್ದರೂ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕ್ರಮ ಕೈಗೊಳ್ಳುತ್ತಿಲ್ಲ. ಹಲವು ಬಾರಿ ಮೌಖಿಕವಾಗಿ ಮನವಿ ಮಾಡಿದ್ದರೂ, ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಕೂಡಲೇ ಅಧಿಕಾರಿಗಳನ್ನು ನಿಯೋಜನೆಗೊಳಿಸಬೇಕು. ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ನಾಡಕಚೇರಿ ಸಿಬ್ಬಂದಿ ಸಿದ್ದನಗೌಡರ ಮನವಿ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಓಲೇಕಾರ, ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಮಲ್ಲಮ್ಮನವರ, ಪದಾಧಿಕಾರಿಗಳಾದ ರವಿ ಪಾಟೀಲ, ಮುತ್ತಣ್ಣ ಜಾಲಗಾರ, ಹರೀಶ ಹುಕ್ಕೇರಿ, ಕುಮಾರ ಧಾರವಾಡ, ನಾಗರಾಜ ಬೈಲವಾಳ, ರುದ್ರೇಶ ಬನ್ನಿಕೊಪ್ಪ, ಕುಮಾರ ಸವಣೂರ, ಚನ್ನಬಸಪ್ಪ ಧಾರವಾಡ, ವಿಜಯ ಬೈಲವಾಳ, ಬಸವರಾಜ ಧಾರವಾಡ ಇದ್ದರು.

………………..

+++++++++++++++++++++++++++++++++++++++++++++++++++++++++++

ಎಬಿವಿಪಿಯಿಂದ ಸಿಎಂಗೆ ಮನವಿ ಸಲ್ಲಿಕೆ*ಮಾನವ ಸರಪಳಿ ನಿರ್ವಣ, ಪ್ರತಿಭಟನಾ ಮೆರವಣಿಗೆ

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿ

ವಿಜಯವಾಣಿ ಸುದ್ದಿಜಾಲ ಹಾನಗಲ್ಲ

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡದ ರಾಜ್ಯ ಸರ್ಕಾರದ ನಡೆ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಅರ್ಪಿಸಿದರು.

ಪಟ್ಟಣದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ವಿುಸಿ ರಸ್ತೆ ತಡೆ ನಡೆಸಿದರು. ರಾಜ್ಯದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡುವಂತೆ ಹಲವು ವರ್ಷದಿಂದ ಬೇಡಿಕೆಯಿದೆ. ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಇದಕ್ಕೆ ಒಪ್ಪಿಗೆ ಸೂಚಿಸಿದ್ದರು. ಆದರೆ, ಪ್ರಸ್ತುತ ಸಮ್ಮಿಶ್ರ ಸರ್ಕಾರ ಉಚಿತ ಬಸ್ ಪಾಸ್ ವಿತರಣೆ ರದ್ದುಗೊಳಿಸುವ ಮೂಲಕ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಿತ್ಯ ಬಸ್ ಮೂಲಕವೇ ಪಟ್ಟಣಗಳಿಗೆ ಸಂಚರಿಸಿ ಶಿಕ್ಷಣ ಪಡೆಯಬೇಕಾದ ಅಗತ್ಯವಿದೆ. ಕೂಡಲೇ ರಾಜ್ಯ ಸರ್ಕಾರ ಶಿಕ್ಷಣ ವಿರೋಧಿ ಆದೇಶ ರದ್ದುಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪ್ರತಿಭಟನೆಯಲ್ಲಿ ಎಬಿವಿಪಿ ತಾಲೂಕು ಸಂಚಾಲಕ ಮಲ್ಲಪ್ಪ ನಾಗರವಳ್ಳಿ, ಕಾರ್ಯದರ್ಶಿ ಬಸವರಾಜ ಕಟ್ಟಿಮನಿ, ಭರತ ಹುಳ್ಳಿಕಾಶಿ, ಭರತ್​ಕುಮಾರ, ರಿತೇಶ ತಳವಾರ, ಮೇಘರಾಜ ರಾಥೋಡ, ಮಾಲತೇಶ ಮಾಳಿ, ವಿಜಯ ಜಾಡರ, ಅರುಣಕುಮಾರ ರ್ಬಾ, ಶಂಭು ಮಲ್ಲಿಗ್ಗಾರ, ಎಚ್. ಮಾಲು, ಎಸ್.ಕೆ. ವೀರೇಶ, ಸಚಿನ್ ವಾಲಿಕಾರ ಇತರರು ಇದ್ದರು.

……………

ವಿಜಯವಾಣಿ ಚಿತ್ರ

24 ಎಚ್​ಎನ್​ಎಲ್ 3

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ ಆಗ್ರಹಿಸಿ ಹಾನಗಲ್ಲಿನಲ್ಲಿ ಎಬಿವಿಪಿ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಅರ್ಪಿಸಿದರು. ಮಲ್ಲಪ್ಪ ನಾಗರವಳ್ಳಿ, ಬಸವರಾಜ ಕಟ್ಟಿಮನಿ, ಭರತ ಹುಳ್ಳಿಕಾಶಿ, ಭರತ್​ಕುಮಾರ, ರಿತೇಶ ತಳವಾರ, ಮೇಘರಾಜ ರಾಥೋಡ, ಮಾಲತೇಶ ಮಾಳಿ, ವಿಜಯ ಜಾಡರ ಇದ್ದರು.

+++++++++++++++++++++++++++++++++++++++++++++++++++++++++++

24ಎಚ್​ಕೆಆರ್- 04

ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಿ

ಅನ್ಯ ಕಾರ್ಯಕ್ಕೆ 14ನೇ ಹಣಕಾಸು ಯೋಜನೆ ಅನುದಾನ ಬಳಸಬೇಡಿ | ಶಾಸಕ ಬಿಸಿಪಿ ಸೂಚನೆ

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ

ಸರ್ಕಾರದ 14ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಸಂಪೂರ್ಣವಾಗಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಬಳಸಬೇಕು. ಈ ಬಗ್ಗೆ ಸರ್ಕಾರವೇ ಸ್ಪಷ್ಟ ನಿರ್ದೇಶನ ನೀಡಿದ್ದು, ಇದಕ್ಕೆ ತಪ್ಪಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಠಿಣ ಕೈಗೊಳ್ಳಲಾಗುವುದು ಎಂದು ಶಾಸಕ ಬಿ.ಸಿ. ಪಾಟೀಲ ಎಚ್ಚರಿಸಿದರು.

ಪಟ್ಟಣದ ತಾ.ಪಂ. ಸಭಾಭವನದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸೋಮವಾರ ಜರುಗಿದ ರಟ್ಟಿಹಳ್ಳಿ, ಹಿರೇಕೆರೂರ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರ ಸಭೆಯಲ್ಲಿ ಅವರು ಮಾತನಾಡಿದರು.

ಸತತ 5 ವರ್ಷಗಳಿಂದ ಬರಗಾಲ ಆವರಿಸಿದ್ದು, ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರಿಗಾಗಿ ಈಗಾಗಲೇ 130 ಬೋರ್​ವೆಲ್ ಕೊರೆಸಲಾಗಿದೆ. 75 ಖಾಸಗಿ ರೈತರ ಬೋರ್​ವೆಲ್​ಗಳಿಂದ ಹಾಗೂ ಟ್ಯಾಂಕರ್​ಗಳಿಂದ ನೀರು ಪೂರೈಸಲಾಗುತ್ತಿದೆ. ಆದರೂ ನೀರು ಸಾಕಾಗುತ್ತಿಲ್ಲ. ನೀರಿನ ಸಮಸ್ಯೆ ಎದುರಾಗುತ್ತಿದ್ದು, ಮಳೆ ಬರುವವರೆಗೆ ಸಾರ್ವಜನಿಕರು ನೀರನ್ನು ಮಿತವ್ಯಯವಾಗಿ ಬಳಸಬೇಕು. ಈ ಬಗ್ಗೆ ಗ್ರಾ.ಪಂ. ಅಧ್ಯಕ್ಷರು, ಪಿಡಿಒ ಜನರಿಗೆ ಮನವರಿಕೆ ಮಾಡಬೇಕು ಎಂದರು.

ತಾ.ಪಂ. ಇಒ ಸಂತೋಷಕುಮಾರ ತಳಕಲ್, ರಟ್ಟಿಹಳ್ಳಿ, ಹಿರೇಕೆರೂರು ತಾಲೂಕಿನ ಗ್ರಾ.ಪಂ.ಗಳ ಪಿಡಿಒ ಹಾಗೂ ಅಧ್ಯಕ್ಷರು ಇದ್ದರು.

ಬಾಕ್ಸ್…

ನಿಷ್ಪಕ್ಷಪಾತ ವರದಿ ತಯಾರಿಸಿ

ಕುಡಿಯುವ ನೀರಿಗಾಗಿ ಕೊರೆಸಿದ ಕೊಳವೆ ಬಾವಿಗಳ ಕುರಿತು ಇಂಜಿನಿಯರ್ ಮತ್ತು ಪಿಡಿಒ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ನಿಷ್ಪಕ್ಷಪಾತ ವರದಿ ತಯಾರಿಸಿ ನನ್ನ ಗಮನಕ್ಕೆ ತರಬೇಕು. ನಂತರ ಬೋರ್​ವೆಲ್ ವಾಹನದ ಮಾಲೀಕರಿಗೆ ಹಣ ಸಂದಾಯ ಮಾಡಬೇಕು. ಇದರಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಫೋಟೋ: 24ಎಚ್​ಕೆಆರ್- 01

ಹಿರೇಕೆರೂರ ತಾ.ಪಂ. ಸಭಾಭವನದಲ್ಲಿ ಶಾಸಕ ಬಿ.ಸಿ. ಪಾಟೀಲ ಅಧ್ಯಕ್ಷತೆಯಲ್ಲಿ ರಟ್ಟಿಹಳ್ಳಿ, ಹಿರೇಕೆರೂರ ತಾಲೂಕಿನ ಗ್ರಾ.ಪಂ.ಗಳ ಅಭಿವೃದ್ಧಿ ಅಧಿಕಾರಿಗಳ ಮತ್ತು ಅಧ್ಯಕ್ಷರ ಸಭೆ ಜರುಗಿತು. ತಾ.ಪಂ ಇಒ ಸಂತೋಷಕುಮಾರ ತಳಕಲ್, ಇತರರು ಇದ್ದರು.

Leave a Reply

Your email address will not be published. Required fields are marked *