More

    ರಾಜ್ಯಮಟ್ಟಕ್ಕೆ ಅನುಗ್ರಹ ಕಾಲೇಜು ತಂಡ ಆಯ್ಕೆ

    ಕುಶಾಲನಗರ: ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಹಾಕಿ ಪಂದ್ಯಾಟದಲ್ಲಿ ಸೋಮವಾರಪೇಟೆ ತಾಲೂಕು ತಂಡ ವಿರಾಜಪೇಟೆ ತಂಡವನ್ನು 5-1 ಅಂತರದಲ್ಲಿ ಮಣಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

    ಮೊದಲು ನಡೆದ ಸೆಮಿಫೈನಲ್ ಪಂದ್ಯಾಟದಲ್ಲಿ ಸೋಮವಾರಪೇಟೆ ತಂಡ ಮಡಿಕೇರಿ ತಂಡವನ್ನು 9-0 ಅಂತದರಲ್ಲಿ ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿತ್ತು. ಸೋಮವಾರಪೇಟೆ ತಂಡವನ್ನು ಅನುಗ್ರಹ ಪದವಿ ಪೂರ್ವ ಕಾಲೇಜಿನ ಕುಶಾಲನಗರದ ವಿದ್ಯಾರ್ಥಿಗಳು ಪ್ರತಿನಿಧಿಸಿದರೆ, ವಿರಾಜಪೇಟೆ ತಂಡವನ್ನು ಕಾವೇರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆ ತಂಡ ಪ್ರತಿನಿಧಿಸಿತು.

    ವಿಜೇತ ಅನುಗ್ರಹ ಪದವಿ ಪೂರ್ವ ಕಾಲೇಜು ತಂಡ ನವೆಂಬರ್‌ನಲ್ಲಿ ಉಡುಪಿ ಜಿಲ್ಲೆಯ ನಿಟ್ಟೆ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ರಾಜ್ಯಮಟ್ಟದ ಪಂದ್ಯಾಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.

    ಅನುಗ್ರಹ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಪಂಡರಿನಾಥ್ ನಾಯ್ಡು, ಉಪನ್ಯಾಸಕ ನೌಶಾದ್, ದೈಹಿಕ ಶಿಕ್ಷಣ ಶಿಕ್ಷಕ ಅಭಿಷೇಕ್ ಇದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 23

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts