ಬೆಳಗಾವಿ: ಅಂತರಂಗ, ಬಹಿರಂಗ ಶುದ್ಧಿಯಿಂದ ಶಿವನ ಸ್ಮರಿಸಿ ಎಂದು ರಾಜಗುರು ಸಂಸ್ಥಾನ ಕಲ್ಮಠದ ಪೀಠಾಧಿಕಾರಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಚನ್ನಮ್ಮ ಕಿತ್ತೂರು ತಾಲೂಕಿನ ಕಲ್ಮಠದ ಶಂಕರ ಚಂದರಗಿ ಸಭಾಭವನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಪೊ.ಸಿ.ಕೆ.ನಾವಲಗಿ ವಿರಚಿತ ಬಟ್ಟ ಬಯಲು ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಪೊ.ಸಿ.ಕೆ. ನಾವಲಗಿ ಮಾತನಾಡಿ, ಜನಪದರ ಪ್ರಕಾರ, ಬೇಡರ ಕಣ್ಣಪ್ಪನಿಂದ ಶಿವ ಆರಾಧನೆ ಆಚರಣೆಗೆ ಬಂತು. ಉತ್ತರಭಾರತದಲ್ಲಿ ಚಂದ್ರಸೇನ ರಾಜನ ಕಾಲದಲ್ಲಿ ಬಂದಿದೆ ಎನ್ನಲಾಗುತ್ತಿದೆ ಎಂದರು.
ಸಂತೋಷ ಚಿನಗುಡಿ ಮಾತನಾಡಿದರು. ವಿದ್ಯಾವರ್ಧಕ ಸಂದ ಕಾರ್ಯಾಧ್ಯ ಜಗದೀಶ ವಸದ, ವಿಶ್ವನಾಥ ಬಿಕ್ಕಣ್ಣವರ, ಕಸಾಪ ತಾಲೂಕು ಟಕದ ಅಧ್ಯ ಎಸ್.ಬಿ. ದಳವಾಯಿ, ಪ್ರಭಾವತಿ ಲದ್ದಿಮಠ, ಮಂಜುನಾಥ ಕಳಸಣ್ಣವರ, ಅತಾ ದಳವಾಯಿ, ವಿದ್ಯಾ ಜವಳಿ, ಮಹಿಳಾ ಮಂಡಳದ ಸದಸ್ಯರು ಇತರರಿದ್ದರು.