More

    ಸಾಲ ಮರುಪಾವತಿಯಿಂದ ಸಂಘ ಯಶಸ್ವಿ

    ಬಸವಾಪಟ್ಟಣ: ರೈತರು ಸಹಕಾರ ಸಂಘದಿಂದ ಪಡೆದ ಸಾಲವನ್ನು ನಿಗದಿತ ಅವಧಿಯ ಒಳಗೆ ಮರುಪಾವತಿ ಮಾಡುವುದರಿಂದ ಸಂಘ ಯಶಸ್ಸು ಸಾಧಿಸಲು ಸಾಧ್ಯವಾಗಿದೆ ಎಂದು ಸಂಘದ ಅಧ್ಯಕ್ಷ ಜಿ.ಎಲ್. ಬಸವರಾಜಪ್ಪ ಹೇಳಿದರು.

    ಸಮೀಪದ ಬಳಲಗೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.

    ಸಹಕಾರ ಸಂಘದಿಂದ ದೊರೆಯುವ ಜೀರೋ ಪಸೆರ್ಂಟ್ ಸಾಲವ ಪಡೆದು ರೈತರು ನಿಗದಿತ ಅವಧಿಯ ಒಳಗೆ ಮರುಪಾವತಿ ಮಾಡುವ ಮೂಲಕ ಸಂಘದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಶ್ಲಾಘಿಸಿದರು.

    ಸಂಘದ ಉಪಾಧ್ಯಕ್ಷ ಕೆ.ಎಚ್. ಅಂಜನಪ್ಪ, ನಿರ್ದೇಶಕರಾದ ಗಣೇಶಪ್ಪ, ಡಿ.ಎನ್. ಪರಮೇಶ್ವರಪ್ಪ, ಕೆ.ಕೆ. ರಾಜಪ್ಪ, ಪ್ರಕಾಶಪ್ಪ, ರುದ್ರಪ್ಪ, ಮಾದಪ್ಪ, ಕುಬೇಂದ್ರಪ್ಪ, ಗುಡ್ಡಪ್ಪ, ಶಾಂತಮ್ಮ, ಜಯಮ್ಮ, ಕಾರ್ಯದರ್ಶಿ ಎಚ್.ಎಂ. ನಾಗರಾಜ್ ಮತ್ತು ಗ್ರಾಮಸ್ಥರು ಇದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 23

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts