ಸಿಖ್​ ವಿರೋಧಿ ದಂಗೆಯ ಹತ್ಯೆ ಆರೋಪಿಗಳಿಬ್ಬರು ದೋಷಿಗಳೆಂದ ದೆಹಲಿ ನ್ಯಾಯಾಲಯ

ನವದೆಹಲಿ: ಸಿಖ್​ ವಿರೋಧಿ ಗಲಭೆಯಲ್ಲಿ ಇಬ್ಬರನ್ನು ಹತ್ಯೆಗೈದಿದ್ದ ಇಬ್ಬರು ಆರೋಪಿಗಳಿಗೆ ದೆಹಲಿ ನ್ಯಾಯಾಲಯ ದೋಷಿಗಳು ಎಂದು ತೀರ್ಪಿತ್ತಿದ್ದು, ಶಿಕ್ಷೆಯ ಪ್ರಮಾಣವನ್ನು ಇಂದು ನ್ಯಾಯಾಲಯ ಘೋಷಿಸಲಿದೆ.

1984ರಲ್ಲಿ ನಡೆದ ಸಿಖ್​ ವಿರೋಧಿ ದಂಗೆಯಲ್ಲಿ ಹಾರ್ದೀವ್​ ಸಿಂಗ್​ ಹಾಗೂ ಅವತಾರ್​ ಸಿಂಗ್​ ಎಂಬುವರನ್ನು ದಕ್ಷಿಣ ದೆಹಲಿಯ ಮಹಿಪಾಲ್​ಪುರ್​ ಎಂಬಲ್ಲಿ ನರೇಶ್​ ಶೇರಾವತ್​ ಮತ್ತು ಯಶ್​ಪಾಲ್ ಸಿಂಗ್​ ಸೇರಿ ಹತ್ಯೆಗೈದಿದ್ದರು. ಈ ಬಗ್ಗೆ ಹಾರ್ದೀವ್​ ಸಿಂಗ್​ ಸಹೋದರ ಸಾಂತೋಖ್​ ಸಿಂಗ್​ ಪ್ರಕರಣ ದಾಖಲಿಸಿದ್ದರು.

ಘಟನೆ ಕುರಿತು ಯಾವುದೇ ಸಾಕ್ಷ್ಯ ಇಲ್ಲದೆ 1994ರಲ್ಲಿ ದೆಹಲಿ ಪೊಲೀಸರು ಪ್ರಕರಣವನ್ನು ಮುಚ್ಚಿದ್ದರು. ಆದರೆ, ವಿಶೇಷ ತನಿಖಾ ದಳ ಮತ್ತೆ ಅದನ್ನು ಕೈಗೆತ್ತಿಕೊಂಡಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್​ ನ್ಯಾಯಾಧೀಶ ಅಜಯ್​ ಪಾಂಡೆ ಇಬ್ಬರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದ್ದಾರೆ. ಅಪರಾಧಿಗಳಿಗೆ ಜೀವಾವಧಿ ಜೈಲು ಅಥವಾ ಮರಣದಂಡನೆ ವಿಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.