ವೇತನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ಹುನಗುಂದ: ವೇತನ ನೀಡುವಂತೆ ಒತ್ತಾಯಿಸಿ ಬಿಎಸ್​ಎನ್​ಎಲ್ ಕಚೇರಿ ಎದುರು ಹೊರಗುತ್ತಿಗೆ ಕಾರ್ವಿುಕರು ಪ್ರತಿಭಟನೆ ನಡೆಸಿ ಜೆಟಿಒ ಅನೀಲಕುಮಾರ ಬೋಡಪಲ್ಲಿ ಅವರಿಗೆ ಮನವಿ ಸಲ್ಲಿಸಿದರು.

ಗುತ್ತಿಗೆ ಕಾರ್ವಿುಕ ಬಸಪ್ಪ ತೆಗ್ಗಿ ಮಾತನಾಡಿ, ದೂರವಾಣಿ ಕಚೇರಿಯಲ್ಲಿ 24 ವರ್ಷಗಳಿಂದ ಇಲ್ಲಿಯವರೆಗೆ ಹೊರಗುತ್ತಿಗೆ ಕಾರ್ವಿುಕರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ನಮಗೆ ಇಲಾಖೆ ಯಾವ ಸೌಲಭ್ಯ ನೀಡಿಲ್ಲ. ವೇತನದಲ್ಲಿನ ಪಿಎಫ್ ಮತ್ತು ಇಎಸ್​ಐ ಕಡಿತಗೊಳಿಸಿರುವ ಮಾಹಿತಿ ನೀಡುತ್ತಿಲ್ಲ. ಈ ಕುರಿತು ಗುತ್ತಿಗೆದಾರರಿಗೆ ಕೇಳಿದರೆ ಕೆಲಸದಿಂದ ತೆಗೆಯುವ ಬೆದರಕೆ ಹಾಕಿ ವೇತನ ನೀಡದೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಫೀರಸಾಬ ಧನ್ನೂರ ಮಾತನಾಡಿ, ಗ್ರಾಹಕರ ಮನೆ ಸೇವೆಗೆ ತೆರಳಿದಾಗ ನೀವ್ಯಾರೆಂದು ಕೇಳುತ್ತಾರೆ. ನಮಗೆ ಗುರುತಿನ ಚೀಟಿ ನೀಡಬೇಕೆಂದು ಒತ್ತಾಯಿಸಿದರು.

ಕೊಟಕ್ ಮಹೀಂದ್ರ ಬ್ಯಾಂಕ್​ನಲ್ಲಿ ನಮಗೆ ತಿಳಿಯದೆ ನಮ್ಮ ಹೆಸರಿನಲ್ಲಿ ಖಾತೆ ತೆರೆದು ರುಜುವಿಲ್ಲದೆ ಗುತ್ತಿಗೆದಾರರು ಲಕ್ಷದ ವರೆಗೆ ಸಾಲ ಪಡೆದು ಮರಳಿ ತುಂಬಿದ್ದಾರೆ ಎಂದು ದೂರಿದರು.

ಅಶ್ವಿನಿ ಗೌಡರ ಮಾತನಾಡಿದರು. ಮಹಾಂತೇಶ ಸಾಲಿಮಠ ಜೆಟಿಒ ನಾಗರಾಜ ಸಜ್ಜನ. ಸಂಗಮೇಶ ಹುನಕುಂಟಿ, ಶರಬಣ್ಣ ಅಂಗಡಿ, ಚಂದ್ರು ಚವಾಣ್, ಶಿವಾನಂದ ಬೆನಕಟ್ಟಿ, ಅಮೀರಹಮ್ಜಾ, ಸಿದ್ದು ನಾರಾಯಣಪುರ, ಮಂಜುನಾಥ ಕಡೇಕರ್, ಯಮನಪ್ಪ ಶಹಪುರ, ರಮೇಶ ಕೆಂಜೋಡಿ, ಬಸವರಾಜ ಹುಲಿಮನಿಗೌಡ, ಲಾಲಸಾಬ ದೇಗಿನಾಳ, ಚಂದ್ರಕಾಂತ ನಿಡಗುಂದಿ, ಹನುಮಂತ ಹೂಗಾರ ಇದ್ದರು.

ದೂರವಾಣಿ ಇಲಾಖೆಯಲ್ಲಿ ಕಾಯರ್å ನಿರ್ವಹಿಸುವ ಹೊರಗುತ್ತಿಗೆದಾರರ ಪಿಎಫ್ ಮತ್ತು ಇಎಸ್​ಐ ಕಡಿತಗೊಳಿಸಿರುವ ಬಗ್ಗೆ ನಮಗೆ ಮಾಹಿತಿ ನೀಡಿದಾಗ ಮುಖ್ಯ ಗುತ್ತಿಗೆದಾರರಿಗೆ ನಾವು ಒಟ್ಟು ಹಣ ನೀಡುತ್ತೇವೆ. ರಾಜ್ಯವ್ಯಾಪಿ ಮುಖ್ಯ ಗುತ್ತಿಗೆದಾರರಿಗೆ ಫಂಡ್ ಸಮಸ್ಯೆ ಇದೆ. ಆದಾಗ್ಯೂ ಅವರು ಹೊರಗುತ್ತಿಗೆದಾರರಿಗೆ ವೇತನ ತೊಂದರೆ ಮಾಡಿಲ್ಲ. ಒಂದೆರಡು ತಿಂಗಳ ಬಾಕಿ ಇರಬಹುದು. ಗುತ್ತಿಗೆದಾರ ಬಿಲ್ ಮಂಜೂರಿಗಾಗಿ ಅಲೆಯುತ್ತಿದ್ದಾರೆ.

| ಆರ್.ಎಸ್. ಅರ್ಜುಣಗಿ ಎಜಿಎಂ ವಿಜಯಪುರ