ಯೋಗೇಶ್ವರ್​ ಮೊದಲು ಗೌರವದಿಂದ ಬದುಕುವುದನ್ನು ಕಲಿಯಲಿ: ಅನಿತಾ ಕುಮಾರಸ್ವಾಮಿ

ರಾಮನಗರ: ಚನ್ನಪಟ್ಟಣದ ಸೋಲನ್ನು ಯೋಗೇಶ್ವರ್​ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹತಾಶ ಮನೋಭಾವದಿಂದ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ರಾಮನಗರ ಉಪಚುನಾವಣೆಯ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವಿರುದ್ಧ ಗುಡುಗಿದ್ದಾರೆ.

ಹುಣಸನಹಳ್ಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊ0ದಿಗೆ ಮಾತನಾಡಿ, ಮಧುಗಿರಿಯಲ್ಲಿ ನಾನು ಮಾಡಿರುವ ಕೆಲಸವನ್ನು ಮುಂದೆ ಸುದ್ದಿಗೋಷ್ಠಿ ಮಾಡಿ ತಿಳಿಸುತ್ತೇನೆ ಎಂದರು.

ಅಧಿಕಾರಿಗಳ ವರ್ಗಾವಣೆ ಹೆಸರಲ್ಲಿ ದುಡ್ಡು ಮಾಡಿದ್ದಾರೆಂಬ ಯೋಗೇಶ್ವರ್ ಆರೋಪ ತಳ್ಳಿ ಹಾಕಿದ ಅನಿತಾ, “ನಾನ್ಯಾವ ದುಡ್ಡು ಮಾಡಿದ್ದೀನಿ ರೀ… ಅವರು ಮಾಡುವ ಕೆಲಸವನ್ನ ನನಗೆ ಹೇಳುತ್ತಿದ್ದಾರೆ ಅಷ್ಟೆ. ಈ ರೀತಿಯ ಇಲ್ಲಸಲ್ಲದ ಆರೋಪ ನೀಡುವುದನ್ನು ಮೊದಲು ಯೋಗೇಶ್ವರ್ ಬಿಡಬೇಕು. ಮೊದಲು ಆ ಮನುಷ್ಯ ಗೌರವದಿಂದ ಬದುಕುವುದನ್ನು ಕಲಿಯಲಿ ಎಂದು ವಾಗ್ದಾಳಿ ನಡೆಸಿದರು. (ದಿಗ್ವಿಜಯ ನ್ಯೂಸ್)