ರಕ್ತದಾನಿಗಳ ಸಂಪರ್ಕಕ್ಕೆ ಆ್ಯಪ್

ಉಡುಪಿ: ಸಣ್ಣ ಸಣ್ಣ ಕೆಲಸವನ್ನು ಪ್ರಾಮಾಣಿಕವಾಗಿ ನಿಸ್ವಾರ್ಥದಿಂದ ಮಾಡುವುದು ದೊಡ್ಡ ಸಾಧನೆ. ಜೀವನದಲ್ಲಿ ಸಂತೋಷ ಬಯಸುವು ದಾದರೆ ಪರರಿಗೆ ಸಹಾಯ ಮಾಡಬೇಕು ಎಂದು ಉಡುಪಿ ಕ್ರೈಸ್ತ ಪ್ರಾಂತ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೋ ಹೇಳಿದರು.

ಭಾರತೀಯ ಕ್ಯಾಥೋಲಿಕ್ ಯುವ ಸಂಚಲನ ವತಿಯಿಂದ ರಕ್ತದಾನಿಗಳನ್ನು ಸಂಘಟಿಸುವ ಉದ್ದೇಶದಿಂದ ಪ್ರಾರಂಭಿಸಲಾದ ರೆಡ್ರಾಪ್ ಆ್ಯಪ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಲಯನ್ಸ್ ಜಿಲ್ಲಾ ಗವರ್ನರ್ ಡಾ.ತಲ್ಲೂರು ಶಿವರಾಮ ಶೆಟ್ಟಿ, ರಕ್ತ ಶೀಘ್ರದಲ್ಲಿ ದೊರೆಯುವಂತೆ ಮಾಡಿ ಪ್ರಾಣ ಉಳಿಸುವ ಕೆಲಸ ಮಾದರಿ ಎಂದರು. ಜೆಸಿಐ ವಲಯಾಧ್ಯಕ್ಷ ಅಶೋಕ್ ಚೂಂತಾರು, ಆರೋಗ್ಯ ಆಯೋಗದ ನಿರ್ದೇಶಕ ಎಡ್ವರ್ಡ್ ಲೋಬೋ, ಐಸಿವೈಎಂ ಜಿಲ್ಲಾಧ್ಯಕ್ಷ ಡಿಯಾನ್ ಡಿಸೋಜಾ, ಲೆಸ್ಲಿ ಅರೋಜಾ, ಅಲ್ಫೋನ್ಸಾ ಡಿಕೋಸ್ತಾ, ಅಲ್ವಿನ್ ಕ್ವಾಡ್ರಸ್, ಜನೆಟ್ ಬರ್ಬೋಜಾ, ಎಡ್ವಿನ್ ಡಿಸೋಜಾ ಉಪಸ್ಥಿತರಿದ್ದರು.

ಆಧುನಿಕ ತಂತ್ರಜ್ಞಾನಗಳನ್ನು ಸದುಪಯೋಗ ಮಾಡಿಕೊಳ್ಳುವ ಉನ್ನತ ಧ್ಯೇಯವನ್ನು ಸಂಘಟನೆ ಹೊಂದಿರುವುದು ಶ್ಲಾಘನೀಯ. ಜಿಲ್ಲೆಯಲ್ಲಿ ಹೊಸ ಚಿಂತನೆ ಆರಂಭವಾಗಿದ್ದು, ಆಪತ್ಕಾಲದಲ್ಲಿ ಕಷ್ಟ ಪರಿಹರಿಸುವ ಕಾರ್ಯ ಇನ್ನಷ್ಟು ವ್ಯಾಪಿಸಲಿ.
| ಡಾ. ಜೆರಾಲ್ಡ್ ಐಸಾಕ್ ಲೋಬೋ, ಬಿಷಪ್