ಕೊಲ್ಲಿ ರಾಷ್ಟ್ರಗಳಲ್ಲಿನ ಕರಾವಳಿಗರಲ್ಲಿ ಆತಂಕ

blank

ಮಂಗಳೂರು: ಅಮೆರಿಕಾ – ಇರಾನ್ ನಡುವಿನ ಕಲಹ ಕೊಲ್ಲಿ ರಾಷ್ಟ್ರಗಳಲ್ಲಿ ವಾಸಿಸುವ ಕರಾವಳಿ ಮೂಲದ ಭಾರತೀಯರಲ್ಲೂ ಕೂಡ ಆತಂಕ ಮೂಡಿಸಿದೆ.
ಜಾಗತಿಕ ಮಟ್ಟದಲ್ಲಿ ದೊಡ್ಡಣ್ಣನೆಂದೇ ಗುರುತಿಸಿಕೊಂಡಿರುವ ಅಮೆರಿಕವನ್ನು ನೇರ ಯುದ್ಧದಲ್ಲಿ ಗೆಲ್ಲುವ ಸಾಮರ್ಥ್ಯ ಹೊಂದಿರದ ಇರಾನ್, ಅಮೆರಿಕಕ್ಕೆ ಯುದ್ಧ ನೆಲೆಗಳನ್ನು ಸ್ಥಾಪಿಸಲು ಅವಕಾಶ ನೀಡಿರುವ ಹತ್ತಿರದ ಇರಾಕ್ ಮತ್ತು ಕುವೈತ್ ರಾಷ್ಟ್ರಗಳ ಮೇಲೆ ಸೇಡು ತೀರಿಸಿಕೊಳ್ಳುವ ಮುನ್ಸೂಚನೆ ನೀಡಿರುವುದೇ ಇಲ್ಲಿನ ಕರಾವಳಿ ನಾಗರಿಕರ ಭೀತಿಗೆ ಕಾರಣವಾಗಿದೆ.
ಈ ಕಲಹ ಮುಂದುವರಿಯುತ್ತದೋ ಅಥವಾ ಇಲ್ಲಿಗೆ ಮುಗಿಯುತ್ತದೋ ಎನ್ನುವುದನ್ನು ಯಾರೂ ಕೂಡಾ ನಿರೀಕ್ಷೆ ಮಾಡಲು ಸಾಧ್ಯವಿಲ್ಲದಾಗಿದೆ. ಪ್ರತಿದಿನವೂ ಉಭಯ ರಾಷ್ಟ್ರಗಳ ನಡುವಿನ ಎಚ್ಚರಿಕೆಯ ಮಾತುಗಳಂತೂ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಭಣಗೊಳಿಸಿರುವುದಂತೂ ನಿಜ. 

ಈ ಬಿಗು ಪರಿಸ್ಥಿತಿಯಲ್ಲಿ ಸದ್ಯಕ್ಕೆ ಯಾರೂ ಭಾರತಕ್ಕೆ ಹಿಂತಿರುಗುವ ಮನಸ್ಸು ಮಾಡಿಲ್ಲವಾದರೂ ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿನ ಭಾರತೀಯರು ತಮ್ಮಲ್ಲಿದ್ದ ಹಣದ ಹೆಚ್ಚಿನ ಭಾಗವನ್ನು ಅಮೆರಿಕದ ಡಾಲರ್‌ಗಳಿಗೆ ಪರಿವರ್ತಿಸಿಕೊಳ್ಳುತ್ತಿದ್ದಾರೆ ಎಂದು ಕುವೈತ್‌ನ ಅನಿವಾಸಿ ಉದ್ಯಮಿಯೋರ್ವರು ‘ವಿಜಯವಾಣಿ’ಗೆ ತಿಳಿಸಿದ್ದಾರೆ. ತುರ್ತು ಸಂದರ್ಭದಲ್ಲಿ ದಿನಾರ್ ಉಪಯೋಗಕ್ಕೆ ಬೀಳುವುದಿಲ್ಲ. ಡಾಲರ್‌ಗೆ ಪರಿವರ್ತಿಸಿಕೊಂಡರೆ ಅಂತಹ ಯಾವುದೇ ಹೆದರಿಕೆ ಇರುವುದಿಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಬಿಕ್ಕಟ್ಟು ಸೃಷ್ಟಿಯಾಗುವ ಸಂದರ್ಭದಲ್ಲೇ ಅಮೆರಿಕ ತನ್ನ ಸೇನೆಯ 3,500ವರೆಗಿನ ದಳಗಳನ್ನು ಕುವೈತ್‌ನಲ್ಲಿ ನಿಯೋಜಿಸಿದೆ ಎಂದು ಇರಾನ್ ಆರೋಪಿಸಿರುವುದು ಮತ್ತು ತಮಗೆ ಆಗಿರುವ ಅನ್ಯಾಯಕ್ಕೆ ಪ್ರತೀಕಾರ ತೀರಿಸದೆ ಬಿಡುವುದಿಲ್ಲ ಎಂದು ಅದು ಶಪಥ ಮಾಡಿರುವುದು ಜನರ ಅತಂಕ ಹೆಚ್ಚಾಗುವಂತೆ ಮಾಡಿದೆ. ಇರಾನ್‌ನ ತೈಲ, ಅನಿಲ ಕಂಪನಿ ಹಾಗೂ ವಿದ್ಯುತ್ ಉತ್ಪಾದನಾ ಘಟಕಗಳ ನಿರ್ವಹಣಾ ವಿಭಾಗದಲ್ಲಿ ಉಡುಪಿ , ಮಂಗಳೂರು ಹಾಗೂ ಕಾಸರಗೋಡು ಕರಾವಳಿಯ ಹೆಚ್ಚಿನ ಜನರು ಉದ್ಯೋಗದಲ್ಲಿದ್ದಾರೆ. ಸದ್ಯ ಅವರು ಯಾವುದೇ ಅಪಾಯದಲ್ಲಿಲ್ಲ ಎಂದು ಸರಕಾರಿ ಮೂಲಗಳು ಹೇಳಿವೆ.

ರಾಸಾಯನಿಕ ವಸ್ತುಗಳ ಕೊರತೆ: ಇರಾನ್‌ನಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಅಮೆರಿಕ ಮಿತ್ರ ರಾಷ್ಟ್ರಗಳ ಗುಂಪಿನಲ್ಲಿ ಗುರುತಿಸಿಕೊಂಡಿರುವ ಭಾರತದ ಜನಜೀವನದ ಮೇಲೆಯೂ ಪರಿಣಾಮ ಬೀರುವ ಸೂಚನೆ ಕಂಡುಬಂದಿದೆ.

ಕಚ್ಚಾ ತೈಲದ ಜತೆ ಹಲವು ಪ್ರಮುಖ ರಾಸಾಯನಿಕ ವಸ್ತುಗಳಿಗೆ ಭಾರತ ಇರಾನ್ ದೇಶವನ್ನೇ ಅವಲಂಬಿಸಿದೆ. ವಿಶ್ವದಲ್ಲಿ ಮೆಥನಾಲ್ ಅಥವಾ ಮಿಥಾಯಿಲ್ ಆಲ್ಕೋಹಾಲನ್ನು ಇರಾನ್ ಮತ್ತು ಸೌದಿ ಅರೇಬಿಯಾ ಮಾತ್ರ ಉತ್ಪಾದನೆ ಮಾಡುತ್ತಿದೆ. ಸೌದಿಯಾದ ಮೆಥನಾಲ್ ದುಬಾರಿಯಾಗಿರುವ ಕಾರಣ ಭಾರತ ಈ ವಸ್ತುಗಳಿಗೆ ಇರಾನ್‌ನ್ನು ಅವಲಂಬಿಸಿದೆ. ಪ್ಲೈವುಡ್ ಕಂಪನಿಗಳಲ್ಲಿ ರೆಸಿನ್ ಮಾಡಲು ಬಳಸುವ ಮೆಥನಾಲ್‌ಗೆ 17 ರೂ. ಇದ್ದದ್ದು, ಸುಲೇಮಾನ್ ಹತ್ಯೆಯ ನಂತರದ ಎರಡೇ ದಿನದಲ್ಲಿ 25 ರೂ.ಗೆ ಏರಿಕೆಯಾಗಿದೆ.
ಮನುಷ್ಯನ ಮೃತದೇಹ ಕೊಳೆಯದಂತೆ ತಡೆಯಲು ಬಳಸುವ ಫಾರ್ಮಲಿನ್ ಉತ್ಪಾದನೆಯಲ್ಲಿ ಮೆಥನಾಲ್ ರಾಸಾಯನಿಕ ಬಳಸಲಾಗುತ್ತಿದೆ. ಟೆಕ್ಸ್‌ಟೈಲ್, ಟಯರ್, ಪೇಪರ್ ಮುಂತಾದ ಉತ್ಪಾದನೆಯಲ್ಲೂ ಮೆಥನಾಲ್ ಬಳಕೆಯಲ್ಲಿದೆ. ಹಾಗಾಗಿ ಈ ಉದ್ಯಮಗಳ ಮೇಲೆ ಇದು ನೇರ ಪರಿಣಾಮವನ್ನು ಬೀರಿದೆ.

ಇಂಥ ವಿಚಾರಗಳನ್ನು ವಿದೇಶಾಂಗ ಇಲಾಖೆ ನಿರ್ವಹಣೆ ಮಾಡುತ್ತದೆ. ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಯಾವುದೇ ಸಮಸ್ಯೆಯಾಗಿರುವ ಕುರಿತು ಗಮನಕ್ಕೆ ಬಂದಿಲ್ಲ. ನಿರ್ದಿಷ್ಟ ಪ್ರಕರಣಗಳಿದ್ದರೆ ಸರ್ಕಾರಕ್ಕೆ ಗಮನಕ್ಕೆ ತರಲಾಗುವುದು.
– ಸಿಂಧೂ ಬಿ. ರೂಪೇಶ್, ದ.ಕ. ಜಿಲ್ಲಾಧಿಕಾರಿ

Share This Article

ತಣ್ಣೀರಿಗೆ ಬಿಸಿ ನೀರು ಬೆರೆಸಿ ಕುಡಿದ್ರೆ ಏನಾಗುತ್ತೆ? ಈ ವಿಚಾರ ನಿಮ್ಗೆ ತಿಳಿದಿರಲೇಬೇಕು ಇಲ್ಲದಿದ್ರೆ ಅಪಾಯ ಫಿಕ್ಸ್! Water

Water : ತಣ್ಣೀರಿಗೆ ಬಿಸಿ ನೀರು ಬೆರೆಸಿ ಕುಡಿಯುವ ಅಭ್ಯಾಸ ನಿಮಗಿದೆಯೇ? ಹಾಗಾದರೆ ನೀವು ಈ…

Banana Peel : ನೀವೂ ಬಾಳೆಹಣ್ಣು ತಿಂದ ನಂತರ ಸಿಪ್ಪೆ ಎಸೆಯುತ್ತೀರಾ? ಇದನ್ನು ಈ ರೀತಿ ಬಳಸಿ ಬಿಡಿ..

 ಬೆಂಗಳೂರು: ( Banana Peel ) ಸೊಳ್ಳೆಗಳು ರಾತ್ರಿ ನಿದ್ರೆಗೆ ಭಂಗ ತರುವುದಲ್ಲದೆ ನಾನಾ ರೋಗಗಳಿಗೆ…

ಒಬ್ಬ ವ್ಯಕ್ತಿ ಸತ್ತ ನಂತರ ಏನಾಗುತ್ತದೆ? ನರ್ಸ್​ ಹೇಳಿದ ಭಯಾನಕ ಸಂಗತಿ ವೈರಲ್​ | Death

Death : ಒಬ್ಬ ವ್ಯಕ್ತಿ ಸತ್ತ ನಂತರ ದೇಹದಲ್ಲಿ ಏನಾಗುತ್ತದೆ ಎಂಬ ಮಾಹಿತಿಯನ್ನು ಅಮೆರಿಕ ಮೂಲದ…