ಅಂಕೋಲಾ Ankola: ದೇವರ ದರ್ಶನ ನೀಡುವ ಮನೆಯೊಂದಕ್ಕೆ ಭಕ್ತಾದಿಗಳ ರೂಪದಲ್ಲಿ ಬಂದ ತಂಡವೊಂದು ದೇವಸ್ಥಾನದ ಒಳಪ್ರವೇಶವನ್ನು ವಿಕ್ಷಿಸಿದರು. ಅಲ್ಲಿರುವ ಎಲ್ಲಾ ಮೂರ್ತಿಗಳು ಬಂಗಾರವೆಂದು ತಿಳಿದ ಕಳ್ಳತನಕ್ಕೆ ಸಂಚು ಮಾಡಿ ಮನೆಯ ಒಳಗೆ ಪ್ರವೇಶಿಸಿ ಲಕ್ಷಾಂತರ ರೂ.ಮೌಲ್ಯದ ವಿವಿಧ ರೂಪದ ಲೋಹದ ಮೂರ್ತಿಗ ಳನ್ನು ಕಳ್ಳತನ ಎಸಗಿದ ಘಟನೆ ತಾಲೂಕಿನ ಹಿಲ್ಲೂರು ಗ್ರಾಪಂ. ವ್ಯಾಪ್ತಿಯ ತಿಂಗಳಬೈಲ್ ಗ್ರಾಮದಲ್ಲಿ ಡಿ.9 ರಾತ್ರಿವೇಳೆ ನಡೆದಿದೆ.
ಈ ಕುರಿತು ಮನೆಯ ಮಾಲಿಕ ಬೆಳಸೆ ಗ್ರಾಪಂ.ಪಿಡಿಓ ವಿಠ್ಠಲ ವಾಸು ಬಾಂದಿ ಪೊಲೀಸ್ ದೂರು ನೀಡಿ ದ್ದರು. ದೂರು ಸಲ್ಲಿಕೆಯಾಗಿ 24 ಗಂಟೆಯೊಳಗೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ.
ಕಾರವಾರ ಕದ್ರಾ ಕೆ.ಪಿ.ಸಿ.ಯ ನೌಕರ ಜಿ. ಶ್ರೀನಿವಾಸ ಗುರುಸ್ವಾಮಿ (41), ಕದ್ರಾ ರಾಜೀವ ನಗರದ ಮೌಲಾಲಿ ಮಹ್ಮದ ಅಜಾದ ಸೈಯದ (30) ಧಾರವಾಡ ಮೂಲತ ಹಾಲಿ ಕಾರವಾರ ಚಿತ್ತಾಕುಲ ನಿವಾಸಿ ಅಶೋಕ ಹನುಮಂತಪ್ಪ ಬಂಡಿವಡ್ಡರ (26), ಬೆಂಗಳೂರು ವೈಟಫೀಲ್ಡ್ದ (ಹಾಲಿ ಕದ್ರಾ) ನಿವಾಸಿ ಮುಬಾರಕ ಇಬ್ರಾಹಿಂ ಶೇಖ್ (26), ಎ.ಎಸ್.ಶೇಖ್ ಶರೀಪ್ ತಂದೆ ಎ.ಎಸ್.ಅಬ್ದುಲ್ ರಹೀಮ್ (36), ಮೈಸೂ ರಿನ ಫುರಖಾನ ಮೆಹಬೂನ ಖಾನ (22) ಬಂಧಿಸಿದರು.
Ankola ಕಳ್ಳತನ ಪ್ರಕರಣ
ಬಂಧಿತರಿಂದ 1.30 ಲಕ್ಷ ಮೌಲ್ಯದ 47 ಹಿತ್ತಾ ಳೆಯ ಲೋಹದ ದೇವರ ಮೂರ್ತಿಗಳು, 5 ಕಪಿಲ್ ಕಲ್ಲುಗುಂಡುಗಳನ್ನು ಹಾಗೂ ನೊಕಿಯಾ ಮೊಬೈಲ್ 1, ಕಳ್ಳತನದ ಕೃತ್ಯಕ್ಕೆ ಉಪಯೋಗಿಸಿದ ಇನ್ನೋವಾ ಕ್ರೀಸ್ಟಾ ಕಾರ್, ಮಹೀಂದ್ರಾ ಜೈಲೋ ಕಾರ್, ಡಿಯೋ ಸ್ಕೂಟರ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಳ್ಳತನಕ್ಕೆ ಎಸಗಿರುವ ಪೂರ್ವದಲ್ಲಿ ದೇವರ ದರ್ಶನಕ್ಕೆ ಬಂದಿದ್ದರು ಎನ್ನಲಾಗಿದೆ.
ಎಸ್ಪಿ ಎಂ.ನಾರಾಯಣ, ಎಎಸ್ಪಿ ಎಂ.ಜಗದೀಶ, ಡಿವೈಎಸ್ಪಿ ಗಿರೀಶ ಎಸ್.ವಿ. ಮಾರ್ಗದರ್ಶನದಲ್ಲಿAnkola ಪಿಐ ಚಂದ್ರಶೇಖರ ಮಠಪತಿ ನೇತೃತ್ವದಲ್ಲಿ ಆರೋಪಿಗಳ ಶೋಧನೆ ತಂಡವನ್ನು ರಚಿಸಿದರು. ಬಂಧನದ ಕಾರ್ಯಚರಣೆಯಲ್ಲಿ ಪಿಎಸ್‌ಐಗಳಾದ ಉದ್ದಪ್ಪ ಧರೆಪ್ಪನವರ, ಜಯಶ್ರೀ ಪ್ರಭಾಕರ, ಸಿಬ್ಬಂದಿಗಳಾದ ಪ್ರಶಾಂತ ನಾಯ್ಕ, ಮಾದೇವ ಸಿದ್ದಿ, ಅಂಬರೀಶ ನಾಯ್ಕ, ಶ್ರೀಕಾಂತ ಕಟಬರ, ಆಶೀಫ್ ಕುಂಕೂರು, ರೋಹಿದಾಸ ದೇವಾಡಿಗ, ಶಿವಾನಂದ ನಾಗರದಿನ್ನಿ, ಸತೀಶ ನಾಯ್ಕ ಪಾಲ್ಗೊಂಡಿದ್ದರು.
ಇದನ್ನೂ ಓದಿ: Accident ಶಿಕ್ಷಕ ಸ್ಥಳದಲ್ಲೇ ಸಾವು 5 ಶಿಕ್ಷಕರಿಗೆ ಗಾಯhttps://www.vijayavani.net/car-accident-teacher-dies-on-the-spot
https://www.facebook.com/share/p/1BSLnNxn7k/