ಸಾಸ್ವೆಹಳ್ಳಿ: ಇತ್ತೀಚೆಗೆ ಎಲ್ಲೆಂದರಲ್ಲಿ ದೇವರ ಹುಂಡಿ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ದೇವಸ್ಥಾನ ಸಮಿತಿಯವರು ಪ್ರತಿ ತಿಂಗಳಿಗೊಮ್ಮೆ ಅಥವಾ ವಾರಕ್ಕೊಮ್ಮೆ ಹುಂಡಿ ಹಣ ಎಣಿಸಿ ಬ್ಯಾಂಕ್ ಖಾತೆಗೆ ಜಮಾ ಮಾಡುವುದು ಉತ್ತಮ ಎಂದು ಪಿಐ ಸುನಿಲ್ ಕುಮಾರ್ ಸಲಹೆ ನೀಡಿದರು.
ಅವರು ಸಾಸ್ವೆಹಳ್ಳಿ ಸಮೀಪದ ಕಮ್ಮಾರಗಟ್ಟೆಯಲ್ಲಿ ಶುಕ್ರವಾರ ನಡೆದ ಆಂಜನೇಯ ಸ್ವಾಮಿಯ ಕಾರ್ಣಿಕೋತ್ಸವದಲ್ಲಿ ಸೇರಿದ್ದ ಸುತ್ತಮುತ್ತಲ ಗ್ರಾಮದ ದೇವಸ್ಥಾನದ ಸಮಿತಿಯವರೊಂದಿಗೆ ಮಾತನಾಡಿದರು.
ಹಲವು ತಿಂಗಳುಗಳ ಕಾಲ ಹುಂಡಿಯಲ್ಲಿ ಹಣ ಬಿಡುವುದರಿಂದ ಕಳ್ಳರು ಹಣದಾಸೆಗೆ ಹುಂಡಿ ಕದಿಯುತ್ತಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆಯಿಂದ ಸಾಕಷ್ಟು ಕ್ರಮ ಕೈಗೊಂಡರೂ ಪ್ರಕರಣಗಳು ನಡೆಯುತ್ತಿವೆ. ಆದ್ದರಿಂದ ಆಗಾಗ ಹುಂಡಿ ತೆಗೆದು ಹಣ ಬ್ಯಾಂಕ್ ಖಾತೆಗೆ ಜಮಾ ಮಾಡಿದರೆ ಕಳ್ಳತನ ಪ್ರಕರಣವೇ ಇರುವುದಿಲ್ಲ ಎಂದರು.
ಈ ಸಂದರ್ಭದಲ್ಲ್ಲಿ ಎಎಸ್‌ಐಗಳಾದ ತಿಪ್ಪೇಸ್ವಾಮಿ, ಹರೀಶ್ ಹಾಗೂ ವಿವಿಧ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.