ಮೈಸೂರು: ದಲಿತರ ಮೇಲಿನ ದೌರ್ಜನ್ಯ ತಡೆಯಬೇಕು, ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಬೇಕು, ಸಂವಿಧಾನ ವಿರೋಧಿ ಹೇಳಿಕೆ ನಿಲ್ಲಿಸುವಂತೆ ಒತ್ತಾಯಿಸಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ನಗರದ ಸಿಂಧುವಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮೈಸೂರು ಜಿಲ್ಲೆಯ ಸಿಂಧುವಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರ, ಪ್ರತಿಮೆ ವಿರೂಪಗೊಳಿಸಿ ಅವಮಾನಿಸಿರುವವರನ್ನು ಪೊಲೀಸರು ಇನ್ನೂ ಪತ್ತೆಹಚ್ಚಿಲ್ಲ. ಆರೋಪಿಗಳನ್ನು ಬಂಧಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವುದು ಸಂದೇಹ ಮೂಡಿಸುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ತಕ್ಷಣವೇ ಪತ್ತೆಹಚ್ಚಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಅಖಂಡ ಭಾರತಕ್ಕೆ ಸುಭದ್ರ ಸಂವಿಧಾನವಿದ್ದರೂ, ಹಿಂದೂರಾಷ್ಟ್ರದ ಪರಿಕಲ್ಪನೆಯಲ್ಲಿ 501 ಪುಟಗಳ ಪ್ರತ್ಯೇಕ ಸಂವಿಧಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿಕೆ ನೀಡಿರುವ ಶಾಂಭವಿ ಪೀಠಾಧಿಪತಿ ಸ್ವಾಮಿ ಆನಂದ್ ಸ್ವರೂಪ್ ಮಹಾರಾಜ್ ಅವರನ್ನು ಸಂವಿಧಾನ ವಿರೋಧಿ ಹೇಳಿಕೆ ಅಡಿ ಬಂಧಿಸಬೇಕು ಎಂದು ಆಗ್ರಹಿಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ಧ್ಯಾನ ಮಾಡುವ ಬದಲು ದೇವರ ಧ್ಯಾನ ಮಾಡಿದಲ್ಲಿ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಸಂಸತ್‌ನಲ್ಲಿ ಹೇಳಿಕೆ ನೀಡಿದ ಗೃಹ ಮಂತ್ರಿ ಅಮಿತ್ ಷಾ ವಿರುದ್ಧ ಇದೇ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಯಾರು ಕುಂಭಮೇಳಕ್ಕೆ ಬರುವುದಿಲ್ಲವೋ ಅವರೆಲ್ಲಾ ದೇಶದ್ರೋಹಿಗಳು ಎಂದು ಬಹಿರಂಗ ಹೇಳಿಕೆ ನೀಡಿರುವ ಸ್ವಯಂ ಘೋಷಿತ ದೇವಮಾನ ಧೀರೇಂದ್ರಶಾಸ್ತ್ರಿ, ನಮಗೆ ನಿಜವಾದ ತ್ವಾತಂತ್ರೃ ಸಿಕ್ಕಿದ್ದು ರಾಮಮಂದಿರ ಉದ್ಘಾಟನೆಗೊಂಡ ದಿನ ಎಂದು ಬಹಿರಂಗ ಹೇಳಿಕೆ ನೀಡಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕೆಂದು ಬಹಿರಂಗ ಹೇಳಿಕೆ ನೀಡಿರುವ ಉಡುಪಿ ಮಠದ ವಿಶ್ವೇಶ್ವರತೀರ್ಥ ಪ್ರಸನ್ನ ಸ್ವಾಮೀಜಿ ವಿರುದ್ದವೂ ಪ್ರಕರಣ ದಾಖಲಾಗಬೇಕು ಎಂದು ಆಗ್ರಹಿಸಿದರು.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ದಲಿತ ಹೆಣ್ಣು ಮಗಳನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಇದರ ವಿರುದ್ದ ತಕ್ಷಣ ಕ್ರಮವಹಿಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು. ಪಂಜಾಬ್‌ನ ಚಂಡೀಗಢದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಬೆಂಕಿಹಚ್ಚಿ ವಿರೂಪಗೊಳಿಸಿದ ವಿರುದ್ಧದ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಮಾಡಿ ಆರೋಪಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಲಾಯಿತು.
ಇತ್ತೀಚಿನ ಘಟನೆಗಳನ್ನು ಗಮನಿಸಿದರೆ ದೇಶದಾದ್ಯಂತ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ನಿಂತಿಲ್ಲವೆಂಬುದಕ್ಕೆ ಸಾಕ್ಷಿ. ದೇಶದ ಸಂವಿಧಾನದ ಅವಹೇಳನ ಮಾಡುವುದು, ಪ್ರತ್ಯೇಕ ಸಂವಿಧಾನ ಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದರೂ ರಾಷ್ಟ್ರಪತಿಗಳು, ಕೇಂದ್ರ ಸರ್ಕಾರ ಸುಮ್ಮನೆ ಇದ್ದಾರೆ. ಆದ್ದರಿಂದ ದಲಿತರ ರಕ್ಷಣೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಾಜಿ ಮೇಯರ್ ಪುರುಷೋತ್ತಮ್, ಸಿಂಧುವಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಚಂದ್ರು, ಮುಖಂಡರಾದ ಗೋವಿಂರಾಜು ಇತರರು ಇದ್ದರು.
ಅಂಬೇಡ್ಕರ್ ಯುವಕರ ಸಂಘದಿಂದ ಡಿಸಿಗೆ ಮನವಿ

You Might Also Like
ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic
garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…
ಎಷ್ಟೇ ನೀರು ಕುಡಿದ್ರೂ ನಿಮಗೆ ಪದೇ ಪದೇ ಬಿಕ್ಕಳಿಕೆ ಬರುತ್ತಿದೆಯೇ? ಈ ಮನೆಮದ್ದು ಟ್ರೈ ಮಾಡಿ Hiccups
Hiccups : ಬಿಕ್ಕಳಿಕೆ ಎಲ್ಲರಿಗೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಇದು ಪ್ರಾರಂಭವಾಗುತ್ತದೆ ಗಬಗಬನೆ…
18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs
Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…