ಅನುಷ್ಕಾಗೆ ಬ್ರೇಕ್ ಬೇಕಂತೆ!

ಕಳೆದ ವರ್ಷ ತೆರೆಕಂಡ ‘ಜೀರೋ’ ಸಿನಿಮಾದಲ್ಲಿ ನಟಿಸಿದ್ದನ್ನು ಬಿಟ್ಟರೆ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಈವರೆಗೂ ಹೊಸ ಸಿನಿಮಾಗಳಿಗೆ ಸಹಿ ಹಾಕಿಲ್ಲ. ಹಾಗಾದರೆ, ‘ಜೀರೋ’ ಸಿನಿಮಾ ಸೋತಿದ್ದಕ್ಕೆ ಅನುಷ್ಕಾ ನಟನೆಯನ್ನೇ ಕೈಬಿಟ್ಟರಾ? ಬಾಲಿವುಡ್​ಗೆ ವಿದಾಯ ಹೇಳಿದ್ರಾ? ಇಂಥ ಸುದ್ದಿಗಳು ಇತ್ತೀಚೆಗಷ್ಟೇ ಹರಿದಾಡಿದ್ದವು. ಹೀಗಿರುವಾಗ ಸಿನಿಮಾ ಯಾಕೆ ಒಪ್ಪಿಕೊಂಡಿಲ್ಲ ಎಂಬ ಬಗ್ಗೆ ಸ್ವತಃ ಅನುಷ್ಕಾ ಹೇಳಿಕೊಂಡಿದ್ದಾರೆ.

‘ಒಬ್ಬ ನಟಿಯಾಗಿ ಈಗಾಗಲೇ ವೃತ್ತಿಜೀವನದಲ್ಲಿ ಒಂದು ಹಂತವನ್ನು ತಲುಪಿದ್ದೇನೆ. ಹಾಗಂತ ಆ ಸಮಯವನ್ನು ಭರ್ತಿ ಮಾಡಲು ನಾನು ಬರೀ ಸಿನಿಮಾ ಮಾಡಲೇಬೇಕು ಅಂತೇನಿಲ್ಲ’ ಎಂದಿದ್ದಾರೆ. ಕಳೆದ ವರ್ಷ ‘ಸಂಜು’, ‘ಪರಿ’, ‘ಸುಯಿ ಧಾಗಾ’, ‘ಜೀರೋ’ ಸಿನಿಮಾಗಳಲ್ಲಿ ಅನುಷ್ಕಾ ನಟಿಸಿದ್ದರು. ಹಾಗಾಗಿ ಕೊಂಚ ಬಿಡುವು ಪಡೆದುಕೊಳ್ಳುವುದಕ್ಕೆ ಬೇರಾವ ಸಿನಿಮಾವನ್ನೂ ಅವರು ಒಪ್ಪಿಕೊಂಡಿಲ್ಲವಂತೆ. ‘ಕಳೆದ ಮೂರು ವರ್ಷ ನಾನು ತುಂಬ ಒತ್ತಡದಲ್ಲಿದ್ದೆ. ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದೆ. ಎಲ್ಲ ಪಾತ್ರಗಳಿಗೂ ಪೂರ್ವ ತಯಾರಿಯ ಅಗತ್ಯವಿತ್ತು. ಬಳಿಕ ಒಂದೇ ವರ್ಷದಲ್ಲಿ ನನ್ನ ನಟನೆಯ ನಾಲ್ಕು ಸಿನಿಮಾಗಳು ತೆರೆಕಂಡವು’ ಎನ್ನುವ ಅನುಷ್ಕಾ, ನಿರ್ವಪಕಿಯಾಗಿಯೂ ಕೆಲವು ಶೋ ಮತ್ತು ಸಿನಿಮಾಗಳನ್ನು ನಿರ್ಮಾಣ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಆಸೆಯೂ ಅವರಿಗಿದೆಯಂತೆ. ‘ಇಲ್ಲಿಯವರೆಗೂ ನಾನು ಮಾಡಿದ ಕೆಲಸ ನನಗೆ ತೃಪ್ತಿ ತಂದಿದೆ. ನಟನೆಯ ಜತೆಗೆ ನಿರ್ವಣದತ್ತಲೂ ಗಮನಹರಿಸಿದ್ದೇನೆ. ಒಳ್ಳೊಳ್ಳೆಯ ಪಾತ್ರಗಳಿಗೂ ಕಾಯುತ್ತಿದ್ದೇನೆ’ ಎಂದಿದ್ದಾರೆ. ಈ ಮೂಲಕ ಚಿತ್ರರಂಗದಲ್ಲೇ ಮುಂದುವರಿಯುವುದಾಗಿ ಹೇಳಿದ್ದಾರೆ. –ಏಜೆನ್ಸೀಸ್

Leave a Reply

Your email address will not be published. Required fields are marked *