ತೇರದಾಳ: ತಾಲೂಕಿನ ಸಸಾಲಟ್ಟಿ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಹೆಸ್ಕಾಂ ಶಾಖಾಧಿಕಾರಿ ಡಿ.ಎಂ.ಕಮ್ಮಾರ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ರೈತರು ಅರಿಶಿಣ ಬೆಳೆಯನ್ನು ಒಣಗಲು ಜಮೀನುಗಳಲ್ಲಿ ಬಿಟ್ಟಿದ್ದಾರೆ. ರಾತ್ರಿ ವೇಳೆ ವಿದ್ಯುತ್ ಕಡಿತವಾಗುತ್ತಿರುವುದರಿಂದ ಕಳ್ಳತನವಾಗವ ಸಾಧ್ಯತೆ ಇದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಗ್ರಾಮಸ್ಥರಾದ ಹುಲೆಪ್ಪ ಹುಕ್ಕೇರಿ, ಮುತ್ತು ಭದ್ರಶೆಟ್ಟಿ, ಈರಪ್ಪ ಶೇಗುಣಸಿ, ಯಲ್ಲಪ್ಪ ಮುಶಿ, ಶಿವಲಿಂಗ ದಳವಾಯಿ, ಲೊಕೇಶ ಹಾದಿಮನಿ, ಸತೀಶ ಮರಡಿ, ಶಿವಲಿಂಗ ಕಾಪಸಿ ಮತ್ತಿತರರಿದ್ದಾರೆ.
TAGGED:ತೇರದಾಳ