26.7 C
Bengaluru
Sunday, January 19, 2020

ನದಿಗಳ ರಕ್ಷಣೆಗೆ ಮತ್ತೊಂದು ಎಚ್ಚರಿಕೆ ಗಂಟೆ

Latest News

ಪಿಒಕೆಯಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಪಾಕಿಸ್ತಾನ ಸಿದ್ಧವಿದೆ: ಪಾಕ್​ ಪ್ರಧಾನಿ ಇಮ್ರಾನ್​ ಖಾನ್​

ಇಸ್ಲಮಾಬಾದ್​: ಜನರ ನಿರ್ಧಾರಕ್ಕೆ ಬಿಡೋಣ ಅವರು ಪಾಕಿಸ್ತಾನದ ಭಾಗವಾಗಿರಲು ನಿರ್ಧರಿಸುತ್ತಾರಾ ಅಥವಾ ಸ್ವತಂತ್ರವಾಗಿರಲು ಬಯಸುತ್ತಾರಾ ಎಂಬುದನ್ನು ತಿಳಿಯಲು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಜನಾಭಿಪ್ರಾಯ...

ಪ್ರಧಾನಿ ಮೋದಿ ಟ್ವೀಟನ್ನು ಯಥಾವತ್ತಾಗಿ ಕಾಪಿ ಮಾಡಿ ಟ್ರೋಲ್​ಗೆ ದಾಳಕ್ಕೆ ಸಿಲುಕಿದ ನಟಿ ಊರ್ವಶಿ ರೌಟೇಲಾ!

ಮುಂಬೈ: ಶನಿವಾರ ಸಂಜೆ ಕಾರು ಅಪಘಾತದಲ್ಲಿ ಗಾಯಗೊಂಡ ಬಾಲಿವುಡ್​ ಹಿರಿಯ ನಟಿ ಶಬಾನಾ ಅಜ್ಮಿ ಅವರು ಬೇಗ ಗುಣಮುಖರಾಗಲೆಂದು ಟ್ವೀಟ್​ ಮಾಡಿ ನಟಿ...

ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ಬಿಡದ ಆರೋಪ: ಉ. ಪ್ರದೇಶ ಪೊಲೀಸರ ವಿರುದ್ಧ ಮಾಜಿ ಐಎಎಸ್​ ಅಧಿಕಾರಿ ಗರಂ

ಪ್ರಯಾಗರಾಜ್​: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿಯನ್ನು ಖಂಡಿಸಿ ಐಎಎಸ್​ ಹುದ್ದೆಗೆ ರಾಜೀನಾಮೆ ನೀಡಿದ್ದ ಕೇರಳ ಮೂಲದ ಮಾಜಿ ಐಎಎಸ್​...

ಉಗರಗೋಳ: ಯಲ್ಲಮ್ಮನಗುಡ್ಡ ಅಭಿವೃದ್ಧಿಗೆ ಪ್ರಯತ್ನ

ಉಗರಗೋಳ: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಆನಂದ ಮಾಮನಿ ಭರವಸೆ ನೀಡಿದ್ದಾರೆ. ತಮ್ಮ ಜನ್ಮದಿನದ ಅಂಗವಾಗಿ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ...

ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ

ಬಾಗಲಕೋಟೆ: ಜಿಲ್ಲಾದ್ಯಂತ ನಾಲ್ಕು ದಿನ ಹಮ್ಮಿಕೊಂಡಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಾಯಕ್ಕ ಮೇಟಿ ಭಾನುವಾರ ಚಾಲನೆ...

– ವೇಣುವಿನೋದ್ ಕೆ.ಎಸ್. ಮಂಗಳೂರು
ಇತ್ತೀಚೆಗಷ್ಟೇ ನದಿಗಳು ದಿಢೀರ್ ಬತ್ತುತ್ತಿರುವ ವಿದ್ಯಮಾನದ ನಡುವೆಯೇ ನದಿಗಳ ರಕ್ಷಣೆ ಮಾಡದಿದ್ದರೆ ಅಪಾಯ ಕಾದಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಮಲೆನಾಡು-ಕರಾವಳಿಯಲ್ಲಿ ಹರಡಿರುವ ನೇತ್ರಾವತಿ (ಫಲ್ಗುಣಿ ನದಿಯನ್ನೊಳಗೊಂಡಂತೆ) ನದಿ ವ್ಯಾಪ್ತಿಯಲ್ಲಿ ಧಾರಣಾ ಸಾಮರ್ಥ್ಯ ಅಧ್ಯಯನ ಕೈಗೊಂಡಿದ್ದು, ಯಾವೆಲ್ಲ ಪ್ರದೇಶಗಳಲ್ಲಿ ಮಾನವ ಚಟುವಟಿಕೆಗಳಿಗೆ ನಿಯಂತ್ರಣ ಹೇರಬೇಕು ಎನ್ನುವ ವಿಸ್ತೃತ ವರದಿ ಸಿದ್ಧಪಡಿಸಿದ್ದಾರೆ.
ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ನಿರಂತರವಾಗಿ ನದಿಗಳು, ಜೀವವೈವಿಧ್ಯದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಐಐಎಸ್‌ಸಿಯ ಜೀವವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಹಾಗೂ ಅವರ ತಂಡ ನೇತ್ರಾವತಿ ನದಿಯ ಧಾರಣಾ ಸಾಮರ್ಥ್ಯದ ಅಧ್ಯಯನ ನಡೆಸಿದೆ. ಇದುವರೆಗೆ ಹಲವು ರೀತಿಯ ಮಾನವ ಚಟುವಟಿಕೆಗಳಿಂದ ದಣಿದಿರುವ ನೇತ್ರಾವತಿಯನ್ನು ಇನ್ನಾದರೂ ಸಂರಕ್ಷಿಸುವ ಅಗತ್ಯವಿದೆ ಎನ್ನುವುದು ಅವರ ಅಧ್ಯಯನದ ಮುಖ್ಯ ಶಿಫಾರಸು.
ಧಾರಣಾ ಸಾಮರ್ಥ್ಯ ಅಧ್ಯಯನ ಕೈಗೊಂಡಿರುವುದಲ್ಲದೆ, ನೇತ್ರಾವತಿ ವ್ಯಾಪ್ತಿಯ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಅವುಗಳಲ್ಲಿ ಯಾವೆಲ್ಲ ಚಟುವಟಿಕೆ ನಿಷಿದ್ಧ ಹಾಗೂ ಯಾವುದನ್ನು ಕೈಗೊಳ್ಳಬಹುದು ಎನ್ನುವ ಮಾಹಿತಿ ವರದಿಯಲ್ಲಿದೆ.

ಧಾರಣಾ ಸಾಮರ್ಥ್ಯ ಎಂದರೆ?:  ಪರಿಸರದ ಯಾವುದೇ ಜೀವಿಯ ಬದುಕಿನ ಸಮತೋಲನ ತಪ್ಪದಂತೆ ಮಾನವ ಕೈಗೊಳ್ಳಬಹುದಾದ ಗರಿಷ್ಠ ಅಭಿವೃದ್ಧಿ, ಕೃಷಿ, ಕೈಗಾರಿಕಾ, ವಾಣಿಜ್ಯ ಚಟುವಟಿಕೆಗಳು ಹಾಗೂ ಇತರ ಜೀವಿಗಳ ಕ್ರಿಯೆಗಳನ್ನು ಇಲ್ಲಿ ಧಾರಣಾ ಸಾಮರ್ಥ್ಯ ಎನ್ನಬಹುದು. ನೇತ್ರಾವತಿ ನದಿ ವ್ಯಾಪ್ತಿಯಲ್ಲಿ ನಕ್ಷೆ, ಪ್ರಾಣಿ-ಗಿಡಗಳ ಮೇಲಿನ ನಿಗಾ ಮೂಲಕ ತಜ್ಞರು ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಿದ್ದಾರೆ.
ಈ ಮೂಲಕ ಪರಿಸರದ ಸಂಪನ್ಮೂಲಗಳನ್ನು ಕಾಪಾಡಿಕೊಳ್ಳುತ್ತಾ ನಿಯಂತ್ರಿತ ಹಾಗೂ ನ್ಯಾಯಯುತ ಸಂಪನ್ಮೂಲ ಬಳಕೆ ಮಾಡಿದರೆ ನದಿಗಳು, ಅರಣ್ಯವನ್ನು ಮುಂದಿನ ಜನಾಂಗಕ್ಕೆ ಕಾಪಿಡಬಹುದು ಎನ್ನುವುದು ತಜ್ಞರ ನಿಲುವು.

ಜಲಾರಣ್ಯಗಳು!: ನೇತ್ರಾವತಿ, ಫಲ್ಗುಣಿ-ಎರಡೂ ನದಿ ಉಗಮವಾಗುವುದು ಪಶ್ಚಿಮ ಘಟ್ಟಗಳಲ್ಲಿ. ಇದರ ವ್ಯಾಪ್ತಿಯಲ್ಲಿನ ಜೀವ ಸೂಕ್ಷ್ಮಪ್ರದೇಶಗಳನ್ನು ಗುರುತಿಸಿ, ಅವುಗಳನ್ನು ನಾಲ್ಕಾಗಿ ಪ್ರತ್ಯೇಕಿಸಲಾಗಿದೆ. ಇಕೊಲಾಜಿಕಲಿ ಸೆನ್ಸಿಟಿವ್ ರೀಜನ್ಸ್ (ಇಎಸ್‌ಆರ್) -1,2,3,4.
ಇಎಸ್‌ಆರ್ 1 ಹಾಗೂ 2 ಅತಿ ಸೂಕ್ಷ್ಮ ಪ್ರದೇಶ, ಇಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳುವಂತಿಲ್ಲ. ಬದಲಾಗಿ ಈ ಪ್ರದೇಶಗಳ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು. ಅದೆಷ್ಟೋ ತೊರೆ ತೋಡುಗಳನ್ನೊಳಗೊಂಡ ಪಶ್ಚಿಮ ಘಟ್ಟದ ಅರಣ್ಯ ಕಾರ್ಬನ್ ಸ್ಟಾಕಿಂಗ್(ಕಾರ್ಬನ್ ಹೀರಿಕೊಳ್ಳುವ ಪ್ರಮಾಣ)ಗೆ ನೆರವಾಗುತ್ತದೆ. ಈ ಜಲಾರಣ್ಯಗಳು ಜೀವವೈವಿಧ್ಯದಲ್ಲಿ ಶ್ರೀಮಂತವಷ್ಟೇ ಅಲ್ಲ ಇಂಗಾಲಾಮ್ಲ ಇಳಿಸುವಲ್ಲಿ ನೆರವಾಗಿ ಜಾಗತಿಕ ತಾಪಮಾನ ಇಳಿಕೆಗೆ ತಮ್ಮ ಕೊಡುಗೆ ನೀಡುತ್ತವೆ ಎನ್ನುತ್ತದೆ ತಜ್ಞರ ವರದಿ.

ನೇತ್ರಾವತಿ ಹರವು: ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಬಳಿಯ ಎಳನೀರು ಘಾಟಿಯ ಬಂಗ್ರಬಲಿಕೆ ನೇತ್ರಾವತಿ ನದಿಯ ಉಗಮ ಸ್ಥಾನ. 4409 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿರುವ ಈ ನದಿ, ಐದು ಜಿಲ್ಲೆಗಳಲ್ಲಿ ಹರಡಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನದಿ ತಿರುಗಿಸದಿರಿ: ಹಿಂದೆಯೂ ಎತ್ತಿನಹೊಳೆ ನದಿ ತಿರುವು ಯೋಜನೆ ಪೊಳ್ಳೆಂಬುದನ್ನು ರಾಮಚಂದ್ರ ವರದಿಯಲ್ಲಿ ಹೇಳಿದ್ದರು. ಆದರೆ ಅವರ ವರದಿಯನ್ನು ಸರ್ಕಾರ ಆಗ ತಳ್ಳಿ ಹಾಕಿತ್ತು. ಕೆಲವರ್ಷ ಹಿಂದೆ ಕೊಡಗು ಜಿಲ್ಲೆಯಲ್ಲಿ ಪರಿಸರದ ಮೇಲೆ ಆಗುತ್ತಿರುವ ದೌರ್ಜನ್ಯವನ್ನೂ ದಾಖಲಿಸಿದ್ದರು. ಪ್ರಸ್ತುತ ಎತ್ತಿನಹೊಳೆ ಯೋಜನಾ ಪ್ರದೇಶ, ಕೊಡಗು ಜಿಲ್ಲೆ ಎರಡೂ ಕಡೆ ಭೂಕುಸಿತ ಸಂಭವಿಸಿದೆ.
ಈಗಿನ ವರದಿಯಲ್ಲೂ(ಜನವರಿ 2018ರಲ್ಲಿ ಪ್ರಕಟಿತ) ನದಿ ತಿರುಗಿಸುವ ಕೆಲಸಕ್ಕೆ ಹೋಗಲೇಬಾರದು ಎಂದು ತಜ್ಞರು ಹೇಳಿದ್ದಾರೆ. ಇದರಿಂದಾಗಿ ಅರಣ್ಯಗಳ ನೀರು ಹಿಡಿದಿರಿಸಿಕೊಳ್ಳುವ ಸಾಮರ್ಥ್ಯ ಅಳಿಯುವ ಸಾಧ್ಯತೆ ಇದೆ. ಆ ಮೂಲಕ ತೋಡುಗಳಲ್ಲಿ ನೀರು ಹರಿಯುವುದು ನಿಂತು ಹೋಗಬಹುದು ಎಂದು ಎಚ್ಚರಿಸಿದ್ದಾರೆ.

ಎಷ್ಟೆಷ್ಟು ಗ್ರಾಮಗಳಿವೆ?:  ದ.ಕ(307), ಉಡುಪಿ(22), ಚಿಕ್ಕಮಗಳೂರು(16), ಹಾಸನ(78) ಮತ್ತು ಕೊಡಗು (10) ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 433 ಗ್ರಾಮಗಳು ಇಎಸ್‌ಆರ್ ವ್ಯಾಪ್ತಿಯಲ್ಲಿವೆ. ದ.ಕ. ಜಿಲ್ಲೆಯ ಇಎಸ್‌ಆರ್-1ರಲ್ಲಿ 62, ಇಎಸ್‌ಆರ್-2ರಲ್ಲಿ 31, ಇಎಸ್‌ಆರ್-3ರಲ್ಲಿ 95, ಇಎಸ್‌ಆರ್-4ರಲ್ಲಿ 119 ಗ್ರಾಮಗಳಿವೆ. ಉಡುಪಿ ಜಿಲ್ಲೆಯ ಇಎಸ್‌ಆರ್-1ರಲ್ಲಿ 1, 2ರಲ್ಲಿ 6, 4ರಲ್ಲಿ 15 ಗ್ರಾಮಗಳಿವೆ. ಚಿಕ್ಕಮಗಳೂರು ಜಿಲ್ಲೆಯ ಇಎಸ್‌ಆರ್-1ರಲ್ಲಿ 9, ಇಎಸ್‌ಆರ್- 2ರಲ್ಲಿ 7 ಗ್ರಾಮಗಳಿವೆ. ಹಾಸನ ಜಿಲ್ಲೆಯ ಇಎಸ್‌ಆರ್-1ರಲ್ಲಿ 33, ಎರಡರಲ್ಲಿ 21, ಮೂರರಲ್ಲಿ 24 ಗ್ರಾಮಗಳಿವೆ. ಕೊಡಗು ಜಿಲ್ಲೆಯ ಇಎಸ್‌ಆರ್-1ರಲ್ಲಿ 6, ಎರಡರಲ್ಲಿ 4 ಗ್ರಾಮಗಳಿವೆ.
ಇದರಲ್ಲಿ ಇಎಸ್‌ಆರ್ 4ರಲ್ಲಿ ಮಾತ್ರವೇ ಅಭಿವೃದ್ಧಿ ಕೆಲಸಗಳನ್ನು ಸೂಕ್ತ ಪರಿಶೀಲನೆ ಬಳಿಕ ಬಿಡಬಹುದು ಎನ್ನುತ್ತಾರೆ ತಜ್ಞರು.

ಎಲ್ಲಿ ಯಾವುದು ನಿಷೇಧ?:  ಸೋಲಾರ್ ಪವರ್ ಹಾಕುವುದಕ್ಕೆ ಎಲ್ಲ ವಲಯಗಳಲ್ಲೂ ಅವಕಾಶ ಇದೆ. ಗಾಳಿಯಂತ್ರಗಳಿಗೆ ಇಎಸ್‌ಆರ್ 1ರಲ್ಲಿ ಬಿಟ್ಟು ಉಳಿದ ಕಡೆ ಬಿಡಬಹುದು. ಉಷ್ಣವಿದ್ಯುತ್ ಸ್ಥಾವರ, ದೊಡ್ಡ ಪ್ರಮಾಣದ ಜಲವಿದ್ಯುತ್ ಯೋಜನೆಗಳಿಗೆ ಎಲ್ಲ ವಲಯಗಳಲ್ಲೂ ನಿಷೇಧವಿದೆ. ಚಿಕ್ಕ ಜಲವಿದ್ಯುತ್ ಯೋಜನೆಗಳಿಗೆ ವಲಯ 4ರಲ್ಲಿ ಮಾತ್ರವೇ ಬಿಡಬಹುದು.
ಎಲ್ಲ ನಾಲ್ಕು ವಲಯದಲ್ಲೂ ಅರಣ್ಯವನ್ನು ಅರಣ್ಯೇತರ ಆಗಿ ಪರಿವರ್ತಿಸುವಂತಿಲ್ಲ. ಅಲ್ಲದೆ ಏಕಜಾತಿಯ ಸಸ್ಯಗಳ ತೋಟ ಮಾಡುವುದಕ್ಕೆ ನಿಷೇಧ. ವೈದ್ಯಕೀಯ ಉದ್ದೇಶಕ್ಕೆ ಗಿಡಗಳನ್ನು ತೆಗೆಯುವುದನ್ನು ವಲಯ 3, 4ರಲ್ಲಿ ಕಠಿಣ ನಿಯಮಾವಳಿಯೊಂದಿಗೆ ಬಿಡಬಹುದು. ಎಲ್ಲ ನಾಲ್ಕು ವಲಯದಲ್ಲೂ ಗ್ರಾಮಮಟ್ಟದ ಅರಣ್ಯ ಸಮಿತಿಯೊಂದಿಗೆ ಅಭಿವೃದ್ಧಿಪಡಿಸುವುದಕ್ಕೆ ಅವಕಾಶ ನೀಡಬಹುದು.
ಕೃಷಿ ಸಂಸ್ಕರಣಾ ಕೈಗಾರಿಕೆಗಳಿಗೆ ಎಲ್ಲ ವಲಯದಲ್ಲಿ ಅವಕಾಶ ಕೊಡಬಹುದು. ಐಟಿಗೆ ವಲಯ 3, 4ರಲ್ಲಿ ಅವಕಾಶ. ಮಾಲಿನ್ಯಕಾರಕ ಕೆಂಪು ಉದ್ದಿಮೆಗಳಿಗೆ ನಾಲ್ಕೂ ಕಡೆ ನಿಷೇಧ. ಪ್ರವಾಸೋದ್ಯಮ ತೆಗೆದುಕೊಂಡರೆ ಇಕೋಟೂರಿಸಂಗೆ ವಲಯ 1 ಬಿಟ್ಟು ಉಳಿದೆಡೆ ಅವಕಾಶ. ಸಾವಯವ ಹೋಮ್‌ಸ್ಟೇಗೆ ನಾಲ್ಕೂ ಕಡೆ ಬಿಡಬಹುದು.
ಮರಳು ಗಣಿಗಾರಿಕೆ ವಲಯ 4ರಲ್ಲಿ ಮಾತ್ರವೇ ಬಿಡಬಹುದು. ಆದರೆ ರಫ್ತು ತಡೆಗಟ್ಟಲೇಬೇಕು. ಕಬ್ಬಿಣ, ಮ್ಯಾಂಗನೀಸ್ ಬಾಕ್ಸೈಟ್ ಗಣಿಗಾರಿಕೆ ಎಲ್ಲ ಕಡೆ ನಿಷೇಧ. ಸುಣ್ಣದ ಕಲ್ಲು ಗಣಿಗಾರಿಕೆ ವಲಯ 3, 4ರಲ್ಲಿ ಮಾತ್ರ ಬಿಡಬಹುದು.
ತ್ಯಾಜ್ಯ ವಿಲೇವಾರಿ ಘಟಕಗಳಿಗೆ ನಾಲ್ಕನೇ ವಲಯದಲ್ಲಿ ಅವಕಾಶ ಕೊಟ್ಟಿದೆ. ಆದರೆ ಅಪಾಯಕಾರಿ ತ್ಯಾಜ್ಯ ವಿಲೇವಾರಿಗೆ ಅವಕಾಶ ಇಲ್ಲ. ನಾಲ್ಕನೇ ವಲಯದಲ್ಲಿ ಹೆದ್ದಾರಿ/ಎಕ್ಸ್‌ಪ್ರೆಸ್ ಕಾರಿಡಾರ್ ನಿರ್ಮಾಣಕ್ಕೆ ಸೂಕ್ತವಾದ ಪರಿಸರ ಪರಿಣಾಮ ಅಧ್ಯಯನದ ಬಳಿಕವಷ್ಟೇ ಅನುಮತಿ ನೀಡಬಹುದು.

ರಾಜ್ಯಮಟ್ಟದ ಇಎಸ್‌ಆರ್ ಸರ್ವೇ:  ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಸೂಚನೆ ಮೇರೆಗೆ ಡಾ.ಟಿ.ವಿ.ರಾಮಚಂದ್ರ ತಂಡ ಇಡೀ ರಾಜ್ಯದಲ್ಲೇ ಪರಿಸರ ಸೂಕ್ಷ್ಮ ಪ್ರದೇಶಗಳ ಸಮೀಕ್ಷೆ ನಡೆಸಿ ವರದಿಯನ್ನು ಸಲ್ಲಿಸಿದ್ದಾರೆ. ಇದನ್ನು ಪರಿಶೀಲಿಸಿ ಕೇಂದ್ರ ಸಚಿವಾಲಯವೇ ಮುಂದೆ ಪ್ರಕಟಿಸಲಿದೆ.

 

ವರ್ಷದಿಂದ ವರ್ಷಕ್ಕೆ ನೇತ್ರಾವತಿ ವ್ಯಾಪ್ತಿಯಲ್ಲಿ ಪರಿಸರ ನಾಶ ಹೆಚ್ಚುತ್ತಿದೆ, ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಹದಗೆಡಿಸುತ್ತಾ ಹೋದರೆ ದುರಂತ ಕಾದಿದೆ.
– ಡಾ.ಟಿ.ವಿ.ರಾಮಚಂದ್ರ, ಪರಿಸರ ತಜ್ಞರು, ಐಐಎಸ್ಸಿ ಬೆಂಗಳೂರು

ವಿಡಿಯೋ ನ್ಯೂಸ್

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...