ಪತ್ನಿ ಅನುಷ್ಕಾ ಫೋಟೊ ವೈರಲ್​​ ಮಾಡಿದ ನೆಟ್ಟಿಗರ ವಿರುದ್ಧ ವಿರಾಟ್​​ ಕೊಹ್ಲಿ ಆಕ್ರೋಶ

ಮ್ಯಾಂಚೆಸ್ಟರ್​: ವಿಶ್ವಕಪ್​ನ ಸೆಮಿಫೈನಲ್​ನಲ್ಲಿ ಭಾರತ ತಂಡ ನ್ಯೂಜಿಲೆಂಡ್​ ಎದುರು 18 ರನ್​ಗಳಿಂದ ಸೋಲನುಭವಿಸಿ ಟೂರ್ನಿಯಿಂದ ಔಟ್​​ ಆಗಿತ್ತು. ಪಂದ್ಯದ ಬಳಿಕ ವಿರಾಟ್​​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಟ್ರೋಲ್ ​​ಮಾಡಿದ್ದಾರೆ.

ನೆಟ್ಟಿಗರ ಈ ನಡೆಯಿಂದ ನಾಯಕ ವಿರಾಟ್​ ಕೊಹ್ಲಿ ತಮ್ಮ ಅಧಿಕೃತ ಟ್ವಿಟರ್​ನಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ ಆರಂಭಿಕರಾದ ರೋಹಿತ್​ ಶರ್ಮಾ, ಕೆ.ಎಲ್​​ ರಾಹುಲ್​​ ಹಾಗೂ ವಿರಾಟ್​​ ಕೊಹ್ಲಿ ಅವರು ತಲಾ ಒಂದೊಂದು ರನ್​​ ಗಳಿಸುವ ಮೂಲಕ ಔಟಾದರು. ಈ ಮೂಲಕ ತಂಡ ಆರಂಭದಲ್ಲಿಯೇ ಆಘಾತಕ್ಕೊಳಗಾಯಿತು.

ಸೋತ ಟೀಂ ಇಂಡಿಯಾದ ವಿರುದ್ಧ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯಲ್ಲಿ ಟ್ರೋಲ್​ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದರು.

ಕೊಹ್ಲಿ ಅವರು ಕ್ರೀಡಾಂಗಣದಲ್ಲಿ ಮಲಗಿರುವ ರೀತಿ ಹಾಗೂ ಅವರ ಪಕ್ಕದಲ್ಲಿ ಅನುಷ್ಕಾ ಶರ್ಮಾ ಭಾವೋದ್ರೇಕವಾಗಿ ಕುಳಿತುಕೊಂಡಿರುವ ಫೋಟೋವನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಟ್ಟಿದ್ದಾರೆ.

ಕೊಹ್ಲಿ ಅವರ ಕಳಪೆ ಪ್ರದರ್ಶನದಿಂದ ಅನುಷ್ಕಾ ಈ ರೀತಿ ಕುಳಿತುಕೊಂಡಿದ್ದಾರೆ ಎಂದು ನೆಟ್ಟಿಗರು ಟ್ವೀಟ್​​ ಮಾಡಿದ್ದಾರೆ. ಈ ರೀತಿ ಅನುಷ್ಕಾ ಅವರ ಫೋಟೊ ಬಳಸಿ ಟ್ರೋಲ್​ ಮಾಡಿರುವುದು ಇದು ಮೊದಲಲ್ಲ. 2015ನೇ ವಿಶ್ವಕಪ್​​​ನ ಸೆಮಿಫೈನಲ್​​​​ನಲ್ಲಿಯೂ ಭಾರತ-ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು. ಈ ವೇಳೆ ನೆಟ್ಟಿಗರು ಅನುಷ್ಕಾ ಅವರ ಫೋಟೊ ಬಳಸಿ ಟ್ರೋಲ್​​ ಮಾಡಿದ್ದರು.

ಈ ಟ್ರೋಲ್​​ಗಳ ವಿರುದ್ಧ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಈ ರೀತಿ ಅನುಷ್ಕಾ ಶರ್ಮಾ ಫೋಟೊ ಬಳಸಿ ಟ್ರೋಲ್​​ ಮಾಡುವವರಿಗೆ ನಾಚಿಕೆಯಾಗಬೇಕು. ಅನುಷ್ಕಾ ನನಗೆ ಯಾವಗಲೂ ಸಕಾರಾತ್ಮಕ ರೀತಿಯಲ್ಲಿವೇ ಪ್ರೋತ್ಸಾಹ ನೀಡುತ್ತಾರೆ. ಅವರ ಬಗ್ಗೆ ಈ ರೀತಿ ಟ್ರೋಲ್​ ಮಾಡುವುದು ಒಳ್ಳೆಯದಲ್ಲ’ ಎಂದು ಅವರು ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *