ಕಾರವಾರ: ಜಿಲ್ಲೆಗೆ ಎರಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (hospital) ಹಾಗೂ 3 ಟ್ರಾಮಾ ಸೆಂಟರ್‌ಗಳನ್ನು ನಿರ್ಮಾಣ ಮಾಡಬೇಕು ಎಂದು ದುರ್ಗಾದೇವಿ ಹಿಂದು ಚಮಗಾರ ಜಾತಿಯ (ಹರಳಯ್ಯ) ಜಿಲ್ಲಾ ಸೇವಾ ಸಂಘದ ಸದಸ್ಯರು ಪ್ರಧಾನಿ, ಮುಖ್ಯಮಂತ್ರಿ, ಕೇಂದ್ರ ಹಾಗೂ ರಾಜ್ಯ ಆರೋಗ್ಯ ಸಚಿವರಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರ ಮೂಲಕ ಮನವಿ ಸಲ್ಲಿಸಿದರು.
ಸೂಪರ್ ಸ್ಪೆಷಾಲಿಟಿ Hospital ಮಾಡಿ
ಕಾರವಾರ ಹಾಗೂ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದನ್ನು ನಿರ್ಮಾಣ ಮಾಡಬೇಕು. ಅಲ್ಲದೇ, ದಾಂಡೇಲಿ ಹಳಿಯಾಳ ಮತ್ತು ಜೊಯಿಡಾಕ್ಕೆ ಸಂಬಂಧಪಟ್ಟು ದಾಂಡೇಲಿಯಲ್ಲಿ, ಕರಾವಳಿ ತಾಲೂಕಿಗೆ ಸಂಬಂಧಿಸಿ ಕುಮಟಾ ಅಥವಾ ಕಾರವಾರದಲ್ಲಿ ಅಲ್ಲದೇ, ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ತಾಲೂಕಿಗೆ ಸಂಬಂಧಿಸಿ ಶಿರಸಿಯಲ್ಲಿ ಟ್ರಾಮಾ ಸೆಂಟರ್‌ಗಳನ್ನು ನಿರ್ಮಾಣ ಮಾಡಬೇಕು ಎಂದು. ಒತ್ತಾಯಿಸಿದ್ದಾರೆ.
ಉತ್ತರ ಕನ್ನಡ ಶೇ.80 ರಷ್ಟು ಅರಣ್ಯ ಭಾಗ ಹೊಂದಿದೆ. ರಾಷ್ಟ್ರೀಯ ಹೆದ್ದಾರಿ ಕಾರಣದಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತವೆ. ಆದರೆ, ತುರ್ತು ಜೀವ ಉಳಿಸಲು ಟ್ರಾಮಾ ಸೆಂಟರ್‌ಗಳಿಲ್ಲ. ಇದರಿಂದ ಜಿಲ್ಲೆಯ ಜನರು ಆರೋಗ್ಯ ಸೇವೆ ಪಡೆಯಲು ಉಡುಪಿ, ಮಂಗಳೂರು, ಧಾರವಾಡ, ಮುಂತಾದ ಪಕ್ಕದ ಜಿಲ್ಲೆಗಳಿಗೆ ಹೋಗಬೇಕಾಗಿದೆ. ಹಾಗಾಗಿ ಟ್ರಾಮಾ ಸೆಂಟರ್‌ಗಳನ್ನು ನಿರ್ಮಾಣ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಂಘದ ಅಧ್ಯಕ್ಷ ಲಕ್ಷ್ಮೇಶ್ವರ ಬೊರ್ಕರ್, ಕಾರ್ಯದರ್ಶಿ ಸಂತೋಷ್ ಎಂ. ಕುಡಾಳಕರ್, ಖಜಾಂಚಿ ನಾಮದೇವ ಕುಡಾಳಕರ್, ಕಾರ್ಯಕಾರಿ ಸದಸ್ಯರಾದ ದೇವಾನಂದ ಪಾವಸ್ಕರ್, ಆನಂದು ಬೋರಕರ್, ಅಶ್ವಿನಿ ಬೋರ್ಕರ್, ನಿಶಾ ಬೋರ್ಕರ್ , ಸ್ಪೂರ್ತಿ ಎಸ್.ಕುಡಾಳಕರ್ ಇದ್ದರು.
ಇದನ್ನೂ ಓದಿ: ಶಿರಸಿ ಪ್ರತ್ಯೇಕ ಜಿಲ್ಲೆಗಾಗಿ ಸಮಾನ ಮನಸ್ಕರ ಸಭೆ 16ರಂದುhttps://www.vijayavani.net/a-like-minded-meeting-for-shirsi-separate-district-on-16th