12ರಿಂದ ಅಕ್ಕಿ ಗಿರಣಿದಾರರ ಸಂಘದ ವಾರ್ಷಿಕ ಸಭೆ

ಹಾಸನ: ನಗರದ ಹೊರವಲಯದ ಪವನಪುತ್ರ ಹೋಟೆಲ್ ಸಭಾಂಗಣದಲ್ಲಿ ಅ.12 ಹಾಗೂ 13 ರಂದು ರಾಜ್ಯ ಅಕ್ಕಿ ಗಿರಣಿದಾರರ ಸಂಘದ 28ನೇ ವಾರ್ಷಿಕ ಮಹಾಸಭೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಆರ್.ಶಿವಾನಂದ ತಿಳಿಸಿದರು.

ಅ. 12ರಂದು ಬೆಳಗ್ಗೆ 8.30ಕ್ಕೆ ಗಂಗಾವತಿ ಕ್ಷೇತ್ರ ಶಾಸಕ ಹಾಗೂ ರಾಜ್ಯ ಸಂಘದ ಅಧ್ಯಕ್ಷ ಪರಣ್ಣ ಮುನವಳ್ಳಿ ಕಾರ್ಯಕ್ರಮ ಉದ್ಘಾಟಿಸುವರು. ಚೆನ್ನೈನ ಶ್ರೀಮೂಕಾಂಬಿಕಾ ರೈಸ್ ಆ್ಯಂಡ್ ಫುಡ್ ಗ್ರೈನ್ಸ್ ವತಿಯಿಂದ ಟೆಕ್ ಎಕ್ಸ್‌ಪೋ-2019 ಏರ್ಪಡಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಹೇಳಿದರು.

ದೇಶದ 70 ಕಂಪನಿಗಳ ಅಕ್ಕಿ ಗಿರಣಿ ಯಂತ್ರೋಪಕರಣಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ರಾಜ್ಯದಲ್ಲಿ 2,500 ಅಕ್ಕಿ ಗಿರಣಿಗಳಿದ್ದು ಅದರ ಎಲ್ಲ ಮಾಲೀಕರು ಪಾಲ್ಗೊಳ್ಳುತ್ತಾರೆ. ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀಶಂಭುನಾಥ ಸ್ವಾಮೀಜಿ, ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಶ್ರೀ ಡಾ.ಕರಿವೃಷಭ ದೇಶಿಕೇಂದ್ರ ಹಾಗೂ ಬಸವಾಪಟ್ಟಣ ತೋಂಟದಾರ್ಯ ಸಂಸ್ಥಾನ ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸಂಸದ ಪ್ರಜ್ವಲ್ ರೇವಣ್ಣ, ಜಿಲ್ಲೆಯ ಎಲ್ಲ ಶಾಸಕರು ಭಾಗವಹಿಸಲಿದ್ದು, ಅಕ್ಕಿ ಗಿರಣಿ ಮಾಲೀಕರು ಎದುರಿಸುತ್ತಿರುವ ಸಮಸ್ಯೆಯನ್ನು ಸರ್ಕಾರಕ್ಕೆ ತಲುಪಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಸಂಘದ ಪದಾಧಿಕಾರಿಗಳಾದ ಪ್ರಸನ್ನ, ಕೃಷ್ಣೇಗೌಡ, ಸುದರ್ಶನ್, ಮಹೇಶ್ ಸುದ್ದಿಗೋಷ್ಠಿಯಲ್ಲಿ ಇದ್ದರು.

 

Leave a Reply

Your email address will not be published. Required fields are marked *