Brain Teaser: ಬಹುತೇಕರು ಶಾಲೆಯಲ್ಲಿ ಯಾವ ವಿಷಯಕ್ಕೆ ಬೇಕಾದರೂ ಉತ್ತರಿಸಲು ಪ್ರಯತ್ನಿಸುತ್ತಿದ್ದರು. ಆದ್ರೆ, ಗಣಿತ ವಿಷಯದಲ್ಲಿ ಮಾತ್ರ ಉತ್ತರವಿರಲಿ, ಪ್ರಯತ್ನಕ್ಕೂ ಮುಂದಾಗುತ್ತಿರಲಿಲ್ಲ. ಕೂಡುವುದು, ಕಳಿಯುವುದು, ಗುಣಕಾರ, ಭಾಗಕಾರ, ಮಗ್ಗಿ ಸೇರಿದಂತೆ ಇನ್ನಿತರ ಲೆಕ್ಕಾಚಾರದ ವಿಚಾರಗಳಿಂದ ಬಹಳ ದೂರ ಸರಿಯುತ್ತಿದ್ದರು. ಕೆಲವರು ಶಾಲೆಯಲ್ಲಿ ಗಣಿತಕ್ಕೆ ತಲೆಬಾಗಿದರೆ, ಇನ್ನೂ ಕೆಲವರು ಕಾಲೇಜು ಮೆಟ್ಟಿಲೇರಿದ ನಂತರ ಸೋತು ಸುಣ್ಣವಾಗಿದ್ದಾರೆ. ಆದರೂ ಜಾಲತಾಣಗಳಲ್ಲಿ ಹರಿದಾಡುವ ಇಂತಹ ಕೌತುಕ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುವುದು ಒಂದು ರೀತಿ ಖುಷಿ ವಿಷಯವೇ.
ಇದನ್ನೂ ಓದಿ: Vijayavani Press | ‘ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ’ ಪತ್ರಿಕೆಯನ್ನು ಪ್ರದರ್ಶಿಸಿದ ವಿದ್ಯಾರ್ಥಿನಿಯರು
ಇತ್ತೀಚಿನ ದಿನಗಳಲ್ಲಿ ಇಂತಹ ಗಣಿತದ ಒಗಟುಗಳು ಜಾಲತಾಣಗಳಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿವೆ. ಯಾವ ಗಣಿತದ ಲೆಕ್ಕಾಚಾರಗಳನ್ನು ಜನರು ಕಷ್ಟ ಎನ್ನುತ್ತಾರೋ, ಅದಕ್ಕೆ ಸಂಬಂಧಿಸಿದಂತೆಯೇ ಇಲ್ಲಿ ಪ್ರಶ್ನೆ ಕೇಳುವುದು ನೆಟ್ಟಿಗರ ಕುತೂಹಲ, ಕೌತುಕವನ್ನು ಕೆರಳಿಸುತ್ತದೆ. ಕೆಲವೊಂದು ಪ್ರಶ್ನೆ ನೋಡಿದ ಕೂಡಲೇ ಸರಳವಾಗಿ ಉತ್ತರಿಸಬಹುದು. ಆದರೆ, ಇನ್ನೂ ಕೆಲವು ನೋಡಲು ಸುಲಭವಾಗಿ ಕಂಡರೂ ಉತ್ತರಿಸಲು ಪರದಾಡುವಂತೆ ಮಾಡುತ್ತದೆ. ಆ ಸಾಲಿನಲ್ಲಿ ಈ ಪ್ರಶ್ನೆಯೂ ಒಂದು.
ಹೀಗಿದೆ ಗಣಿತದ ಒಗಟು:
3=8,
5=24,
9=80
4=?
3=8,
5=24,
9=80
4=?
ಇದೇ ಉತ್ತರ ಸಿಕ್ಕಿತೇ?
ಮೇಲ್ಕಂಡ ಪ್ರಶ್ನೆಗೆ ಉತ್ತರ= 15
3 ಗುಣಾಕಾರ 9-1=8
5 ಗುಣಾಕಾರ25-1=24
9 ಗುಣಾಕಾರ 81-1=80
4 ಗುಣಾಕಾರ 16-1=15