ಚಂದ್ರಬಾಬು ನಾಯ್ಡುಗೆ ಮನೆ ತೆರವುಗೊಳಿಸುವಂತೆ ಮತ್ತೆ ನೋಟಿಸ್​ ನೀಡಿದ ಆಂಧ್ರ ಸರ್ಕಾರ

ಅಮರಾವತಿ: ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಕೃಷ್ಣಾ ನದಿ ತೀರದಲ್ಲಿ ನಿರ್ಮಿಸಿರುವ ಮನೆಯನ್ನು 7 ದಿನಗಳ ಒಳಗೆ ತೆರವುಗೊಳಿಸುವಂತೆ ಆಂಧ್ರಪ್ರದೇಶ ಸರ್ಕಾರ ನೋಟಿಸ್​ ನೀಡಿದೆ.

ಅಮರಾವತಿಯ ಉಂದಾವಲ್ಲಿಯ ಕೃಷ್ಣಾ ನದಿ ತೀರದಲ್ಲಿರುವ ಬಾಡಿಗೆ ಮನೆಯಲ್ಲಿ ಚಂದ್ರಬಾಬು ನಾಯ್ಡು ವಾಸವಾಗಿದ್ದಾರೆ. ಆದರೆ ಈ ಮನೆಯನ್ನು ನಿಯಮ ಬಾಹಿರವಾಗಿ ನಿರ್ಮಿಸಲಾಗಿದೆ. ಕೃಷ್ಣಾ ನದಿಯ ಪಾತ್ರದಲ್ಲಿ ಈ ಮನೆಯನ್ನು ನಿರ್ಮಿಸಲಾಗಿದ್ದು, ನದಿಯಲ್ಲಿ ಪ್ರವಾಹ ಬಂದಾಗ ನೀರು ಮನೆಯವರೆಗೂ ತಲುಪುತ್ತದೆ. ಇತ್ತೀಚೆಗೆ ನದಿಯಲ್ಲಿ ಪ್ರವಾಹ ಬಂದಿದ್ದಾಗ ಮನೆಯ ಔಟ್​ಹೌಸ್​ನ ಮೆಟ್ಟಿಲುಗಳವರೆಗೆ ನೀರು ಬಂದಿತ್ತು.

ನಿಯಮ ಬಾಹಿರವಾಗಿ ಮನೆ ನಿರ್ಮಿಸಿರುವ ಕಾರಣ ಮನೆಯನ್ನು 7 ದಿನಗಳ ಒಳಗಾಗಿ ಕೆಡವುವಂತೆ ಆಂಧ್ರ ಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಪಿಸಿಆರ್​ಡಿಎ) ಶನಿವಾರ ನೋಟಿಸ್​ ನೀಡಿದೆ. ಎಪಿಸಿಆರ್​ಡಿಎ ಕಮಿಷನರ್​ ಹೊರಡಿಸಿರುವ ಆದೇಶದ ಪ್ರತಿಯನ್ನು ಚಂದ್ರಬಾಬು ನಿವಾಸದ ಬಾಗಿಲಿಗೆ ಅಂಟಿಸಲಾಗಿದೆ.

ಈ ಹಿಂದೆ ಜೂನ್​ 27 ರಂದು ಮನೆಯ ಮಾಲಿಕರಿಗೆ ಶೋಕಾಸ್​ ನೋಟಿಸ್​ ನೀಡಿತ್ತು. ಚಂದ್ರಬಾಬು ನಾಯ್ಡು 2016ರಲ್ಲಿ ಹೈದರಾಬಾದ್​ನಿಂದ ಅಮರಾವತಿಗೆ ಮನೆ ಬದಲಿಸಿದ್ದರು. ಈ ವೇಳೆ ಕೃಷ್ಣಾ ನದಿ ತೀರದಲ್ಲಿ ಇದ್ದ ಮನೆಯನ್ನು ಲೀಸ್​ಗೆ ಪಡೆದುಕೊಂಡಿದ್ದರು.

ಜೂನ್​ 24 ರಂದು ತೆಲುಗು ದೇಶಂ ಪಕ್ಷದ ಚಂದ್ರ ಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಮತ್ತು ಪಕ್ಷದ ಚಟುವಟಿಕೆಗಳಿಗಾಗಿ ಬಳಸಿಕೊಳ್ಳಲು ನಿಯಮಬಾಹಿರವಾಗಿ ನಿರ್ಮಿಸಿದ್ದ ಪ್ರಜಾ ವೇದಿಕೆ ಕಟ್ಟಡವನ್ನು ಒಡೆದು ಹಾಕಲು ಆದೇಶ ನೀಡಲಾಗಿತ್ತು. ಅದರಂತೆ ಕಟ್ಟಡವನ್ನು ತೆರವುಗೊಳಿಸಲಾಗಿತ್ತು.

ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ನಿರ್ಮಿತವಾಗಿದ್ದ ‘ಪ್ರಜಾ ವೇದಿಕೆ’ ಸರ್ಕಾರಿ ಕಟ್ಟಡ ಧ್ವಂಸಕ್ಕೆ ಸಿಎಂ ಜಗನ್ ಮೋಹನ್‌ ರೆಡ್ಡಿ ಆದೇಶ

ನದಿ ತೀರದ ಮನೆ ಖಾಲಿ ಮಾಡುವಂತೆ ಚಂದ್ರಬಾಬು ನಾಯ್ಡು ಅವರಿಗೆ ನೋಟಿಸ್​ ನೀಡಿದ ಆಂಧ್ರ ಸರ್ಕಾರ

Leave a Reply

Your email address will not be published. Required fields are marked *