17.8 C
Bengaluru
Wednesday, January 22, 2020

ಪೆಗಾಸಸ್​ ರೀತಿಯ ಮತ್ತೊಂದು ಸ್ಪೈವೇರ್​ನಿಂದ ವಾಟ್ಸ್​ಆ್ಯಪ್​ ಮೇಲೆ ದಾಳಿ: ಇದು ಹೇಗೆ ವಕ್ಕರಿಸುತ್ತೆ ಗೊತ್ತಾ?

Latest News

ಕರ್ನಾಟಕ ಕುಸ್ತಿ ಹಬ್ಬಫೆ. 15ರಿಂದ

ಧಾರವಾಡ: ಫೆ. 15ರಿಂದ 18ರವರೆಗೆ ನಗರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ಸೇರಿ ಸುಮಾರು 2,000ಕ್ಕೂ ಹೆಚ್ಚು ಕುಸ್ತಿಪಟುಗಳು, ತರಬೇತಿದಾರರು...

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ನವದೆಹಲಿ: ಕೆಲದಿನಗಳ ಹಿಂದೆ ಇಸ್ರೇಲ್​ ಮೂಲದ ಸ್ಪೈವೇರ್​ ಪೆಗಾಸಸ್​ ವಾಟ್ಸ್​ಆ್ಯಪ್​ ಮೇಲೆ ದಾಳಿ ಮಾಡಿ, ಬಳಕೆದಾರರ ವಿವರಗಳನ್ನು ಕದಿಯಲು ಮುಂದಾಗಿತ್ತು. ಇದೀಗ ಇದೇ ರೀತಿಯ ಮತ್ತೊಂದು ಸ್ಪೈವೇರ್​ ವಾಟ್ಸ್​ಆ್ಯಪ್​ ಮೇಲೆ ದಾಳಿ ಮಾಡುತ್ತಿದೆ. ಇದನ್ನು ತೀವ್ರ ಹಾಗೂ ಅತಿ ಅಪಾಯಕಾರಿ ಸ್ಪೈವೇರ್​ ಎಂದು ಭಾರತೀಯ ಕಂಪ್ಯೂಟರ್​ ತುರ್ತು ಕಾರ್ಯಪಡೆ (ಸಿಇಆರ್​ಟಿ) ವರ್ಗೀಕರಿಸಿದೆ.

ಅಪರಿಚಿತ ಸಂಖ್ಯೆಯಿಂದ ವಾಟ್ಸ್​ಆ್ಯಪ್​ಗೆ ಎಂಪಿ4 ವಿಡಿಯೋ ಫೈಲ್​ ಅನ್ನು ರವಾನಿಸಲಾಗುತ್ತದೆ. ಇದನ್ನು ಡೌನ್​ಲೋಡ್​ ಮಾಡಿಕೊಂಡರೆ ಸ್ವಯಂಚಾಲಿತವಾಗಿ ಈ ಸ್ಪೈವೇರ್​ ಕೂಡ ಡೌನ್​ಲೋಡ್​ ಆಗಿ ಸ್ಮಾರ್ಟ್​ಫೋನ್​ ಮೇಲೆ ದಾಳಿ ಮಾಡುತ್ತದೆ.

ವಾಟ್ಸ್​ಆ್ಯಪ್​ನಲ್ಲಿರುವ ಭದ್ರತಾ ಲೋಪವನ್ನು ಪೆಗಾಸಸ್​ ಸ್ಪೈವೇರ್​ ತೋರಿಸಿಕೊಟ್ಟಿತ್ತು. ಇದೀಗ ಇದರ ದುರ್ಲಾಭ ಪಡೆಯಲು ಅಪರಿಚಿತ ದಾಳಿಕೋರ ಎಂಪಿ4 ಮಾದರಿಯ ಫೈಲ್​ಗಳನ್ನು ಬಿಡುಗಡೆ ಮಾಡಲಾರಂಭಿಸಿದ್ದಾನೆ.

ಈ ಬಗ್ಗೆ ಎಚ್ಚರಿಕೆ ನೀಡಿರುವ ವಾಟ್ಸ್​ಆ್ಯಪ್​ನ ಮೂಲಕಂಪನಿ ಫೇಸ್​ಬುಕ್​, ಎಂಪಿ4 ಫೈಲ್​ ಅನ್ನು ಡೌನ್​ಲೋಡ್​ ಮಾಡಿಕೊಳ್ಳುತ್ತಲೇ ಸ್ಟ್ಯಾಕ್​ ಆಧಾರಿತ ಬಫರ್​ ಓವರ್​ಫ್ಲೋ ಆರಂಭವಾಗುತ್ತದೆ. ಇದನ್ನು ಸಿವಿಇ-2019-11391 ಎಂದು ಗುರುತಿಸಲಾಗಿದೆ. ಈ ಸ್ಪೈವೇರ್​ ಡೌನ್​ಲೋಡ್​ ಆದ ಬಳಿಕ ಅಪರಿಚಿತ ದಾಳಿಕೋರನಿಗೆ ಅನಾಯಾಸವಾಗಿ ಆ್ಯಂಡ್ರಾಯ್ಡ್​, ಐಒಎಸ್​ ಅಥವಾ ವಿನ್​ಡೋಸ್​ ಆಪರೇಟಿಂಗ್​ ಸಿಸ್ಟಂ ಇರುವ ಸ್ಮಾರ್ಟ್​ಫೋನ್​ಗಳ ನಿಯಂತ್ರಣ ಲಭಿಸುತ್ತದೆ. ಅದನ್ನು ಬಳಸಿಕೊಂಡು ಆತ ಡಿನೈಯಲ್​ ಆಫ್​ ಸರ್ವಿಸ್​ (ಡಿಒಎಸ್​) ಅಥವಾ ರಿಮೋಡ್​ ಕೋಡ್​ ಎಕ್ಸಿಕ್ಯೂಷನ್​ (ಆರ್​ಸಿಇ) ಮೂಲಕ ಫೋನ್​ನ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಬಹುದು ಎಂದು ಹೇಳಿದೆ.

ಅಷ್ಟೇ ಅಲ್ಲ, ದಾಳಿಗೆ ಒಳಗಾಗಿರುವ ಫೋನ್​ನ ನಂಬರ್​ ಬಳಸಿಕೊಂಡು ಬೇರೊಂದು ಫೋನ್​ಗಳಿಗೆ ವಾಟ್ಸ್​ಆ್ಯಪ್​ ಮೂಲಕ ವಿಡಿಯೋ ಸಂದೇಶ ರವಾನಿಸಿ, ಅನಗತ್ಯವಾದ ಪ್ರೋಗ್ರಾಂ ಅನ್ನು ಇನ್​ಸ್ಟಾಲ್​ ಮಾಡಿ, ಆ ಫೋನ್​ಗಳ ಕಾರ್ಯನಿರ್ವಹಣೆಗೂ ಅಡಚಣೆ ಉಂಟು ಮಾಡಬಹುದು ಎಂದು ಎಚ್ಚರಿಕೆ ನೀಡಿದೆ.
ಈ ಸಮಸ್ಯೆ ನಿವಾರಣೆಗೆ ಹೊಸದಾಗಿ ಬಿಡುಗಡೆ ಮಾಡಿರುವ ಸೆಕ್ಯೂರಿಟಿ ಪ್ಯಾಚ್​ ಸಮರ್ಥವಾಗಿದೆ ಎಂದು ಹೇಳಲಾಗುತ್ತಿದೆ. ಆದರೂ ಫೇಸ್​ಬುಕ್​ ಅಥವಾ ವಾಟ್ಸ್​ಆ್ಯಪ್​ನಿಂದ ಇದುವರೆಗೂ ಈ ಮಾಹಿತಿ ಖಚಿತಪಟ್ಟಿಲ್ಲ. (ಏಜೆನ್ಸೀಸ್​)

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...