PHOTOS| ರೆಟ್ರೋ ಶೈಲಿ ಬಿಕಿನಿಯಲ್ಲಿ ಅನುಷ್ಕಾ ಶರ್ಮಾ ಪೋಸ್​: ಕೆರಿಬಿಯನ್​ ನಾಡಲ್ಲಿ ವಿರಾಟ್​ ಪತ್ನಿಯ ಬೋಲ್ಡ್​ ಅವತಾರ!

ನವದೆಹಲಿ: ಬಾಲಿವುಡ್​ನಿಂದ ಕೊಂಚ ವಿರಾಮ ಪಡೆದುಕೊಂಡಿರುವ ಅನುಷ್ಕಾ ಶರ್ಮಾ ಪತಿ ವಿರಾಟ್​ ಕೊಹ್ಲಿ ಜತೆ ವೆಸ್ಟ್​ಇಂಡೀಸ್​ ಪ್ರವಾಸದಲ್ಲಿದ್ದಾರೆ. ಈ ಮಧ್ಯೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಅನುಷ್ಕಾ ಹಂಚಿಕೊಂಡಿರುವ ಬಿಕಿನಿ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕಿತ್ತಳೆ ಬಣ್ಣದ ರೆಟ್ರೋ ಶೈಲಿಯ ಬಿಕಿನಿ ತೊಟ್ಟು, ಸನ್​ ಗ್ಲಾಸ್​ ಧರಿಸಿ ಮಂಡಿಗಳ ಮೇಲೆ ಕೆರಿಬಿಯನ್​ ಬೀಚ್​ ಒಂದರಲ್ಲಿ ನಗುತ್ತಾ ಕುಳಿತು ಕ್ಯಾಮರಾಗೆ ಪೋಸ್​ ನೀಡಿರುವ ಫೋಟೊ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಫೋಟೊಗೆ ಅದ್ಭುತವಾದ ಸೂರ್ಯಸ್ನಾನ ಮಾಡಿ ಪುಳಕಿತಳಾದೆ ಎಂಬ ಅಡಿಬರಹ ನೀಡಿದ್ದಾರೆ.

ನಾಲ್ಕು ಗಂಟೆಗಳ ಹಿಂದಷ್ಟೇ ಅನುಷ್ಕಾ ಈ ಫೋಟೊವನ್ನು ಅಪ್​ಲೋಡ್​ ಮಾಡಿದ್ದು, ಇದುವರೆಗೂ 12 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಆರು ಸಾವಿರಕ್ಕೂ ಹೆಚ್ಚು ಮಂದಿ ಅನುಷ್ಕಾರ ಬ್ಯೂಟಿಗೆ ಫಿದಾ ಆಗಿ ಫೋಟೊಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಪತಿ ವಿರಾಟ್​ ಮೊದಲಿಗರಾಗಿದ್ದಾರೆ ಎಂಬುದು ವಿಶೇಷ.

ಸದ್ಯ ವೆಸ್ಟ್​ಇಂಡೀಸ್​ ಪ್ರವಾಸದಲ್ಲಿರುವ ಭಾರತ ಟಿ20 ಹಾಗೂ ಏಕದಿನ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ. ಟೆಸ್ಟ್​ ಸರಣಿಯನ್ನು ವಶಪಡಿಸಿಕೊಳ್ಳಲು ಟೀಂ ಇಂಡಿಯಾ ಕಠಿಣ ಅಭ್ಯಾಸ ನಡೆಸುತ್ತಿದೆ. ಬಿಡುವಿನ ಸಮಯದಲ್ಲಿ ನಾಯಕ ವಿರಾಟ್​ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾರೊಂದಿಗೆ ವಿಂಡೀಸ್​ ಸುಂದರ ತಾಣಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​) 

View this post on Instagram

Sun kissed & blessed 🧡⛱️

A post shared by AnushkaSharma1588 (@anushkasharma) on

View this post on Instagram

@filmfare

A post shared by AnushkaSharma1588 (@anushkasharma) on

View this post on Instagram

Seal the silly moments ❣️

A post shared by AnushkaSharma1588 (@anushkasharma) on

View this post on Instagram

Sun soaked and stoked ☀️💞 #throwback

A post shared by AnushkaSharma1588 (@anushkasharma) on

View this post on Instagram

Moving at the pace of nature … 💛👒🌞

A post shared by AnushkaSharma1588 (@anushkasharma) on

Leave a Reply

Your email address will not be published. Required fields are marked *