More

    ಅಂತರಂಗ| ನೈತಿಕ ಬದುಕಿಗೆ ಸಪ್ತ ಸೂತ್ರಗಳು

    ಅಂತರಂಗ| ನೈತಿಕ ಬದುಕಿಗೆ ಸಪ್ತ ಸೂತ್ರಗಳುಮನುಷ್ಯನ ನೈತಿಕತೆಯ ನೆಲೆಗಟ್ಟಿನ ಭದ್ರತೆಗೆ ಬಸವಣ್ಣನವರು ಸಪ್ತ ಸೂತ್ರಗಳನ್ನು ಬೋಧಿಸಿದ್ದಾರೆ. 1). ಕಳಬೇಡ: ಆವಶ್ಯಕತೆಯಗಳನ್ನು ಮೀರಿ ಸಂಗ್ರಹಿಸುವುದು ಕಳ್ಳತನವೇ ಆಗುತ್ತದೆ. ಈ ಸೂತ್ರವನ್ನು ರಾಷ್ಟ್ರದ ನಾಯಕರು, ಸಮಾಜದ ಮುಖಂಡರು, ರಾಜಕೀಯ ನೇತಾರರು ಅಳವಡಿಸಿಕೊಂಡರೆ ನಮ್ಮ ದೇಶ ಸಂಪದ್ಭರಿತವಾಗುತ್ತಿತ್ತು. 2). ಕೊಲಬೇಡ: ಅಸ್ತ್ರ-ಶಸ್ತ್ರಗಳಿಂದ ಇನ್ನೊಬ್ಬರನ್ನು ಕೊಲ್ಲುವುದಷ್ಟೇ ಅಲ್ಲ, ಮಾತು-ಮನಗಳಿಂದಲೂ ಇನ್ನೊಬ್ಬರನ್ನು ಹಿಂಸಿಸಬೇಡ ಎಂದರ್ಥ. ಮಾತು ಇನ್ನೊಬ್ಬರ ಹೃದಯಕ್ಕೆ ನೋವನ್ನು ಉಂಟುಮಾಡಬಾರದು. 3). ಹುಸಿಯ ನುಡಿಯಲು ಬೇಡ: ಸ್ವಪ್ರತಿಷ್ಠೆಗಾಗಿ ಸತ್ಯವನ್ನು ಮಚ್ಚಿಟ್ಟು ಸುಳ್ಳು ಹೇಳುವುದು ಈ ಕಾಲದಲ್ಲಿ ನೀರು ಕುಡಿದಷ್ಟು ಸರಳವಾಗಿಬಿಟ್ಟಿದೆ. ಸುಳ್ಳು ಮನುಷ್ಯನ ಅಂತಸ್ತನ್ನು ಕಳೆಯುತ್ತದೆ. ಸತ್ಯ ಎಂದಿಗೂ ತನ್ನ ಅಂತಸ್ಥವನ್ನು ಕಳೆದುಕೊಳ್ಳುವುದಿಲ್ಲ. 4). ಮುನಿಯಬೇಡ: ಕೋಪ ತನ್ನ ವೈರಿ, ಶಾಂತಿ ಪರರ ವೈರಿ. ಕೋಪದ ಪರಿಣಾಮ ದ್ವೇಷಕ್ಕೆ ತಿರುಗಿ ಎಂತೆಂತಹ ಘಟನೆಗಳು, ಮಹಾಭಾರತ-ರಾಮಾಯಣದಲ್ಲಿ ನಡೆದುಹೋಗಿವೆ, ಇಂದು ನಡೆಯುತ್ತಿವೆ. ಕೋಪವಂಟದ ಶಾಂತಿಯಿಂದ ಮಹಾತ್ಮರು ಬುದ್ಧ, ಬಸವ, ಮಹಾವೀರ ಏಸು ಮೊದಲಾದವರು ಶಾಂತಿಯನ್ನು ಸಾಧಿಸಿ ಜಗತ್ತಿಗೇ ಶಾಂತಿಯನ್ನು ಬೋಧಿಸಿದರು. 5). ಅನ್ಯರಿಗೆ ಅಸಹ್ಯಪಡಬೇಡ: ಇತರರನ್ನು ಕಂಡು ಅಸಹ್ಯಪಡಬಾರದು. ಪ್ರತಿಯೊಬ್ಬರ ದೈಹಿಕ ರೂಪ-ಆಕಾರ-ಬಣ್ಣಗಳು, ಇಷ್ಟಾನಿಷ್ಟಗಳೆಲ್ಲ ಭಿನ್ನಭಿನ್ನವಾಗಿರುತ್ತವೆ. ನಮಗಿಷ್ಟವಿಲ್ಲದ ರೂಪ-ಆಕಾರ-ಬಣ್ಣಗಳನ್ನು ಕಂಡು ಅಸಹ್ಯಪಡಬಾರದು. 6). ತನ್ನ ಬಣ್ಣಿಸಬೇಡ: ತನ್ನ ಹೊಗಳಿಕೆಗಾಗಿ ಕೆಲಸ ಮಾಡುವುದು ಯೋಗ್ಯವಲ್ಲ. ಕರ್ತವ್ಯದ ದೃಷ್ಟಿಯಿಂದ ಕೆಲಸ ಮಾಡಬೇಕು. ಜನರ ಹೊಗಳಿಕೆಯನ್ನು ಅವಲಂಬಿಸಬಾರದು. ಯಾರೋ ಹೊಗಳಿದರೆಂದು ನಾವೇನೂ ದೊಡ್ಡವರಾಗುವುದಿಲ್ಲ. 7). ಇದಿರ ಹಳಿಯಲು ಬೇಡ: ಮನುಷ್ಯ ತಪ್ಪು ಮಾಡುವುದು ಸಹಜ. ಆದರೆ ಆ ತಪ್ಪನ್ನು ಕ್ಷಮಿಸಿ ಪ್ರೀತಿಯಿಂದ ಸಲಹೆ ಸೂಚನೆ ನೀಡಬೇಕು. ಸತ್ಯವನ್ನೇ ಹೇಳಿದರೂ ಪ್ರೀತಿಯಿಂದ ಹೇಳಬೇಕೇ ಹೊರತು ಕಠೋರವಾಗಿ ಹೇಳಬಾರದು. ಹೀಗೆ ಸಪ್ತ ಸೂತ್ರಗಳನ್ನು ಅಳವಡಿಸಿಕೊಂಡು ಬಾಳನ್ನು ಸಾರ್ಥಕಪಡಿಸೋಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts