ಅನ್ನಭಾಗ್ಯ ಹಣಕ್ಕೆ ಮೂರು ತಿಂಗಳಿಂದ ಗ್ರಹಣ:ಬಗೆಹರಿಸಲು ಆಹಾರ ಇಲಾಖೆ ವಿಫಲ

ಬೆಂಗಳೂರು:ರಾಜ್ಯದ ಜನಪ್ರಿಯ ಅನ್ನಭಾಗ್ಯ ಯೋಜನೆಗೆ ಗ್ರಹಣ ಬಡಿದಿದೆ. ಮೂರು ತಿಂಗಳಿಂದ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಸರ್ವರ್​ ಸೇರಿ ಕೆಲ ತಾಂತ್ರಿಕ ಸಮಸ್ಯೆಗಳು ಹಾಗೂ ಅಧಿಕಾರಿಗಳ ರ್ನಿಲಕ್ಷ್ಯದಿದಾಗಿ ಮಾರ್ಚ್​ನಿಂದ ಮೇವರೆಗೆ ಬಿಪಿಎಲ್​, ಅಂತ್ಯೋದಯ ಕಾರ್ಡ್​ದಾರರ ಖಾತೆಗೆ ಹಣ ಹಾಕಿಲ್ಲ. ಇದರಿಂದಾಗಿ ದಿನದಿಂದ ದಿನಕ್ಕೆ ಪ್ರತಿಷ್ಠಿತ ಯೋಜನೆ ಹಳ್ಳ ಹಿಡಿಯುವತ್ತ ಸಾಗುವಂತಾಗಿದೆ.

ಯೋಜನೆಯಡಿ ಪ್ರತಿ ತಿಂಗಳು ಬಿಪಿಎಲ್​, ಎಪಿಎಲ್​ ಸೇರಿ ಒಟ್ಟು 1,13,48,463 ಕಾರ್ಡ್​ಗಳಿಗೆ 660 ಕೋಟಿ ರೂ.ಜಮೆ ಮಾಡಲಾಗುತ್ತದೆ. ಲೋಕಸಭಾ ಚುನಾವಣಾ ಘೋಷಣೆಗೂ ಮುನ್ನ ಅಂದರೆ ಜನವರಿ ಮತ್ತು ಫೆಬ್ರವರಿ ತಿಂಗಳ ಹಣವೂ ಖಾತೆದಾರರಿಗೆ ಬಂದಿರಲಿಲ್ಲ. ಬಳಿಕ, ತಾಂತ್ರಿಕ ಸಮಸ್ಯೆ ಬಗೆಹರಿಸಿ ಎರಡು ತಿಂಗಳ ಹಣವನ್ನು ಮಾರ್ಚ್​ನಲ್ಲಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿತ್ತು. ಇದೀಗ ಮಾರ್ಚ್​ನಿಂದ ಮೇವರೆಗೆ ಹಣ ಬಂದಿಲ್ಲ.

ಅಕ್ಕಿ ಬದಲಿಗೆ ಹಣ: 
ಚುನಾವಣೆ ವೇಳೆ ನೀಡಿದ್ದ ಆಶ್ವಾಸನೆಯಂತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಅನ್ನಭಾಗ್ಯ ಸೇರಿ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು. ಬಳಿಕ ಮತದಾರರಿಗೆ ಕೊಟ್ಟಿರುವ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಅಕ್ಕಿ ನೀಡುವಂತೆ ಕೇಂದ್ರ ಬಳಿ ಬೇಡಿಕೆ ಇಟ್ಟಿದ್ದರು. ಆದರೆ ಕೇಂದ್ರ ಅಕ್ಕಿ ನೀಡದ ಕಾರಣ ವಿವಿಧ ರಾಜ್ಯಗಳ ಸಿಎಂಗೆ ಮನವಿ ಸಲ್ಲಿಸಿ, ಸಾಕಷ್ಟು ಪ್ರಯತ್ನಪಟ್ಟರೂ ಹೆಚ್ಚುವರಿ ಅಕ್ಕಿ ಸಿಗಲಿಲ್ಲ. ಇದೇ ಕಾರಣಕ್ಕೆ ಕೇಂದ್ರ&ರಾಜ್ಯಗಳ ನಡುವೆ ಸಾಕಷ್ಟು ಜಟಾಪಟಿ ನಡೆಯಿತು. ಅಂತಿಮವಾಗಿ ಬಿಪಿಎಲ್​, ಅಂತ್ಯೋದಯ ಕಾರ್ಡ್​ದಾರರಿಗೆ ಅಕ್ಕಿ ಬದಲು ನೇರ ನಗದು ವರ್ಗಾವಣೆ ಮಾಡಲು ತೀರ್ಮಾನಿಸಿ, 2023ರ ಜುಲೈ10ರಿಂದ ಜಾರಿಗೆ ತರಲಾಯಿತು. ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ (ಎನ್​ಐಸಿ) ಲಾನುಭವಿಗಳ ಮಾಹಿತಿಯನ್ನು ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ಡಿಬಿಟಿ ಪೋರ್ಟಲ್​, ಖಜಾನೆ ಇಲಾಖೆ ಕೆ2 ಪೋರ್ಟಲ್​ ಮೂಲಕ ಬಿಪಿಎಲ್​ ಕಾರ್ಡ್​ನ ಪ್ರತಿ ಸದಸ್ಯನಿಗೆ ಕೆಜಿಗೆ 34 ರೂ.ನಂತೆ 5 ಕೆಜಿ ಅಕ್ಕಿಗೆ 170 ರೂ.ಗಳನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಹಾಕಲಾಗುತ್ತಿದೆ. ಅಂತ್ಯೋದಯ ಕಾರ್ಡ್​ನಲ್ಲಿ ನಾಲ್ಕು ಸದಸ್ಯರಿದ್ದರೆ ಕುಟುಂಬಕ್ಕೆ 170 ರೂ, ಐದು ಸದಸ್ಯರಿದ್ದರೆ 510 ರೂ, ಆರು ಸದಸ್ಯರಿದ್ದರೆ 850 ರೂ. ಹಾಕಲಾಗುತ್ತಿದೆ.

ಏಕಾಏಕಿ ಕಾರ್ಡ್​ಗಳು ಮಾರ್ಪಾಡು:
ಧನಭಾಗ್ಯ ಸೌಲಭ್ಯದಿಂದ ವಂಚಿತರಾದ ಕೆಲ ಕಾರ್ಡ್​ದಾರರು ಗೃಹಲಕ್ಷಿ ಯೋಜನೆಯಿಂದ ದೂರವುಳಿಯುವಂತಾಗಿದೆ. ನೈಜ ಫಲಾನುಭವಿಗಳು ಹಣ ಪಡೆಯಲು ಒಂದಿಲ್ಲೊಂದು ತಾಂತ್ರಿಕ ಅಂಶಗಳು ಅಡ್ಡಿಯಾಗುತ್ತಿವೆ. ಕಾರ್ಡ್​ನಲ್ಲಿರುವ ಕುಟುಂಬದ ಮುಖ್ಯಸ್ಥರ ಹೆಸರು ಆಧಾರ್​, ಪ್ಯಾನ್​ಕಾರ್ಡ್​ ಹೊಂದಿಕೆ ಆಗದಿದ್ದರೆ ಹಣ ಬರುವುದಿಲ್ಲ. ಬ್ಯಾಂಕ್​ ಖಾತೆಗೆ ಆಧಾರ್​ ಜೋಡಣೆ ಮಾಡಿಸಿದ್ದರೂ ಭಾರತದ ರಾಷ್ಟ್ರೀಯ ಪಾವತಿ ನಿಗಮಕ್ಕೆ (ಎನ್​ಪಿಸಿಐ)ಲಿಂಕ್​ ಮಾಡಿಸಿದ್ದರಷ್ಟೆ ಹಣ ಸಂದಾಯವಾಗುತ್ತದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಹಣ ಬಂದಿದೆ ಎಂದು ವೆಬ್​ಸೈಟ್​ನಲ್ಲಿ ತೋರಿಸುತ್ತಿದ್ದರೂ ಖಾತೆಗೆ ಜಮೆಯಾಗುತ್ತಿಲ್ಲ. ಕೆಲ ಸಂದರ್ಭದಲ್ಲಿ ಕುಟುಂಬದ ಮುಖ್ಯಸ್ಥರ ಖಾತೆಗೆ ಬದಲು ಕಾರ್ಡ್​ನಲ್ಲಿದ್ದ ಬೇರೆ ಸದಸ್ಯರಿಗೆ ಹಣ ಜಮೆಯಾಗುತ್ತಿದೆ. ಕೆಲ ಬಿಪಿಎಲ್​ ಕಾರ್ಡ್​ಗಳು ಏಕಾಏಕಿ ಅಂತ್ಯೋದಯ ಕಾರ್ಡ್​ಗಳಾಗಿ, ಕೆಲ ಅಂತ್ಯೋದಯ ಕಾರ್ಡ್​ಗಳು ಬಿಪಿಎಲ್​ ಆಗಿ ಮಾರ್ಪಾಡು ಆಗುತ್ತಿವೆ. ಹೀಗಾಗಿ, 35 ಕೆಜಿ ಬದಲು 15 ಕೆಜಿ ಅಕ್ಕಿ ಮಾತ್ರ ಅರ್ಹತೆಯೆಂದು ಆನ್​ಲೈನ್​ನಲ್ಲಿ ತೋರಿಸಲಾಗುತ್ತಿದೆ.

ನಾಮಧಾರಿ ನಾಯಕರನ್ನು ಮುಗಿಸಲು ಕಾಂಗ್ರೆಸ್‌ ಹುನ್ನಾರ-ಪ್ರಣವಾನಂದ ಸ್ವಾಮೀಜಿ ಆರೋಪ

ದೀರ್ಘ ಪ್ರಕ್ರಿಯೆಯೆಂದ ಇಲಾಖೆ
ಡಿಬಿಟಿ ಮುಖೇನ ಕಾರ್ಡ್​ದಾರರ ಖಾತೆಗೆ ಹಣ ವರ್ಗಾವಣೆ ಮಾಡಲು ದೀರ್ ಪ್ರಕ್ರಿಯೆ ನಡೆಯುತ್ತದೆ. ಮೊದಲು ಎನ್​ಐಸಿ ವೆಬ್​ಸೈಟ್​ನಲ್ಲಿ ಕಾರ್ಡ್​ಗಳನ್ನು ನಮೂದಿಸಬೇಕು. ಬಳಿಕ ಇ&ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ಡಿಬಿಟಿ ಪೋರ್ಟಲ್​, ಖಜಾನೆ ಇಲಾಖೆಯ ಕೆ2 ಪೋರ್ಟಲ್​ನಲ್ಲಿ ಅರ್ಹತೆ ಇರುವ ಕಾರ್ಡ್​ಗಳಿಗೆ ಅನುಮೋದನೆ ಪಡೆಯಬೇಕು. ನಂತರ, ಆರ್​ಬಿಐ ಅನುಮತಿ ಸೇರಿ ಬೇರೆ ಬೇರೆ ಪ್ರಕ್ರಿಯೆಗಳು ಮುಗಿದ ಬಳಿಕ ಕಾರ್ಡ್​ದಾರರ ಖಾತೆಗೆ ನೇರವಾಗಿ ನಗದು ವರ್ಗಾವಣೆ ಮಾಡಬೇಕು. ಈ ಪ್ರಕ್ರಿಯೆಗೆ ಸಾಕಷ್ಟು ಸಮಯ ಬೇಕಾಗುವುದರಿಂದ ಕೆಲ ಕಾರ್ಡ್​ದಾರರಿಗೆ ಹಣ ವರ್ಗಕ್ಕೆ ತಡವಾಗಿದೆ ಎನ್ನುತ್ತಾರೆ ಆಹಾರ ಇಲಾಖೆ ಅಧಿಕಾರಿಗಳು.

ಜು.10ಕ್ಕೆ ಒಂದು ವರ್ಷ ತುಂಬಲಿದೆ
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ನಗದು ವರ್ಗಾವಣೆ ವ್ಯವಸ್ಥೆಗೆ ಜು.10ಕ್ಕೆ ಒಂದು ವರ್ಷ ತುಂಬಲಿದೆ. ಒಂದು ವರ್ಷ ತುಂಬಲು ಒಂದೂವರೆ ತಿಂಗಳು ಬಾಕಿ ಇರುವಾಗಲೇ ಪರಿಣಾಮಕಾರಿ ಯೋಜನೆ ಅನುಷ್ಠಾನಕ್ಕೆ ಪದೇಪದೆ ತಾಂತ್ರಿಕ ಅಂಶ ಅಡ್ಡಿಯಾಗುತ್ತಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇಲಾಖೆ ಸಚಿವರು, ಅಧಿಕಾರಿಗಳು ವಿಫಲರಾಗಿದ್ದಾರೆ.

Share This Article

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…

ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…