ಮೈಸೂರು: ಮೈಸೂರು ತಾಲೂಕು ನಾಯಕರ ಸಂಘ ನಗರ ಮತ್ತು ತಾಲೂಕು ವ್ಯಾಪ್ತಿಯಲ್ಲಿ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕೂ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದೆ ಎಂದು ಸಂಘದ ಅಧ್ಯಕ್ಷ ಉದ್ಬೂರು ಮಹಾದೇವಸ್ವಾಮಿ ತಿಳಿಸಿದರು.
ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿ, ಜಾತಿ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಭಾವಚಿತ್ರದೊಂದಿಗೆ ಮೇ 21ರ ಒಳಗೆ ಅರ್ಜಿಯನ್ನು ಮೈಸೂರು ತಾಲೂಕು ನಾಯಕರ ಸಂಘ, ಈಜುಕೊಳದ ರಸ್ತೆ, ಸರಸ್ವತಿಪುರಂ ಇಲ್ಲಿಗೆ ಸಲ್ಲಿಸಬಹುದು.
ನಗದು ಪುರಸ್ಕಾರವಿದ್ದು, ಕಾರ್ಯಕ್ರಮದ ದಿನಾಂಕವನ್ನು ಶೀಘ್ರದಲ್ಲಿಯೇ ತಿಳಿಸಲಾಗುವುದು. ಮಾಹಿತಿಗೆ ಮೊಬೈಲ್ ಸಂಖ್ಯೆ 98866 66787 ಅಥವಾ 99018 02106 ಅನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಸಂಘದ ಗೌರವಾಧ್ಯಕ್ಷ ಉದ್ಬೂರು ಎಚ್.ಕೃಷ್ಣ, ಕಾರ್ಯಾಧ್ಯಕ್ಷ ಶಂಭುಲಿಂಗ ನಾಯಕ್, ಉಪಾಧ್ಯಕ್ಷ ರಮ್ಮನಹಳ್ಳಿ ವೆಂಕಟಯ್ಯ, ಪ್ರಧಾನ ಕಾರ್ಯದರ್ಶಿ ಕಡಕೊಳ ಕುಮಾರಸ್ವಾಮಿ, ಖಜಾಂಚಿ ಕುಮಾರಬೀಡು ಮರಿಸ್ವಾಮಿನಾಯಕ್, ಮುಖಂಡ ಕ್ಯಾತಮಾರನಹಳ್ಳಿ ವೆಂಕಟೇಶ್ ಇದ್ದರು.
