1984ರ ಸಿಖ್​ ಹತ್ಯಾಕಾಂಡದ ಆರೋಪಿಗಳಲ್ಲಿ ಒಬ್ಬನಿಗೆ ಮರಣದಂಡನೆ, ಇನ್ನೊಬ್ಬನಿಗೆ ಜೀವಾವಧಿ ಜೈಲು

ನವದೆಹಲಿ: ಸಿಖ್​ ವಿರೋಧಿ ಗಲಭೆಯಲ್ಲಿ ಅಪರಾಧಿಗಳೆಂದು ಸಾಬೀತಾಗಿದ್ದ ಇಬ್ಬರಿಗೆ ದೆಹಲಿ ನ್ಯಾಯಾಲಯ ಇಂದು ಶಿಕ್ಷೆ ಪ್ರಕಟಿಸಿದೆ.

ಅಪರಾಧಿಗಳಾದ ನರೇಶ್​ ಸೆಹ್ರಾವತ್​ ಹಾಗೂ ಯಶ್​ಪಾಲ್​ ಸಿಂಗ್​ಗೆ ಶಿಕ್ಷೆ ವಿಧಿಸಲಾಗಿದೆ. ಅದರಲ್ಲಿ ಯಶ್​ಪಾಲ್ ಸಿಂಗ್​ಗೆ ಮರಣ ದಂಡನೆ ಮತ್ತು ನರೇಶ್​ಗೆ ಜೀವಾವಧಿ ಶಿಕ್ಷೆ ನೀಡಿ ಕೋರ್ಟ್​ ತೀರ್ಪು ನೀಡಿದೆ.

ಪ್ರಕರಣದ ಸರಿಯಾಗಿ ಸಾಕ್ಷಿ ಸಿಗದೆ ಪೊಲೀಸರು ತನಿಖೆಯನ್ನು ಕೈಬಿಟ್ಟಿದ್ದರು. ಅದಾದ ಬಳಿಕ 2015ರಲ್ಲಿ ವಿಶೇಷ ತನಿಖಾ ದಳ ಪ್ರಕರಣ ಕೈಗೆತ್ತಿಕೊಂಡಿತ್ತು. ಈ ಹತ್ಯೆ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಮರಣದಂಡನೆ ವಿಧಿಸಲಾಗಿದೆ.

1984ರಲ್ಲಿ ದಕ್ಷಿಣ ದೆಹಲಿಯ ಮಹಿಪಲ್ಪುರ್​ನಲ್ಲಿ ನಡೆದ ಸಿಖ್​ ಹತ್ಯಾಕಾಂಡದಲ್ಲಿ ಹಾರ್ದಿವ್​ ಸಿಂಗ್​ ಮತ್ತು ಅವತಾರ್​ ಸಿಂಗ್​ ಎಂಬುವರ ಹತ್ಯೆಗೆ ಸಂಬಂಧಪಟ್ಟಂತೆ ಇವರಿಬ್ಬರೂ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್​ ನ್ಯಾಯಾಧೀಶ ಅಜಯ್​ ಪಾಂಡೆ ಇಬ್ಬರು ಆರೋಪಿಗಳನ್ನು ದೋಷಿಗಳೆಂದು ಅಕ್ಟೋಬರ್​ 15ರಂದು ತೀರ್ಪು ನೀಡಿ ಶಿಕ್ಷೆ ಪ್ರಮಾಣ ಕಾಯ್ದಿರಿಸಿದ್ದರು.

ಸಿಖ್​ ವಿರೋಧಿ ದಂಗೆಯ ಹತ್ಯೆ ಆರೋಪಿಗಳಿಬ್ಬರು ದೋಷಿಗಳೆಂದ ದೆಹಲಿ ನ್ಯಾಯಾಲಯ