ವಿಜೃಂಭಣೆಯ ಮಹಲಿಂಗೇಶ್ವರ ದೇವರ ವಾರ್ಷಿಕ ಹಬ್ಬ

ನಾಪೋಕ್ಲು: ಪಾಲೂರು ಗ್ರಾಮದಲ್ಲಿ ಶ್ರೀ ಮಹಲಿಂಗೇಶ್ವರ ದೇವರ ವಾರ್ಷಿಕ ಹಬ್ಬ ವಿಜೃಂಭಣೆಯಿಂದ ಜರುಗಿತು.
ಏ.13 ರಂದು ಪೂದಕೋಲದೊಂದಿಗೆ ಉತ್ಸವ ಆರಂಭಗೊಂಡಿದ್ದು, 18ರಂದು ನಡೆದ ದೊಡ್ಡಹಬ್ಬದಲ್ಲಿ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ತುಲಾಭಾರ ಸೇವೆ, ನಿತ್ಯಬಲಿ, ಎತ್ತುಪೊರಾಟ ಎಲ್ಲರ ಗಮನ ಸೆಳೆಯಿತು. ಬಳಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಅಪರಾಹ್ನ ಜೋಡುದೇವರ ನೃತ್ಯಬಲಿ ಜರುಗಿತು.
ಶನಿವಾರ ಸಂಜೆ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ದೇವರ ದರ್ಶನ, ಪವಿತ್ರ ಕಾವೇರಿ ನದಿಯಲ್ಲಿ ದೇವರ ಮೂರ್ತಿಗಳ ಜಳಕ, ಉತ್ಸವ ಮೂರ್ತಿಗಳ ಮೆರವಣಿಗೆ ನಂತರ ಜೋಡುದೇವರ ನೃತ್ಯ ಬಲಿ ನಡೆಯಿತು.

ದಾನಿಗಳ ಸಹಾಯದಿಂದ ವಿಗ್ರಹ ಮೂರ್ತಿಗೆ ಬೆಳ್ಳಿಯ ಮುಖವಾಡವನ್ನು ಅರ್ಪಿಸಲಾಯಿತು. ತಕ್ಕ ಮುಖ್ಯಸ್ಥರು, ಸದಸ್ಯರು ಪಾಲ್ಗೊಂಡಿದ್ದರು. ಮುಖ್ಯ ಅರ್ಚಕ ದೇವಿಪ್ರಸಾದ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿತು. ಶನಿವಾರ ರಾತ್ರಿ ವಿವಿಧ ದೇವರ ಕೋಲ ಉತ್ಸವ ನಡೆಯಲ್ಲಿದೆ. 21ರಂದು ವಿಷ್ಣುಮೂರ್ತಿ ದೇವರ ಕೋಲ ನಡೆಯಲಿದೆ ಎಂದು ದೇವಳದ ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *