More

    ಪಿತೂರಿಗಳಿಗೆ ಕಿವಿಗೊಡಬೇಡಿ ರಾಷ್ಟ್ರೀಯತೆ ನಮ್ಮ ಬದ್ಧತೆ

    ರಾಷ್ಟ್ರೀಯತೆ, ನಮ್ಮ ದೇಶದ ಸಂಸ್ಕೃತಿ-ಪರಂಪರೆ, ಹಿಂದು ವಿಚಾರಗಳು ಇತ್ಯಾದಿ ಬುನಾದಿ ಮೇಲೆ ನಿಂತಿದೆ ವಿಜಯವಾಣಿ. ಹಾಗೇ, ದೇಶ-ರಾಜ್ಯದ ಅಭಿವೃದ್ಧಿಯ ಕುರಿತಂತೆಯೂ ಪತ್ರಿಕೆಯ ಗಮನ ಸದಾ ಇರುತ್ತದೆ. ಜತೆಗೆ, ಹೊಸ ಹೊಸ ಪ್ರಯೋಗಗಳು ಪತ್ರಿಕೆಯ ಚಲನಶೀಲತೆಯ ದ್ಯೋತಕ.

    ಈ ಎಲ್ಲ ಕಾರಣಗಳಿಂದಾಗಿ ಓದುಗರು ಅಲ್ಪಾವಧಿಯಲ್ಲೇ ವಿಜಯವಾಣಿಯನ್ನು ಕನ್ನಡದ ನಂಬರ್ 1 ಪತ್ರಿಕೆಯಾಗಿ ಬೆಳೆಸಿದರು. ಇದಕ್ಕಾಗಿ ಓದುಗರಿಗೆ ನಾವು ಸದಾ ಕೃತಜ್ಞರು. ಕೆಲ ಮಾಧ್ಯಮಗಳು ಪ್ರಚೋದನಕಾರಿಯಾಗಿ ಸುದ್ದಿ-ಬರಹಗಳನ್ನು ಪ್ರಕಟಿಸುವುದು; ದೇಶದ್ರೋಹಿ ಚಟುವಟಿಕೆಗಳಿಗೆ ಉತ್ತೇಜನ-ಕುಮ್ಮಕ್ಕು ನೀಡುವಂತಹ ಸುದ್ದಿಗಳನ್ನು ಬಿತ್ತರಿಸುವುದು ಗೊತ್ತೇ ಇದೆ.

    ಆದರೆ ವಿಜಯವಾಣಿ ಇಂಥದರಿಂದ ಬಹುದೂರ ಎಂಬುದು ಓದುಗರಿಗೂ ಚೆನ್ನಾಗಿ ಮನವರಿಕೆಯಾಗಿರುವ ಸಂಗತಿ. ಅದೇ ರೀತಿ, ನಮಗೆ ಪತ್ರಿಕೆ ಎಂಬುದು ಹಣ ಮಾಡುವ ಅಥವಾ ವಾಣಿಜ್ಯಾತ್ಮಕ ಸಾಧನ ಅಲ್ಲ. ಮೊದಲೇ ಹೇಳಿದಂತೆ, ರಾಷ್ಟ್ರೀಯತೆ, ಪ್ರಜಾಪ್ರಭುತ್ವದ ಮೌಲ್ಯಗಳ ಪ್ರಸಾರ ನಮ್ಮ ಮುಖ್ಯ ಧ್ಯೇಯ. ಪತ್ರಿಕೆ ಎಂಬುದು ನಮಗೆ ಟಚಠಠಜಿಟ್ಞ. ನಮ್ಮ ಧರ್ಮ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕಾದ ಬಹುದೊಡ್ಡ ಹೊಣೆಗಾರಿಕೆಯೂ ನಮ್ಮ ಮೇಲಿದೆ.

    ಇಲ್ಲಿ ಇನ್ನೊಂದು ಸಂಗತಿಯನ್ನು ಸ್ಪಷ್ಟಪಡಿಸಬೇಕು. ಪತ್ರಿಕೆ ಆರ್ಥಿಕವಾಗಿ ಸದೃಢವಾಗಿದೆ; ಸ್ವಂತ ಬಲದ ಮೇಲೆ ನಿಂತಿದೆ. ಪತ್ರಿಕೆಯಲ್ಲಿ ನಮ್ಮದೇ ಸ್ವಂತ ಹಣವನ್ನು ಹೂಡಿಕೆ ಮಾಡಲಾಗಿದೆ. ಈ ವಿಷಯದಲ್ಲಿ ನಮಗೆ ಆತ್ಮತೃಪ್ತಿಯೂ ಇದೆ. ವಿಜಯವಾಣಿ ಯಾವುದೇ ಮಾಧ್ಯಮ ಸಂಸ್ಥೆ ಅಥವಾ ಪತ್ರಿಕೆ ಜತೆಗೆ ಹಣಕಾಸಿನ ವ್ಯವಹಾರ ಇಟ್ಟುಕೊಂಡಿಲ್ಲ. ಪತ್ರಿಕೆಯನ್ನು ಬೇರೆಯವರಿಗೆ ಮಾರಾಟ ಮಾಡುವ ಅಥವಾ ಬೇರೆ ಸಂಸ್ಥೆಯೊಂದಿಗೆ ಆರ್ಥಿಕ ಸಂಬಂಧ ಹೊಂದುವ ಯಾವುದೇ ಉದ್ದೇಶ ನಮಗಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಲಿಚ್ಛಿಸುತ್ತೇವೆ.

    ಆದರೆ ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಪತ್ರಿಕೆ ಬಗ್ಗೆ ವ್ಯತಿರಿಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಲಾಗುತ್ತಿದೆ. ಇಂತಹ ಪಿತೂರಿಗಳಿಗೆ ನಮ್ಮ ಓದುಗರು ಮಣೆ ಹಾಕುವುದಿಲ್ಲ ಎಂಬ ಭರವಸೆಯೂ ನಮಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ವಿರುದ್ಧ ನಡೆಸುತ್ತಿರುವ ಇಂಥ ಅಪಪ್ರಚಾರದ ವಿರುದ್ಧ ನಾವು ಕಾನೂನು ಕ್ರಮ ಕೈಗೊಳ್ಳಲಿದ್ದೇವೆ. ಆದ್ದರಿಂದ, ನಮ್ಮ ಓದುಗರು ಯಾವುದೇ ಬಗೆಯ ಗೊಂದಲಕ್ಕೆ ಒಳಗಾಗಬಾರದಾಗಿ ಮನವಿ ಮಾಡಿಕೊಳ್ಳುತ್ತೇವೆ.

    ವಿಆರ್​ಎಲ್ ಮೀಡಿಯಾ ಸಂಸ್ಥೆ ತನ್ನ ಮೂಲ ಧ್ಯೇಯೋದ್ದೇಶಗಳಿಗೆ ಬದ್ಧವಾಗಿದೆ ಮತ್ತು ಮುಂದೆಯೂ ಈ ನಿಲುವಿನಲ್ಲಿ ಬದಲಾವಣೆ ಇರುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಬಯಸುತ್ತೇವೆ. ಕನ್ನಡಿಗರ ಪ್ರೋತ್ಸಾಹ ಮತ್ತು ಬೆಂಬಲ ಸದಾ ಹೀಗೇ ಮುಂದುವರಿಯುತ್ತದೆಂಬ ವಿಶ್ವಾಸ ನಮಗಿದೆ.

    | ಆನಂದ ಸಂಕೇಶ್ವರ

    ವ್ಯವಸ್ಥಾಪಕ ನಿರ್ದೇಶಕರು ವಿಆರ್​ಎಲ್ ಸಮೂಹ ಸಂಸ್ಥೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts