ವಿರುಷ್ಕಾ ದಂಪತಿಗೆ ಕರ್ವಾ ಚೌತ್​ ಸಂಭ್ರಮ: ಪ್ರೀತಿ ತುಂಬಿದ ಸಾಲಿನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಶೇರ್​

ಮುಂಬೈ: ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಕರ್ವಾ ಚೌತ್​ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಕೊಹ್ಲಿ, ಅನುಷ್ಕಾ ಹಬ್ಬ ಆಚರಣೆಯ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಜತೆಯಾಗಿ ಉಪವಾಸ ವ್ರತ ಕೈಗೊಂಡು, ಪೂಜೆ ನಡೆಸಿ ರಾತ್ರಿ ಒಟ್ಟಾಗಿ ಚಂದ್ರನನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾರೆ.

ಕರ್ವಾ ಚೌತ್​ ಹಿಂದುಗಳ ಹಬ್ಬ. ಕಾರ್ತಿಕ ಮಾಸದ ಪೂರ್ಣಿಮೆಯ ನಾಲ್ಕನೇ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಭಾರತದ ಹಲವು ಭಾಗಗಳಲ್ಲಿ ಈ ಸಂಪ್ರದಾಯವಿದ್ದು, ಅಂದು ಮದುವೆಯಾದ ಮಹಿಳೆಯರು ಉಪವಾಸ ವ್ರತ ಕೈಗೊಂಡು ತಮ್ಮ ಗಂಡನ ಆಯಸ್ಸು ವೃದ್ಧಿ, ಒಳಿತಿಗಾಗಿ ಪೂಜೆ ಮಾಡುತ್ತಾರೆ.

ನವ ವಧು, ವರರಂತೆ ಅಲಂಕರಿಸಿಕೊಂಡು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡ ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಹ್ಲಿ ತಮ್ಮ  ಟ್ವಿಟರ್​, ಇನ್​ಸ್ಟಾಗ್ರಾಂಗಳಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದು ಅದಕ್ಕೆ ಪ್ರೀತಿ ತುಂಬಿದ ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. ವಿರಾಟ್​ ಕೊಹ್ಲಿ ಪತ್ನಿ ಅನುಷ್ಕಾ ಜತೆಗಿನ ಫೋಟೋದೊಂದಿಗೆ, ನನ್ನ ಜೀವನ, ನನ್ನ ಜಗತ್ತು ಎಂದು ಬರೆದುಕೊಂಡಿದ್ದರೆ, ಅನುಷ್ಕಾ ಶರ್ಮಾ ಕೂಡ ಪತಿಯೊಂದಿಗಿನ ಚಿತ್ರದೊಂದಿಗೆ ನನ್ನ ಚಂದ್ರ, ನನ್ನ ಸೂರ್ಯ, ನನ್ನ ನಕ್ಷತ್ರ, ನನ್ನ ಸರ್ವಸ್ವ ಎಂದು ಕ್ಯಾಪ್ಷನ್​ ಬರೆದು, ಎಲ್ಲರಿಗೂ ಹ್ಯಾಪಿ ಕರ್ವಾ ಚೌತ್​ ಎಂದು ಶುಭ ಹಾರೈಸಿದ್ದಾರೆ.

 

View this post on Instagram

My life. My universe. ❤❤ Karvachauth ❤👫

A post shared by Virat Kohli (@virat.kohli) on