ಅರಕಲಗೂಡು: ತಾಲೂಕಿನ ಶಣವಿನಕುಪ್ಪೆ ಗ್ರಾಮದಲ್ಲಿ ಇತ್ತೀಚೆಗೆ ಇತಿಹಾಸ ಪ್ರಸಿದ್ಧ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ವಾರ್ಷಿಕ ಮಹೋತ್ಸವ ಹಾಗೂ ಕಾರ್ತಿಕ ದೀಪೋತ್ಸವ ನಡೆಯಿತು.
ಪುರಾತನ ಕಾಲದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯ ಶಿಥಿಲಗೊಂಡಿದ್ದರಿಂದ ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದ ನೂತನ ದೇವಾಲಯ ಸ್ಥಾಪಿಸಿ ಉದ್ಘಾಟನೆ ಭಾಗ್ಯ ಕಂಡು ವರ್ಷ ಪೂರೈಸಿತ್ತು. ಈ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ, ಮಹಾ ಮಂಗಳಾರತಿ ಹಾಗೂ ಕಾರ್ತಿಕ ದೀಪೋತ್ಸವ ನಡೆಯಯಿತು. ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಸಂಜೆ ಮನರಂಜನಾ ಕಾರ್ಯಕ್ರಮ ನಡೆಯಿತು.
ದೊಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಗ್ರಾಮಸ್ಥರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ಶ್ರೀ ವೀರಭದ್ರೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಸಂತೋಷ್, ಊರಿನ ಮುಖಂಡರಾದ ನಂಜುಂಡಪ್ಪ, ರಾಜಣ್ಣ, ನಿಂಗರಾಜು, ರಾಜೇಗೌಡ, ಅರ್ಚಕ ನಂದೀಶ, ಹೇಮಂತಕುಮಾರ್ ಅವರನ್ನು ಗೌರವಿಸಲಾಯಿತು.
TAGGED:ArakalaguduHassanಅನ್ನ ಸಂತರ್ಪಣೆಅರಕಲಗೂಡುಅರ್ಚಕ ನಂದೀಶಊರಿನ ಮುಖಂಡರಾದ ನಂಜುಂಡಪ್ಪಕಾರ್ತಿಕ ದೀಪೋತ್ಸವದೊಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿನಿಂಗರಾಜುಮಹಾ ಮಂಗಳಾರತಿರಾಜಣ್ಣರಾಜೇಗೌಡರುದ್ರಾಭಿಷೇಕವಾರ್ಷಿಕ ಮಹೋತ್ಸವವಿಶೇಷ ಪೂಜೆಶಣವಿನಕುಪ್ಪೆ ಗ್ರಾಮಶ್ರೀ ವೀರಭದ್ರೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಸಂತೋಷ್ಶ್ರೀ ವೀರಾಂಜನೇಯಸ್ವಾಮಿ ದೇವಾಲಯಹಾಸನಹೇಮಂತಕುಮಾರ್