Raj Tarun Case: ಕಳೆದ ವರ್ಷ ತನ್ನ ಪ್ರೇಯಸಿ ಲಾವಣ್ಯ ಕೊಟ್ಟ ದೂರಿನಿಂದ ದೊಡ್ಡ ಮಟ್ಟದ ವಿವಾದಕ್ಕೆ ಗುರಿಯಾಗಿದ್ದ ಟಾಲಿವುಡ್ ಯುವ ನಟ ರಾಜ್ ತರುಣ್, ತನ್ನನ್ನು ಪ್ರೀತಿಯ ಜಾಲಕ್ಕೆ ಬೀಳಿಸಿ, ಮದುವೆಯಾಗುವುದಾಗಿ ಭರವಸೆ ಕೊಟ್ಟು ವಂಚಿಸಿ, ಬಲವಂತವಾಗಿ ಗರ್ಭಪಾತ ಮಾಡಿಸಿದ್ದ ಎಂದು ಖುದ್ದಾಗಿ ಲಾವಣ್ಯ ಗಂಭೀರ ಆರೋಪ ಮಾಡಿದ್ದಳು. ಈ ಘಟನೆಯಿಂದ ತೀರ ಮನನೊಂದ ಲಾವಣ್ಯ, ಪ್ರಿಯಕರ ರಾಜ್ ವಿರುದ್ಧ ನರಸಿಂಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಂದಿನಿಂದ ಇಂದಿನವರೆಗೂ ಬೂದಿ ಮುಚ್ಚಿದ ಕೆಂಡದಂತಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದ್ದು, ಆರೋಪಿ ಮಸ್ತನ್ ಸಾಯಿ ಜತೆ ಮತ್ತೊಬ್ಬನ ಹೆಸರು ಕೇಳಿಬಂದಿದೆ.
ಇದನ್ನೂ ಓದಿ: ಸಂಜು ಸ್ಯಾಮ್ಸನ್ ಪರ ನಿಂತಿದ್ದಕ್ಕೆ ಮಾಜಿ ಕ್ರಿಕೆಟಿಗ ಶ್ರೀಶಾಂತ್ಗೆ ಶಾಕ್: ಏಳು ದಿನಗಳ ಡೆಡ್ಲೈನ್! Sanju Samson
300ಕ್ಕೂ ಹೆಚ್ಚು ಖಾಸಗಿ ವಿಡಿಯೋ
ಇತ್ತೀಚೆಗಷ್ಟೇ, ಲಾವಣ್ಯ-ರಾಜ್ ತರುಣ್ ಪ್ರಕರಣದಲ್ಲಿ ಮಸ್ತಾನ್ ಸಾಯಿನನ್ನು ನರಸಿಂಗಿ ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ತನ್ನ ಖಾಸಗಿ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ಆಗಾಗ್ಗೆ ಬ್ಲ್ಯಾಕ್‌ಮೇಲ್ ಮಾಡ್ತಿದ್ದ ಎಂದು ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಉಲ್ಲೇಖಿಸಿದ್ದ ಲಾವಣ್ಯ, ಮಸ್ತಾನ್ ಸಾಯಿ ಹಲವಾರು ಹುಡುಗಿಯರು ಅವನೊಂದಿಗೆ ಖಾಸಗಿಯಾಗಿದ್ದಾಗ ಅವರ ವೀಡಿಯೊಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ ಮತ್ತು ಆ ವೀಡಿಯೊಗಳನ್ನು ಮುಂದಿಟ್ಟು ಅವರನ್ನೂ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದಿದ್ದರು. ಇದನ್ನು ಪರಿಶೀಲಿಸಿದ ಪೊಲೀಸರಿಗೆ ಆತನ ಬಳಿಯಿದ್ದ ಹಾರ್ಡ್ ಡಿಸ್ಕ್ ಮತ್ತು ಅದರಲ್ಲಿದ್ದ 300ಕ್ಕೂ ಹೆಚ್ಚು ಖಾಸಗಿ ವಿಡಿಯೋಗಳು ಸಾಕ್ಷಿಯಾಗಿ ಲಭಿಸಿವೆ.
ವಿವಿಧ ಸಾಕ್ಷ್ಯ
ಇನ್ನು ಈ ಪ್ರಕರಣದಲ್ಲಿ ರಾಜ್ ತರುಣ್ ಸ್ನೇಹಿತ ಆರ್ಜೆ ಶೇಖರ್ ಭಾಷಾ ಮತ್ತು ಆರೋಪಿ ಮಸ್ತನ್ ಸಾಯಿ ನನ್ನನ್ನು ಡ್ರಗ್ ಕೇಸ್ನಲ್ಲಿ ಸಿಲುಕಿಸಿದರು ಎಂದು ಲಾವಣ್ಯ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದಾರೆ. ಮಸ್ತಾನ್ ಸಾಯಿ ಮತ್ತು ಶೇಖರ್ ಭಾಷಾ ನನ್ನ ವಿರುದ್ಧ ಸಂಚು ರೂಪಿಸಿ, ಮಾದಕ ದ್ರವ್ಯ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಇದರೊಟ್ಟಿಗೆ ಇವರಿಬ್ಬರ ಆಡಿಯೋ ರೆಕಾರ್ಡ್ ಮತ್ತು ವಿವಿಧ ಸಾಕ್ಷ್ಯಗಳೊಂದಿಗೆ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ನನ್ನೊಂದಿಗೆ ಮತ್ತೊಬ್ಬಳು ಯುವತಿಯನ್ನು ಕೇಸ್ನಲ್ಲಿ ಸಿಲುಕಿಸಲು ದೊಡ್ಡ ಪ್ರಯತ್ನವನ್ನೇ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶೇಖರ್ ಭಾಷಾ ಪದಬಳಕೆ
ರಾಜ್ ತರುಣ್ – ಲಾವಣ್ಯ ಪ್ರಕರಣ ಮಾಧ್ಯಮಗಳ ಮುಂದೆ ಬಟಾ ಬಯಲಾದಾಗ ರಾಜ್ ತರುಣ್ ಪರ ಬ್ಯಾಟ್ ಬೀಸಿದ ಏಕೈಕ ವ್ಯಕ್ತಿ ಶೇಖರ್ ಭಾಷಾ. ಆ ಸಮಯದಲ್ಲಿ ಶೇಖರ್, ರಾಜ್ ಪ್ರೇಯಸಿ ಲಾವಣ್ಯ ವಿರುದ್ಧ ಅಸಭ್ಯ ಪದಗಳಿಂದ ನಿಂದಿಸಿ, ಹಲವು ಆರೋಪಗಳನ್ನು ಮಾಡಿದ್ದರು. ಈಗ ಲಾವಣ್ಯ, ಶೇಖರ್ ಭಾಷಾ ವಿರುದ್ಧ ಪ್ರಕರಣ ದಾಖಲಿಸಿರುವುದು ಗಮನಾರ್ಹ. ರಾಜ್ ತರುಣ್-ಲಾವಣ್ಯ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿರುವುದು ಸದ್ಯ ಟಾಲಿವುಡ್ ಮಂದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ,(ಏಜೆನ್ಸೀಸ್).