ಮುಂಬೈ: ಅಕ್ಟೋಬರ್ 12ರಂದು ಮಾಜಿ ಸಚಿವ, ಎಸ್ಸಿಪಿ ನಾಯಕ ಬಾಬಾ ಸಿದ್ದಿಕ್ಕಿರನ್ನು (Baba Siddique) ಹತ್ಯೆ ಮಾಡಿಸುವ ಮೂಲಕ ವಿಶ್ವಾದಾದ್ಯಂತ ಸಖತ್ ಸೌಂಡ್ ಮಾಡಿದ್ದ ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಮುಂದಿನ ಟಾರ್ಗೆಟ್ ಸಲ್ಮಾನ್ ಖಾನ್ ಎಂದು ತಿಳಿದು ಬಂದಿದ್ದು, ಬಿಷ್ಣೋಯ್ನಿಂದ ಕೊಲೆ ಬೆದರಿಕೆಗಳನ್ನು ಎದುರಿಸುತ್ತಿರುವ ಖಾನ್ಗೆ ಇದೀಗ ಲಾರೆನ್ಸ್ ಸಹೋದರ ಹೊಸ ಬೆದರಿಕೆಯನ್ನು ಹಾಕಿದ್ದಾನೆ.
ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ಸೆಲ್‌ಗೆ ಬೆದರಿಕೆ ಸಂದೇಶ ಬಂದಿದ್ದು, ಕಳೆದ 10 ದಿನದ ಅವಧಿಯಲ್ಲಿ ಇದು ಮೂರನೇ ಬೆದರಿಕೆಯಾಗಿದ್ದು, ಸಲ್ಮಾನ್ ಖಾನ್ಗೆ (Salman Khan) ಭದ್ರತೆಯನ್ನು ಹೆಚ್ಚಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು (Senior Police Officer), ಲಾರೆನ್ಸ್ ಬಿಷ್ಣೋಯ್ (Lawrence Bishnoi) ಸಹೋದರ ಎಂದು ಹೇಳಿಕೊಂಡು ವ್ಯಕ್ತಿಯಿಂದ ಬೆದರಿಕೆ ಬಂದಿದೆ. ಸಲ್ಮಾನ್ ಖಾನ್ (Salman Khan) ದೇವಸ್ಥಾನಕ್ಕೆ ಹೋಗಿ ತಪ್ಪಾಯ್ತು ಎಂದು ಕ್ಷಮೆ ಕೇಳಬೇಕು ಅಥವಾ 5 ಕೋಟಿ ರೂ. ಕೊಡಬೇಕು ಇಲ್ಲವಾದಲ್ಲಿ ಕೊಲ್ಲುವುದೊಂದೇ ದಾರಿ ಎಂದು ಹೇಳಿದ್ದಾರೆ. ಬೆದರಿಕೆ ಸಂಬಂಧ ಅಧಿಕಾರಿಗಳು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು (Senior Police Officer) ತಿಳಿಸಿದ್ದಾರೆ.
ಅಕ್ಟೋಬರ್ 30ರಂದು ಅಪರಿಚಿತ ವ್ಯಕ್ತಿಯೋರ್ವ ಮುಂಬೈ ಟ್ರಾಫಿಕ್ ಪೊಲೀಸರಿಗೆ ಕರೆ ಮಾಡಿ 2 ಕೋಟಿ ರೂ. ಕೊಡದಿದ್ದರೆ ಸಲ್ಮಾನ್ ಖಾನ್ರನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಬೆದರಿಕೆ ಸಂದೇಶ ಬಂದ ನಂತರ ಮುಂಬೈನ ವರ್ಲಿ ಜಿಲ್ಲೆಯ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಯತ್ನಾಳ್, ಜಾರಕಿಹೊಳಿ ಮಾತಿಗೆ ಯಾವುದೇ ಕಿಮ್ಮತ್ತಿಲ್ಲ, ಉಪಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ: BY Vijayendra