ಹೊಳೆನರಸೀಪುರ: ತಾಲೂಕಿನಲ್ಲಿ ಡೆಂಘೆ ಮತ್ತೊಂದು ಬಲಿ ಪಡೆದಿದ್ದು, ಗುಡ್ಡೇನಹಳ್ಳಿ ಗ್ರಾಮದಲ್ಲಿ ಜ್ವರದಿಂದ ಬಾಲಕಿ ಬುಧವಾರ ಸಾವಿಗೀಡಾಗಿದ್ದಾಳೆ.

ಗ್ರಾಮದ ಲೋಕೇಶ್ ಅವರ ಪುತ್ರಿ ಕಲಾಶ್ರೀ(12) ಮೃತಪಟ್ಟ ಬಾಲಕಿ. ಗುಡ್ಡೇನಹಳ್ಳಿ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಳು. ಜ್ವರದಿಂದ ಬಳಲುತ್ತಿದ್ದ ಈಕೆ ಒಂದು ವಾರದಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಬುಧವಾರ ಕೊನೆಯುಸಿರೆಳೆದಿದ್ದಾಳೆ.
ತಾಲೂಕಿನಲ್ಲಿ ಡೆಂಘೆ ಜ್ವರದಿಂದ ಮೃತಪಟ್ಟ ಎರಡನೇ ಪ್ರಕರಣ. ಇದು ಜನರಲ್ಲಿ ಆತಂಕ ಉಂಟು ಮಾಡಿದೆ.ಕಳೆದ ವಾರ ಹಳ್ಳಿಮೈಸೂರು ಗ್ರಾಮದ ಬಾಲಕಿ ಸಾವಿಗೀಡಾಗಿದ್ದಳು.