ಕಿಸ್​ಗೆ ಎ.ಪಿ.ಅರ್ಜುನ್​ ನಿರ್ದೇಶಕ-ನಿರ್ಮಾಪಕ

ಬೆಂಗಳೂರು: ಎ.ಪಿ. ಅರ್ಜುನ್ ನಿರ್ದೇಶನದ ‘ಕಿಸ್’ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಪೋಸ್ಟರ್​ಗಳ ಮೂಲಕ ಗಮನ ಸೆಳೆದಿದ್ದ ಚಿತ್ರ, ಹಾಡುಗಳಿಂದಲೂ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿತ್ತು. ಇನ್ನೇನು ಶೀಘ್ರದಲ್ಲೇ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಸುದ್ದಿಯೂ ಇದೆ. ಹೀಗಿರುವಾಗಲೇ ‘ಕಿಸ್’ ತಂಡದಿಂದ ಹೊಸ ಸುದ್ದಿಯೊಂದು ತೇಲಿಬಂದಿದೆ. ನಿರ್ವಪಕ ರವಿಕುಮಾರ್ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ! ಹಾಗಂತ ಇಬ್ಬರ ನಡುವೆ ಯಾವುದೇ ಮನಸ್ತಾಪ ಆಗಿಲ್ಲ. ಬದಲಿಗೆ ನಿರ್ದೇಶಕ ಅರ್ಜುನ್ ಜತೆ ಚಿತ್ರದ ನಿರ್ವಪಕ ರವಿಕುಮಾರ್ ಚರ್ಚೆ ನಡೆಸಿ, ಬಳಿಕ ಅವರಿಂದ ಸಮ್ಮತಿ ಪಡೆದುಕೊಂಡೇ ನಿರ್ವಪಕ ಸ್ಥಾನದಿಂದ ಹಿಂದೆ ಸರಿದಿದ್ದಾರಂತೆ. ಮತ್ತೆ ಈಗ ಸಿನಿಮಾ ಬಿಡುಗಡೆಯ ಹೊಣೆ ಮತ್ತು ನಿರ್ವಪಕರು ಯಾರು? ನಿರ್ದೇಶಕ ಎ.ಪಿ. ಅರ್ಜುನ್ ಅವರೇ ನಿರ್ವಪಕನ ಜವಾಬ್ದಾರಿಯನ್ನೂ ಹೊರಲಿದ್ದಾರೆ ಎನ್ನಲಾಗುತ್ತಿದೆ! ಹೌದು, ನಿರ್ದೇಶನದ ಜತೆಗೆ ಮೊದಲ ಬಾರಿಗೆ ‘ಕಿಸ್’ ಚಿತ್ರದ ಮೂಲಕ ನಿರ್ವಪಕರಾಗಿಯೂ ಅರ್ಜುನ್ ಬಡ್ತಿ ಪಡೆಯುತ್ತಿದ್ದಾರೆ. ಎ.ಪಿ. ಅರ್ಜುನ್ ಫಿಲಂಸ್ ಬ್ಯಾನರ್​ನಡಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಅಂದಹಾಗೆ, ಈ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದಾರೆ ನಟ ವಿರಾಟ್ ಮತ್ತು ನಟಿ ಶ್ರೀಲೀಲಾ. ಇನ್ನು ಕೆಲ ದಿನಗಳಲ್ಲಿ ‘ಕಿಸ್’ ಸೆನ್ಸಾರ್ ಬೋರ್ಡ್ ಕದ ತಟ್ಟಲಿದ್ದು, ಬಳಿಕ ಜೂನ್ ಅಥವಾ ಜುಲೈ ಮೊದಲ ವಾರದಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಅರ್ಜುನ್ ಪ್ಲಾ್ಯನ್. ವಿ ಹರಿಕೃಷ್ಣ ಸಂಗೀತ ನೀಡಿದ್ದು, ಎ.ಜೆ. ಶೆಟ್ಟಿ ಛಾಯಾಗ್ರಹಣ ನಿಭಾಯಿಸಿದ್ದಾರೆ.

Leave a Reply

Your email address will not be published. Required fields are marked *