ಕಾಂತರಾಜ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಮನವಿ

mdl 9-1

ಮುಧೋಳ: ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಕಾಂತರಾಜ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಅಹಿಂದ ಸಂಘಟನೆಗಳ ವತಿಯಿಂದ ಮಂಗಳವಾರ ರನ್ನ ವೃತ್ತದಿಂದ ಪಾದಯಾತ್ರೆಯಲ್ಲಿ ತಹಸೀಲ್ದಾರ್ ಕಚೇರಿಗೆ ತೆರಳಿ, ತಹಸೀಲ್ದಾರ್ ಮಹಾದೇವ ಸನಮುರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಕಾಂಗ್ರೆಸ್ ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷ ಮುದಕಣ್ಣ ಅಂಬಿಗೇರ ಮಾತನಾಡಿ, ಜಾತಿ ಜನಾಂಗದ ಸಬಲೀಕರಣದ ಗುರಿ ಹೊಂದಲು ಮತ್ತು ಸರ್ಕಾರದ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಗೊಳಿಸಲು ಕಾಂತರಾಜ ಆಯೋಗದ ವರದಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಅಹಿಂದ ಸಂಘಟನೆಗಳ ಅಧ್ಯಕ್ಷ ಗೋವಿಂದ ಕೌಲಗಿ ಮಾತನಾಡಿ, ರಾಜ್ಯದಲ್ಲಿ ಅತಿ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕ ಸಬಲೀಕರಣಕ್ಕಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ಜಾತಿ, ಗಣತಿ ಜಾರಿಗೊಳಿಸುವ ಮೂಲಕ ಇತಿಹಾಸದ ಪುಟದಲ್ಲಿ ತಮ್ಮ ಹೆಸರು ಉಳಿಯುತ್ತದೆ. ಹಿಂಜರಿಯದೆ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಗಳಿಗೆ ಸದಾ ನಾವು ಬೆಂಬಲಿಸುತ್ತ ಬಂದಿದ್ದೇವೆ. ಮುಂದೆಯೂ ನಿಮ್ಮ ಬೆಂಬಲಕ್ಕೆ ಗಟ್ಟಿಯಾಗಿ ನಿಂತು ಹೋರಾಡುತ್ತೇವೆ ಎಂದು ತಿಳಿಸಿದರು.

ವಿಜಯಪುರ ಮತ್ತು ಬಾಗಲಕೋಟೆ ಹಾಲು ಒಕ್ಕೂಟದ ನಿರ್ದೇಶಕ ಲಕ್ಷ್ಮಣ ಮಾಲಗಿ ಮಾತನಾಡಿ, ಸಮಾಜದಲ್ಲಿ ಹಿಂದುಳಿದ ವರ್ಗಗಳು ಪ್ರಬಲವಾದ ರಾಜಕೀಯ, ಆರ್ಥಿಕವಾಗಿ ವಾಣಿಜ್ಯೋದ್ಯಮದಲ್ಲಿ ಧ್ವನಿ ಹೊಂದಲು ಕಾಂತರಾಜ ಆಯೋಗದ ವರದಿ ತಕ್ಷಣ ಜಾರಿಗೆ ಬಂದಾಗ ಮಾತ್ರ ಸಮಾನತೆ ಮತ್ತು ನ್ಯಾಯ ಸಾಧಿಸಲು ಸಾಧ್ಯ ಎಂದರು.

ಕಾಂಗ್ರೆಸ್ ಮುಖಂಡ ಸಂಗಪ್ಪ ಇಮ್ಮನವರ ಮಾತನಾಡಿದರು.
ಕಾಂಗ್ರೆಸ ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ ಶಪೀಕ್ ಬೇಪಾರಿ, ಗಣೇಶ ಮೇತ್ರಿ, ಅಹಿಂದ ಉಪಾಧ್ಯಕ್ಷ ಜಾವೇದ ಹವಾಲ್ದಾರ್, ರವಿ ರೊಡ್ಡಪ್ಪನವರ, ಲಕಪ್ಪ ಕರೊಲಿ, ಶಿವಾನಂದ ಮ್ಯಾಗೇರಿ, ಸಿದ್ದಣ್ಣ ಬಾಡಿಗೆ, ಯಲ್ಲಪ್ಪ ಗಳಕಣವರ, ಮಲ್ಲಿಕಾರ್ಜುನ ಬಡಿಗೇರ, ಶಿವಪ್ಪ ಡೊಳ್ಳಿ, ನೂರಲ್ಲಿ ಶೇಖ, ಸಂಗಪ್ಪ ಅಮೋತಿ, ಲಕ್ಷ್ಮಣ ಮರಡಿ, ಸುರೇಶ ಸಿದ್ದಾಪುರ ಇದ್ದರು.

Share This Article

Raw Milkನಿಂದ ಹೊಳೆಯುವ ತ್ವಚೆ! ಹಸಿ ಹಾಲಿನಲ್ಲಿ ಇವುಗಳನ್ನು ಬೆರೆಸಿ ಹಚ್ಚಿಕೊಳ್ಳಿ ಸಾಕು..

Raw Milk Beauty Tips: ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ಹಾಲು…

Health Tips | ಕರಿಬೇವು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ: ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ..

ಅಡುಗೆಯಲ್ಲಿ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುವ ಸಲುವಾಗಿ ಕರಿಬೇವನ್ನು ಉಪಯೋಗಿಸುತ್ತಾರೆ. ಇದರಿಂದ ಆರೋಗ್ಯಕ್ಕೂ ಎಷ್ಟೆಲ್ಲಾ ಪ್ರಯೋಜನ…