ಬೆಂಗಳೂರು ಪೊಲೀಸ್ ಇಲಾಖೆಯಿಂದ ವಾಹನ ಸವಾರರಿಗೆ ಮತ್ತೊಂದು ಶಾಕ್?

ಬೆಂಗಳೂರು: ಮೊಟಾರು ವಾಹನ ಕಾಯ್ದೆ ತಿದ್ದುಪಡಿ ಅಡಿಯಲ್ಲಿ ದುಬಾರಿ ದಂಡ ವಿಧಿಸುತ್ತಿರುವ ಕ್ರಮದಿಂದಾಗಿ ಹೈರಾಣಾಗಿರುವ ವಾಹನ ಸವಾರರಿಗೆ ಬೆಂಗಳೂರು ಪೊಲೀಸ್‌ ಇಲಾಖೆಯಿಂದ ಮತ್ತೊಂದು ಶಾಕ್‌ ಎದುರಾಗಿದೆ.

ರಸ್ತೆಯಲ್ಲಿ ಡೇಂಜರಸ್ಸ್ ಸ್ಟಂಟ್ಸ್ ಹಾಗೂ ವೀಲಿಂಗ್ ಮಾಡುವವರಿಗೆ ಬುದ್ಧಿ ಕಲಿಸಲು ಪೊಲೀಸ್‌ ಆಯುಕ್ತರು ನೂತನ ಪ್ಲ್ಯಾನ್‌ವೊಂದನ್ನು ರೂಪಿಸಿದ್ದು, ರಸ್ತೆಯಲ್ಲಿ ವ್ಹೀಲಿಂಗ್ ಮಾಡಿದ್ರೆ ಸಿಆರ್‌ಪಿ-107 ಪ್ರಕರಣ ದಾಖಲಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ವೀಲಿಂಗ್ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದ ಸಾರ್ವಜನಿಕರ ಜೀವಕ್ಕೆ ಕುತ್ತುಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ಮುಂದೆ ವ್ಹೀಲಿಂಗ್ ಮಾಡಿದ್ರೆ ಸಿಆರ್‌ಪಿ – 107 ಪ್ರಕರಣ ದಾಖಲಿಸಲಾಗುತ್ತದೆ. ಅಲ್ಲದೆ, ಜತೆಗೆ 30 ಸಾವಿರ ದಂಡ ಹಾಕಲು ಚಿಂತನೆ ನಡೆಸಲಾಗಿದೆ. ಸಮಾಜದ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಪ್ರಕರಣ ದಾಖಲು ಮಾಡಲು ನಿರ್ಧರಿಸಲಾಗಿದೆ.

ಈ ಹಿಂದೆ ಬೈಕ್‌ ವ್ಹೀಲಿಂಗ್ ಮಾಡಿದ್ರೆ, ಸ್ಟಂಟ್ಸ್‌ ಮಾಡಿದರೆ ಕೇವಲ ಮೋಟಾರ್ ವಾಹನ ಕಾಯ್ದೆ 184ರ ಅಡಿ ಪ್ರಕರಣ ದಾಖಲು ಮಾಡಲಾಗುತ್ತಿತ್ತು. ಮೋಟಾರ್ ಆ್ಯಕ್ಟ್ 184 ರಲ್ಲಿ ಕೇಸ್ ದಾಖಲು ಮಾಡಲಾಗುತ್ತಿತ್ತು. ಅಲ್ಲದೆ, ಕೇವಲ 1,000 ರೂ. ದಂಡವನ್ನು ಟ್ರಾಫಿಕ್ ಪೊಲೀಸರು ವಿಧಿಸುತ್ತಿದ್ದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *