Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಸರಣಿ ವಶಕ್ಕೆ ಇನ್ನೊಂದು ಚಾನ್ಸ್

Tuesday, 13.02.2018, 3:04 AM       No Comments

ಪೋರ್ಟ್​ಎಲಿಜಬೆತ್: ಮಳೆ ಅಡಚಣೆ, ನಾಯಕ ವಿರಾಟ್ ಕೊಹ್ಲಿಯ ಯೋಜನೆ, ರಿಸ್ಟ್ ಸ್ಪಿನ್ನರ್​ಗಳ ಕೈಚಳಕ ಕೈಗೂಡದ ಪರಿಣಾಮ ಟೀಮ್ ಇಂಡಿಯಾಗೆ ವಾಂಡರರ್ಸ್​ನಲ್ಲಿ ಚೊಚ್ಚಲ ಹಾಗೂ ಐತಿಹಾಸಿಕ ಏಕದಿನ ಸರಣಿ ಗೆಲ್ಲುವ ಅವಕಾಶ ಕೈ ತಪ್ಪಿತ್ತು. ಇದೀಗ ಆ ಕನಸನ್ನು ನನಸುಗೊಳಿಸಲು ಸೇಂಟ್ ಜಾರ್ಜ್್ಸ ಪಾರ್ಕ್​ನಲ್ಲಿ 2ನೇ ಅವಕಾಶ ಎದುರಾಗಿದೆ.

6 ಪಂದ್ಯಗಳ ಏಕದಿನ ಸರಣಿಯಲ್ಲಿ 3-1 ಮುನ್ನಡೆಯಲ್ಲಿರುವ ಭಾರತ ಮಂಗಳವಾರ ನಡೆಯಲಿರುವ 5ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲು ಸನ್ನದ್ಧವಾಗಿದೆ. ಪೋರ್ಟ್ ಎಲಿಜಬೆತ್​ನಲ್ಲಿ ದುರ್ಬಲ ಕೀನ್ಯಾ ವಿರುದ್ಧ ಸೇರಿದಂತೆ ಆಡಿರುವ ಎಲ್ಲಾ 5 ಪಂದ್ಯಗಳನ್ನು ಸೋತಿರುವ ಭಾರತ ಚೊಚ್ಚಲ ಗೆಲುವಿಗೂ ಹೋರಾಡಲಿದೆ. ಪಿಂಕ್ ಜೆರ್ಸಿಯಲ್ಲಿ ಆಡಿದ್ದ ಕಳೆದ ಪಂದ್ಯವನ್ನು ಗೆದ್ದ ದಕ್ಷಿಣ ಆಫ್ರಿಕಾ ಸರಣಿ ಸಮಬಲಗೊಳಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತ್ತು. ಇದನ್ನು ವಿಸ್ತರಿಸಿಕೊಳ್ಳುವ ದೃಷ್ಟಿಯಿಂದ ಸ್ಪೋಟಕ ಬ್ಯಾಟ್ಸ್​ಮನ್ ಎಬಿಡಿ ವಿಲಿಯರ್ಸ್​ರ ಬಲದೊಂದಿಗೆ ಹೋರಾಡುವ ಯೋಜನೆಯಲ್ಲಿದೆ.

ಸೇಂಟ್ ಜಾರ್ಜ್ಸ್ ಪಾರ್ಕ್​ನಲ್ಲಿ ಭಾರತ ಜಯ ಕಂಡಲ್ಲಿ ಇದು ಈ ಮೈದಾನದಲ್ಲಿ ತಂಡದ ಮೊದಲ ಗೆಲುವಾಗುವುದರೊಂದಿಗೆ ದಕ್ಷಿಣ ಆಫ್ರಿಕಾ ನೆಲದ ಐತಿಹಾಸಿಕ ಸರಣಿ ವಶಕ್ಕೂ ಕಾರಣವಾಗಲಿದೆ. ಕಳೆದ ಪಂದ್ಯದಲ್ಲಿ ಸೋತರೂ ಮಳೆ ಭಾರತಕ್ಕೆ ಹಿನ್ನಡೆ ತಂದಿತ್ತು. ಆದರೆ ಮೂರು ಜಯ ಕಂಡರೂ ತಂಡದ ಎಲ್ಲಾ ಆಟಗಾರರಿಂದ ಪೂರ್ಣ ಹೋರಾಟ ಮೂಡಿಬಂದಿಲ್ಲ. ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ- ಶಿಖರ್ ಧವನ್​ರ ಆಕರ್ಷಕ ಬ್ಯಾಟಿಂಗ್, ರಿಸ್ಟ್ ಸ್ಪಿನ್ ಜೋಡಿ ಕುಲದೀಪ್-ಚಾಹಲ್​ರ ಕರಾರುವಾಕ್ ಬೌಲಿಂಗ್ ಈ ಗೆಲುವುಗಳ ಪ್ರಮುಖ ಪಾಲು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಹಾಗೂ ವೇಗ ಬೌಲಿಂಗ್​ನಿಂದ ಇನ್ನೂ ಹರಿಣಗಳ ಪಾಲಿಗೆ ಪರಿಣಾಮವೆನಿಸುವ ಪ್ರತಿರೋಧ ನೀಡಬೇಕಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್-ಬೌಲಿಂಗ್​ನಲ್ಲೂ ನೀರಸವಾದರೆ, ಶ್ರೇಯಸ್ ಅಯ್ಯರ್ ಕೂಡಾ 4ನೇ ಪಂದ್ಯದಲ್ಲಿ ಅವಕಾಶ ಹಾಳುಮಾಡಿಕೊಂಡಿದ್ದರು. ಹೀಗಾಗಿ ಅಯ್ಯರ್, ಕೇದಾರ್ ಜಾಧವ್​ಗಿಂತ ಹೆಚ್ಚು ಅನುಭವಿಯಾಗಿರುವ ಮನೀಷ್ ಪಾಂಡೆಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಇನ್ನು ಬ್ಯಾಟಿಂಗ್​ನಲ್ಲಿ ಆರಂಭಿಕ ರೋಹಿತ್ ಶರ್ಮ ಸತತ ವೈಫಲ್ಯ ಅಜಿಂಕ್ಯ ರಹಾನೆಯ ಅಸ್ಥಿರ ಆಟ ತಂಡಕ್ಕಿರುವ ಇನ್ನೊಂದು ತಲೆನೋವು. ಕೊಹ್ಲಿ(393ರನ್ ) ಮತ್ತು ಧವನ್ (271)ಹೊರತುಪಡಿಸಿ ಇನ್ನುಳಿದ ಎಲ್ಲಾ ಬ್ಯಾಟ್ಸ್​ಮನ್​ಗಳ ಸರಣಿಯಲ್ಲಿ ಇದುವರೆಗೆ ಒಟ್ಟುಗೂಡಿಸಿರುವ ರನ್ ಕೇವಲ 239. ಜತೆಗೆ ಕೊಹ್ಲಿ ನಾಯಕನಾಗಿ ಟಾಸ್ ಗೆಲುವು ಹಾಗೂ ಬೌಲರ್​ಗಳನ್ನು ಜಾಣತನದಿಂದ ಬಳಸಿಕೊಳ್ಳಬೇಕಿದೆ.-ಏಜೆನ್ಸೀಸ್

ಟೀಮ್ ಇಂಡಿಯಾ ಈ ಪಂದ್ಯವನ್ನು ಗೆದ್ದರೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಬಾರಿ ದ್ವಿಪಕ್ಷೀಯ ಏಕದಿನ ಸರಣಿ ಜಯಿಸಿದ ಇತಿಹಾಸ ನಿರ್ವಿುಸಲಿದೆ. ಹರಿಣಗಳ ನಾಡಿನಲ್ಲಿ ಭಾರತ ಇದುವರೆಗೆ ಆಡಿರುವ 5 ಸರಣಿಗಳಲ್ಲೂ ಸೋಲಿನ ಕಹಿ ಎದುರಿಸಿತ್ತು.

ಸಮಬಲದ ಗುರಿ

ದಕ್ಷಿಣ ಆಫ್ರಿಕಾಗೆ ಸರಣಿ ಗೆಲುವಿನ ಅವಕಾಶ ಕೈತಪ್ಪಿದರೂ ಸಮಬಲದ ಅವಕಾಶ ಇನ್ನೂ ಇದೆ. ಜತೆಗೆ ಈ ಮೈದಾನದಲ್ಲಿ 20 ಗೆಲುವಿನ ದಾಖಲೆ ಹೊಂದಿರುವ ಆತಿಥೇಯರಿಗೆ ವಿಲಿಯರ್ಸ್ ತಂಡಕ್ಕೆ ಮರಳಿರುವುದು ಆತ್ಮ ಸ್ಥೈರ್ಯವನ್ನು ಹೆಚ್ಚಿಸಿದೆ. ನಿರ್ಣಾಯಕ ಹಂತದಲ್ಲಿ ಮಿಂಚಿದ ಡೇವಿಡ್ ಮಿಲ್ಲರ್ ಹಾಗೂ ಹೆನ್ರಿಕ್ ಕ್ಲಾಸೆನ್ ಇಲ್ಲೂ ಭಾರತಕ್ಕೆ ಸವಾಲಾಗಲಿದ್ದಾರೆ. ಬೌಲಿಂಗ್​ನಲ್ಲಿ ಇದುವರೆಗೆ ಪರಿಣಾಮಕಾರಿ ಎನಿಸದಿದ್ದರೂ ಡೆತ್ ಓವರ್​ಗಳಲ್ಲಿ ರನ್​ಗೆ ಕಡಿವಾಣ ಹೇರುವಲ್ಲಿ ಯಶ ಕಂಡಿರುವ ರಬಾಡ, ಎನ್​ಗಿಡಿ, ಮಾರ್ಕೆಲ್ ಪಡೆ ಭಾರತ ಅತಿಯಾಗಿ ನಂಬಿಕೊಂಡಿರುವ ಕೊಹ್ಲಿ, ಧವನ್​ಗೆ ರಣತಂತ್ರ ಹೆಣೆದಿರಬಹುದು. ರಿಸ್ಟ್ ಸ್ಪಿನ್ನರ್​ಗಳನ್ನು ಆತಿಥೇಯ ತಂಡ ಇನ್ನಷ್ಟು ಎಚ್ಚರಿಕೆಯಿಂದ ಎದುರಿಸಬೇಕಿದೆ.

ಆರಂಭ: ಸಂಜೆ 4.30

ನೇರಪ್ರಸಾರ: ಸೋನಿ ಇಎಸ್​ಪಿಎನ್

ಭಾರತ: ಧವನ್, ರೋಹಿತ್, ಕೊಹ್ಲಿ(ನಾಯಕ), ರಹಾನೆ, ಶ್ರೇಯಸ್/ ಮನೀಷ್/ ಕೇದಾರ್, ಧೋನಿ(ವಿ.ಕೀ.), ಹಾರ್ದಿಕ್, ಚಾಹಲ್/ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್​ಪ್ರೀತ್ ಬುಮ್ರಾ.

ದಕ್ಷಿಣ ಆಫ್ರಿಕಾ: ಏಡೆನ್ ಮಾರ್ಕ್ರಮ್​ನಾಯಕ), ಹಾಶಿಂ ಆಮ್ಲ, ಜೆಪಿ ಡುಮಿನಿ, ಎಬಿಡಿ ವಿಲಿಯರ್ಸ್, ಡೇವಿಡ್ ಮಿಲ್ಲರ್, ಹೆನ್ರಿಕ್ ಕ್ಲಾಸೆನ್(ವಿ.ಕೀ.), ಆಂಡಿಲ್ ಪೆಹ್ಲುಕ್​ವಾಯೊ, ಕ್ರಿಸ್ ಮೋರಿಸ್, ಕಗಿಸೋ ರಬಾಡ, ಲುಂಜಿಸಾನಿ ಎನ್​ಗಿಡಿ, ಮಾರ್ನ್ ಮಾರ್ಕೆಲ್.

ಪೋರ್ಟ್ ಎಲಿಜಬೆತ್​ನಲ್ಲಿ ಗೆದ್ದಿಲ್ಲ

ಟೀಮ್ ಇಂಡಿಯಾ ಪೋರ್ಟ್ ಎಲಿಜಬೆತ್​ನಲ್ಲಿ ಆಡಿರುವ ಎಲ್ಲಾ 5 ಪಂದ್ಯಗಳನ್ನು ಸೋತಿದೆ. ಅವುಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 4ರಲ್ಲಿ ಸೋತರೆ, ಕೀನ್ಯಾ ತಂಡದ ಎದುರು ಇಲ್ಲೆ ಸೋಲಿನ ಆಘಾತ ಕಂಡಿತ್ತು. ಇಲ್ಲಿ ಆತಿಥೇಯರ ವಿರುದ್ಧ 2011ರಲ್ಲಿ ಆಡಿದ ಕೊನೇ ಪಂದ್ಯದಲ್ಲಿ ಭಾರತ ಡಕ್​ವರ್ತ್ ಲೂಯಿಸ್ ನಿಯಮದನ್ವಯ 48 ರನ್​ಗಳಿಂದ ಸೋತಿತ್ತು. ಅಂದು ವಿರಾಟ್ ಕೊಹ್ಲಿ ಮಾತ್ರ 87 ರನ್ ಬಾರಿಸಿದ್ದರು.

ಪಂದ್ಯಕ್ಕೆ ಮಳೆ ಭೀತಿ

ಪೋರ್ಟ್ ಎಲಿಜಬೆತ್​ನಲ್ಲಿ ಮಳೆ ಸುರಿಯುತ್ತಿದ್ದು, ಪಂದ್ಯದ ವೇಳೆಯೂ ಅಡ್ಡಿಪಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಪಿಚ್ ಬ್ಯಾಟಿಂಗ್​ಗೆ ಸವಾಲಾಗಲಿದೆ. ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳ ಕೊನೇ 2 ಇನಿಂಗ್ಸ್​ಗಳ ಮೊತ್ತ ಕ್ರಮವಾಗಿ 181 ಮತ್ತು 167. ಸ್ಪಿನ್ನರ್​ಗಳಿಗೆ ಹೆಚ್ಚಿನ ನೆರವು ನೀಡಲಿದೆ.

ಧೋನಿ ಇನ್ನು 46 ರನ್ ಬಾರಿಸಿದರೆ, 10 ಸಾವಿರ ರನ್ ಪೂರೈಸಿದ ವಿಶ್ವದ 12ನೇ ಹಾಗೂ ಭಾರತದ 4ನೇ ಬ್ಯಾಟ್ಸ್​ಮನ್ ಎಂಬ ಸಾಧನೆ ಮಾಡಲಿದ್ದಾರೆ. ದಿಗ್ಗಜ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ 10 ಸಾವಿರ ರನ್ ದಾಟಿರುವ ಭಾರತದ ಮೂವರು ಸಾಧಕರು.

Leave a Reply

Your email address will not be published. Required fields are marked *

Back To Top