ಶಿವಾರ್ಚಕ ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ

1 Min Read

ಮೈಸೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90 ಹಾಗೂ ಪಿಯು ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಗಳಿಸಿದ ಶಿವಾರ್ಚಕ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲು ರಾಜ್ಯ ಶಿವಾರ್ಚಕ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಘದ ಸಹ ಕಾರ್ಯದರ್ಶಿ ತಗಡೂರು ಗಣೇಶ್ ತಿಳಿಸಿದರು.
ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯದ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಹಲವು ವರ್ಷಗಳಿಂದ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವರ್ಷ ಕಾರ್ಯಕ್ರಮ ಜುಲೈ 28ರಂದು ಅಗ್ರಹಾರದಲ್ಲಿರುವ ಶ್ರೀ ನಟರಾಜ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಪುರಸ್ಕಾರ ಕಾರ್ಯಕ್ರಮ ಜರುಗಲಿದೆ. ಆದ್ದರಿಂದ ಅರ್ಹ ವಿದ್ಯಾರ್ಥಿಗಳು ಜುಲೈ 10ರೊಳಗೆ ಎಂ.ಮನೋಹರ್, ನಂ.36, ಕನಕಗಿರಿ ಶಾಲೆ ಎದುರು, ಸೂಯೇಜ್ ಫಾರ್ಮ್, ವಿದ್ಯಾರಣ್ಯಪುರಂ, ಮೈಸೂರು-8 ಇಲ್ಲಿಗೆ ಕಳುಹಿಸಬೇಕು. ಮಾಹಿತಿಗೆ ಮೊ.9900175664 ಸಂಪರ್ಕಿಸಬಹುದು ಎಂದು ಕೋರಿದರು.
ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಬೆಂಗಳೂರು ಸೇರಿದಂತೆ ವಿವಿಧೆಡೆ ಶಿವ ದೇವಾಲಯಗಳಲ್ಲಿ ಅರ್ಚಕರಾಗಿದ್ದು, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ತೀರಾ ಹಿಂದುಳಿದಿದ್ದಾರೆ. ವಿದ್ಯಾವಂತರ ಸಂಖ್ಯೆಯೂ ಬೆರಳೆಣಿಕೆಯಷ್ಟಿದೆ. ಹೀಗಾಗಿ ಸಮುದಾಯದವರ ಶಿಕ್ಷಣ ಉತ್ತೇಜಿಸಲು ಪ್ರತಿಭಾ ಪುರಸ್ಕಾರ ಹಾಗೂ ದಾನಿಗಳ ಸಮಾವೇಶ ನಡೆಸಿಕೊಂಡು ಬರಲಾಗುತ್ತಿದೆ ಎಂದು ವಿವರಿಸಿದರು.
ಟ್ರಸ್ಟ್‌ನ ಗೌರವಾಧ್ಯಕ್ಷ ಎಂ. ಮಲ್ಲಣ್ಣ, ಮುಖಂಡರಾದ ಇ. ವಾಮದೇವ್, ಕೆ.ಎ. ಪಂಚಲಿಂಗಯ್ಯ, ದೀಕ್ಷಿತ್, ಜಗದೀಶ್ ಇತರರಿದ್ದರು.

See also  6 ರೂಪಾಯಿ ಷೇರಿಗೆ ಭಾರೀ ಬೇಡಿಕೆ: ಸತತ 3 ದಿನ ಅಪ್ಪರ್​ ಸರ್ಕ್ಯೂಟ್​ ಹಿಟ್​
Share This Article