ಕೊಪ್ಪ: ರೈತರು ಜೀವನೋಪಾಯಕ್ಕಾಗಿ ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ಸಾಗುವಳಿ ಮಾಡುತ್ತಿದ್ದು, ಸಲು ಕಾಣುವ ಹೊತ್ತಲ್ಲಿ ಅರಣ್ಯ ಇಲಾಖೆ ಖುಲ್ಲ ಮಾಡುತ್ತಿರುವುದ ಸರಿಯಲ್ಲ .ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಒತ್ತುವರಿ ತೆರವು ಕಾರ್ಯವನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಿಸಾನ್ ಕಾಂಗ್ರೆಸ್ ಘಟಕದಿಂದ ಡಿಎ್ಒ ನಂದೀಶ್‌ಗೆ ಮನವಿ ಸಲ್ಲಿಸಲಾಯಿತು.
ಅನೇಕ ರೈತರು ಒತ್ತುವರಿ ಜಮೀನುಗಳ ಸಕ್ರಮಕ್ಕಾಗಿ ಾರ್ಮ್ 50, 53, 57 ಅಡಿ ಅರ್ಜಿ ಸಲ್ಲಿಸಿದ್ದಾರೆ. ಅರಣ್ಯ ಮತ್ತು ಕಂದಾಯ ಭೂುಮಿಗಳ ಜಂಟಿ ಸರ್ವೇ ಬಾಕಿ ಇದೆ. ಇದರ ಜತೆಗೆ ಸರ್ಕಾರ ಲೀಸ್ ಆಧಾರದ ಒತ್ತುವರಿ ಜಮೀನುಗಳನ್ನು ನೀಡಲು ಮುಂದಾಗಿದೆ. ಈ ವೇಳೆಯಲ್ಲಿ ಇಲಾಖೆ ಒತ್ತುವರಿ ತೆರವಿಗೆ ಮುಂದಾಗಿರುವುದು ಸರಿಯಲ್ಲ. ಇದರಿಂದ ಸರ್ಕಾರದ ಮೇಲೆ ತಪ್ಪು ತಿಳಿವಳಿಕೆ ಮೂಡಲಿದೆ. ಸರ್ಕಾರ ಈ ಮುಜುಗರ ತಪ್ಪಿಸಲು ಜಂಟಿ ಸರ್ವೇ ಪೂರ್ಣಗೊಳಿಸುವವರೆಗೂ ಹಾಗೂಬೆಳೆ ಇರುವ ಕೃಷಿ ಜಮೀನುಗಳನ್ನು ಖುಲ್ಲಾ ಮಾಡದಂತೆ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕೆಪಿಸಿಸಿ ಸದಸ್ಯ ಬಾಳೆಮನೆ ನಟರಾಜ್, ಶಶಿಧರ್, ಎಚ್.ಎಂ ಸತೀಶ್, ಎಚ್.ಎಸ್ ಇನೇಶ್, ಡಿ.ಬಿ.ರಾಜೇಂದ್ರ, ಅನ್ನಪೂರ್ಣ ನರೇಶ್, ಆದಿತಿ ಶಾನುವಳ್ಳಿ, ಮುದ್ದಣ್ಣ ಇದ್ದರು.
