ಮುಂಬೈ: ಸ್ಟಾರ್ ದಂಪತಿ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ(Anushka Sharma and Virat Kohli) ಭಾನುವಾರ(ಜನವರಿ 12) ಮುಂಬೈನಿಂದ ಅಲಿಬಾಗ್‌ಗೆ ಪ್ರಯಾಣ ಬೆಳೆಸಿದರು. ಸಾರ್ವಜನಿಕವಾಗಿ ಕಾಣಿಸಿಕೊಂಡ ವಿರಾಟ್ ಮತ್ತು ಅನುಷ್ಕಾ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ವಿಡಿಯೋದಲ್ಲಿ ಗೇಟ್‌ವೇ ಆಫ್ ಇಂಡಿಯಾದಲ್ಲಿ ಇಬ್ಬರೂ ತಮ್ಮ ಕಾರಿನಿಂದ ಇಳಿಯುವುದನ್ನು ನೋಡಬಹುದು. ಅವರನ್ನು ಸ್ವಾಗತಿಸಿದವರನ್ನು ನೋಡಿ ವಿರಾಟ್ ಪ್ರೀತಿಯಿಂದ ಮುಗುಳ್ನಕ್ಕರು ಆದರೆ ಅನುಷ್ಕಾ ಯಾವುದೇ ಪ್ರತಿಕ್ರಿಯೆ ನೀಡದೆ ಮುಂದೆ ಸಾಗಿ, ಇಬ್ಬರೂ ಬೇಗನೆ ಒಳಗೆ ಹೋದರು.
ಮತ್ತೊಂದು ವಿಡಿಯೋದಲ್ಲಿ ವಿರಾಟ್ ಅನುಷ್ಕಾ ಭುಜದ ಮೇಲೆ ಕೈಯಿಟ್ಟು ಮಾತನಾಡುತ್ತಿದ್ದಾರೆ. ಅನುಷ್ಕಾ ಸೀರಿಯಸ್ ಆಗಿ ಹೇಳುತ್ತಿದ್ದಾರೆ. ಇಬ್ಬರೂ ಕ್ಯಾಮೆರಾಗೆ ಪೋಸ್ ಕೊಡಲು ನಿಲ್ಲಲಿಲ್ಲ. ಅಂದ್ಹಾಗೆ ಅವರು ಸುತ್ತಲಿದ್ದ ಜನರಲ್ಲಿ ಕೆಲವರು ದಂಪತಿ ನೋಡಿ ಖುಷಿಪಟ್ಟರೆ, ಮತ್ತೆ ಕೆಲವರು ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ.
ವಿರಾಟ್ ಮತ್ತು ಅನುಷ್ಕಾ ಇತ್ತೀಚೆಗೆ ತಮ್ಮ ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಅವರೊಂದಿಗೆ ಪ್ರೇಮಾನಂದ ಗೋವಿಂದ್ ಶರಣ್ ಮಹಾರಾಜ್ ಅವರನ್ನು ಭೇಟಿ ಮಾಡಲು ಬಂದಿದ್ದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಪ್ರೇಮಾನಂದ ಗೋವಿಂದ್ ಶರಣ್ ಮಹಾರಾಜ್ ಅವರೊಂದಿಗೆ ಮಾತನಾಡುತ್ತಿರುವುದನ್ನು ನೋಡಬಹುದು.
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 2013ರಲ್ಲಿ ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ ಭೇಟಿಯಾದರು, ವಿವಾಹದವರೆಗೂ ಅವರಿಬ್ಬರು ತಮ್ಮ ಸಂಬಂಧವನ್ನು ಗೌಪ್ಯವಾಗಿ ಇಟ್ಟಿದ್ದರು. 2017ರಲ್ಲಿ ಇಟಲಿಯಲ್ಲಿ ವೈವಾಹಿಕ ದಾಂಪತ್ಯಕ್ಕೆ ಕಾಲಿಟ್ಟ ಈ ದಂಪತಿಗೆ ವಾಮಿಕ ಮತತು ಅಕಾಯ್ ಎಂಬ ಇಬ್ಬರು ಮಕ್ಕಳಿದ್ದಾರೆ. ಅನುಷ್ಕಾ 2018ರ ‘ಝೀರೋ’ ಚಿತ್ರದ ನಂತರ ನಟನೆಯಿಂದ ವಿರಾಮ ತೆಗೆದುಕೊಂಡಿದ್ದಾರೆ.(ಏಜೆನ್ಸೀಸ್)