ಜೆಎಸ್‌ಎಸ್ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

ಮೈಸೂರು: ನಗರದ ಬಿ.ಎನ್.ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ನಡೆಯಿತು. ಕಾಲೇಜಿನ ಮುಖ್ಯಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಪಠ್ಯೇತರ ಚಟುವಟಿಕೆಗಳಲ್ಲಿ ಕ್ರೀಡೆಯು ಮುಖ್ಯವಾದದು. ಇದರಿಂದ ಉತ್ತಮ ಆರೋಗ್ಯ, ದೈಹಿಕ ಸದೃಢತೆ, ಏಕಾಗ್ರತೆ ಮತ್ತು ನಾಯಕತ್ವದ ಗುಣಗಳು ಅಭಿವೃದ್ಧಿಯಾಗಲಿದೆ. ಜತೆಗೆ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗಲಿದೆ ಎಂದರು.ಪ್ರಾಂಶುಪಾಲ ಪ್ರೊ.ಎಂ.ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಎಂ.ಕಾರ್ತಿಕ್, ಸಹಪ್ರಾಧ್ಯಾಪಕರಾದ ಬಿ.ಎಲ್.ಕಿರಣ್, ಆರ್.ಮಲ್ಲೇಶ್, ಎನ್‌ಸಿಸಿ ಅಧಿಕಾರಿ ಡಾ.ಎಲ್ ವಿನಯ್‌ಕುಮಾರ್, ವಿದ್ಯಾರ್ಥಿ ವೃಷಭೇಂದ್ರ ಪಾಲ್ಗೊಂಡಿದ್ದರು