25.5 C
Bangalore
Monday, December 16, 2019

ಭಾರತ ಶ್ರೀಮಂತವಾಗುವ ಮೊದಲೇ ವೃದ್ಧರ ದೇಶವಾಗುತ್ತದೆಯೇ?

Latest News

ರಾಜರಾಜೇಶ್ವರಿ ನಗರದ ಸಮಸ್ಯೆ ಬಗೆಹರಿಸುವಂತೆ ಬಿಜೆಪಿ ನಾಯಕರ ಬೆನ್ನುಹತ್ತಿರುವ ಅನರ್ಹ ಶಾಸಕ ಮುನಿರತ್ನ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಸಮಸ್ಯೆ ಬಗೆ ಹರಿಸಿ ಶೀಘ್ರವೇ ಉಪ ಚುನಾವಣೆ ನಡೆಯುವಂತೆ ಮಾಡಬೇಕು ಎಂದು ಅನರ್ಹ ಶಾಸಕ ಮುನಿರತ್ನ...

ಪೌರತ್ವ ತಿದ್ದುಪಡಿ ಕಾಯ್ದೆ, ಎನ್​ಆರ್​ಸಿ ವಿರುದ್ಧ ಕೋಲ್ಕತ್ತದಲ್ಲಿ ಬೃಹತ್​ ರ‍್ಯಾಲಿ; ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವ

ಕೋಲ್ಕತ್ತ: ಪೌರತ್ವ ತಿದ್ದುಪಡಿ ಕಾಯ್ದೆ ಈಗಾಗಲೇ ದೇಶದ ಕೆಲವು ರಾಜ್ಯಗಳಲ್ಲಿ ಕಿಡಿ ಹೊತ್ತಿಸಿದೆ. ದೇಶದ ಈಶಾನ್ಯ ಭಾಗದಲ್ಲಿ ಪ್ರಾರಂಭವಾದ ಪ್ರತಿಭಟನೆ ಈಗ ದೆಹಲಿ, ಉತ್ತರ ಪ್ರದೇಶ...

ಮುಸ್ಲಿಂರಿಂದ ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನದಾನ

* ಸಾಮರಸ್ಯಕ್ಕೆ ಮುನ್ನುಡಿ ಬರೆದ ಕಾರ್ಯಕ್ರಮವಿಜಯವಾಣಿ ಸುದ್ದಿಜಾಲ ಬಳ್ಳಾರಿನಗರದ ಹೊಸಪೇಟೆ ರಸ್ತೆಯಲ್ಲಿರುವ ಏಳು ಮಕ್ಕಳ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಸೋಮವಾರ ಮುಸ್ಲಿಂರು ಊಟ...

ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಎದೆಗೆ ನಾಟಿದ್ದ ಕಬ್ಬಿಣ ರಾಡ್​ ಹೊರತೆಗೆದ ವೈದ್ಯರು: ಪ್ರಾಣಾಪಾಯದಿಂದ ವ್ಯಕ್ತಿ ಪಾರು

ರಾಯಚೂರು: ಎದೆಗೆ ಕಬ್ಬಿಣದ ರಾಡ್ ತೂರಿದ್ದ ವ್ಯಕ್ತಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಸತತ ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣಾಪಾಯದಿಂದ ಪಾರು...

ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ

ಕೊಡಗು: ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ ಎಂದು ವಕೀಲ ಪಿ. ಕೃಷ್ಣಮೂರ್ತಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಿಂದು ಜನಜಾಗೃತಿ ಸಮಿತಿಯಿಂದ ಕುಶಾಲನಗರದ ಗಾಯತ್ರಿ ಕಲ್ಯಾಣ...

ಕಳೆದ ಒಂದು ದಶಕದಲ್ಲಿ ಜನನ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಭಾರತದ ಜನಸಂಖ್ಯಾ ಪ್ರಮಾಣ ಏರುಮುಖದ ಬದಲಿಗೆ ಇಳಿಮುಖವಾಗಿದೆ. ಈ ಹಿನ್ನೆಲೆಯಲ್ಲಿ ಉಂಟಾಗಬಹುದಾದ ಸಮಸ್ಯೆಗಳನ್ನು ಎದುರಿಸಲು ಬಹುಮುಖಿ ಕಾರ್ಯತಂತ್ರ ಅಗತ್ಯ.

- Advertisement -

ಯಾವುದೇ ದೇಶದಲ್ಲಿ ಜನರ ಆರೋಗ್ಯ ವೃದ್ಧಿಸಿದರೆ ಅದು ಸಂತಸದ ವಿಚಾರ. ಇದರಿಂದ ಆ ರಾಷ್ಟ್ರದಲ್ಲಿ ಮನುಷ್ಯರ ಜೀವಿತಾವಧಿಯೂ ಹೆಚ್ಚುತ್ತದೆ. ಆದರೆ, ಇದು ಭಾರತದಲ್ಲಿ ವಿಲಕ್ಷಣವಾಗಿದೆ. ಹೇಗೆಂದರೆ, ಭಾರತದ ಆರೋಗ್ಯ ಸೇವೆಗಳು ಹೆಚ್ಚೆಚ್ಚು ಉತ್ತಮಗೊಳ್ಳುತ್ತಿರುವುದು ದಿಟ. ಇದರಿಂದ ಜನರ ಆಯುಷ್ಯ ಹೆಚ್ಚುತ್ತಿದೆ. ಹೀಗಾಗಿ ಭಾರತದಲ್ಲಿ 60 ವರ್ಷ ಮೇಲ್ಪಟ್ಟವರ ಸಂಖ್ಯೆ ಹೆಚ್ಚುತ್ತಿದೆ. ಇದೇ ವೇಳೆಗೆ ಸಂತಾನೋತ್ಪತ್ತಿ ಪ್ರಮಾಣ ಇಳಿಕೆ ಮತ್ತು ಮಕ್ಕಳ ಆರೋಗ್ಯದ ಅಲಕ್ಷ್ಯದ ಕಾರಣ ಅವರ ಸಾವಿನ ಪ್ರಮಾಣದಲ್ಲಿನ ಏರಿಕೆಯಿಂದ ಭಾರತದಲ್ಲಿ ಯುವ ಸಮುದಾಯದ ಗಾತ್ರ ಗಣನೀಯವಾಗಿ ಕುಸಿಯುತ್ತಿದೆ. ಇದು ದೇಶದಲ್ಲಿ ಶ್ರಮಿಕ ವರ್ಗವನ್ನು ಕಡಿಮೆ ಮಾಡುತ್ತಿದೆ. ಅಂದರೆ, ದುಡಿಯುವುದು ಎರಡು ಕೈಗಳಾದರೆ ಕುಳಿತು ಉಣ್ಣುವ ಕೈ ಹತ್ತಿಪ್ಪತ್ತು ಎಂಬ ಪರಿಸ್ಥಿತಿ ನಿರ್ವಣವಾಗುತ್ತಿದೆ. ಹೀಗಾಗಿ ಭಾರತ ಶ್ರೀಮಂತ ರಾಷ್ಟ್ರವಾಗುವುದಕ್ಕೂ ಮೊದಲು ವೃದ್ಧರ ದೇಶವಾಗುತ್ತದೆಯೇ ಎಂಬ ಆತಂಕ ಮೂಡಿದೆ.

ಭಾರತಕ್ಕೆ ಜನಸಂಖ್ಯೆ ಹೆಚ್ಚಳ ವರದಾನ ಎಂಬ ಭಾವನೆ ಇದೆ. ಆದರೆ, ‘ಭಾರತ ಯುವದೇಶ’ ಎಂಬ ಗ್ರಹಿಕೆ ಹೊರತಾಗಿಯೂ ಯುವ ಸಮುದಾಯದ ಸಂಖ್ಯೆ ತಗ್ಗುತ್ತಿರುವುದನ್ನು ನಾವು ಗಮನಿಸಬೇಕು. ಕಳೆದ ಒಂದು ದಶಕದಲ್ಲಿ ಜನನ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಭಾರತದ ಜನಸಂಖ್ಯಾ ಪ್ರಮಾಣ ಏರುಮುಖದ ಬದಲಿಗೆ ಇಳಿಮುಖವಾಗಿದೆ ಮತ್ತು ಭವಿಷ್ಯದಲ್ಲಿ ಇದು ಇದೇ ರೀತಿಯಲ್ಲಿ ಮುಂದುವರಿಯಲಿದೆ.

2015-16ರ ನಾಲ್ಕನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲೂ (ಎನ್​ಎಫ್​ಎಚ್​ಎಸ್-4) ಇದು ಪ್ರತಿಫಲಿಸಿದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ಒಟ್ಟಾರೆ ಸಂತಾನೋತ್ಪತ್ತಿ ಪ್ರಮಾಣ (ಟಿಎಫ್​ಆರ್) ಶೇ. 2.18ಕ್ಕೆ ಇಳಿದಿದೆ. 2019ರ ಮಾರ್ಚ್ ಅಂತ್ಯಕ್ಕೆ ಇದು ಶೇ. 2ಕ್ಕೆ ಕುಸಿದಿದೆ. ಜಾಗತಿಕ ಟಿಎಫ್​ಆರ್​ಗಿಂತ (ಶೇ. 2.30) ಭಾರತದ ಟಿಎಫ್​ಆರ್ ಕಡಿಮೆ ಎಂಬುದು ಗಮನಿಸಬೇಕಾದ ಅಂಶ.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮಕ್ಕಳ ಮರಣ ಪ್ರಮಾಣ ವಿಶ್ವಸಂಸ್ಥೆ (ಶೇ. 2.1) ಅಂಶಕ್ಕಿಂತ ಕಡಿಮೆ ಇದೆ. ಆದರೆ, ಭಾರತದಲ್ಲಿ ಶಿಶು ಮರಣ ಪ್ರಮಾಣ ಹೆಚ್ಚು. 2013-15ರ ಎನ್​ಎಫ್​ಎಚ್​ಎಸ್​ನಲ್ಲಿ ಉಲ್ಲೇಖಿಸಿರುವಂತೆ 15 ವರ್ಷದೊಳಗಿನ ಮಕ್ಕಳ ಸಾವಿನ ಪ್ರಮಾಣ ಶೇ. ಶೇ. 29 ಇದೆ. ಇದರಿಂದ ವಯಸ್ಸಾದವರ ಸಂಖ್ಯೆ ಏರುತ್ತಿದೆ. ಹೀಗಾಗಿಯೇ, ಭಾರತ ಸಿರಿವಂತ ದೇಶವಾಗುವುದಕ್ಕೂ ಮುನ್ನ ವೃದ್ಧರ ದೇಶವಾಗುತ್ತದೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದು. ಆದ್ದರಿಂದ, ಮುಂಬರುವ ದಿನಗಳಲ್ಲಿ ನೀತಿನಿರೂಪಣೆಗಳ ವಿಷಯದಲ್ಲಿ ಸರ್ಕಾರ ಕಠಿಣ ನೀತಿ ಅನುಸರಿಸುವ ಅವಶ್ಯಕತೆ ಇದೆ. ಇಂಥ ನೀತಿಗಳು ದೀರ್ಘಕಾಲೀನವಾಗಿರಬೇಕು ಎಂಬುದು ಮುಖ್ಯ.

ಈಗಿನ ಶ್ರಮಿಕ ವರ್ಗದಿಂದ ಸೃಷ್ಟಿಯಾಗುವ ಸಂಪತ್ತು ಹಿರಿಯ ನಾಗರಿಕರ ಯೋಗಕ್ಷೇಮಕ್ಕೆ ಸಾಕಾದೀತೆ? ಅದರಲ್ಲೂ ಹಿರಿಯರು ಬಹುತೇಕ ಪಿಂಚಣಿ ಮೇಲೆ ಆಧಾರವಾಗಿರುತ್ತಾರೆ. ಇದು ಸಾಧ್ಯವಾಗಬೇಕಾದರೆ ಹಿರಿಯ ನಾಗರಿಕ ಸಮುದಾಯವು ಆರ್ಥಿಕವಾಗಿ ಸಶಕ್ತವಾಗಬೇಕು. ಅವರು ಜೀವನ ನಡೆಸಲು ಮತ್ತು ಆರೋಗ್ಯದ ಸಮಸ್ಯೆಗಳನ್ನು ನಿಭಾಯಿಸುವಷ್ಟು ಸ್ವಾವಲಂಬಿಗಳಾಗಬೇಕು. ಅಂತಹ ಯೋಜನೆಗಳನ್ನು ಸರ್ಕಾರ ರೂಪಿಸಬೇಕು.

ಚೀನಾದಲ್ಲೂ ಈ ಸಮಸ್ಯೆ ಇದೆ. ಯುವ ಶ್ರಮಿಕರು ದುಡಿದು ವೃದ್ಧರನ್ನು ಸಲಹುವಂತಹ ಪರಿಸ್ಥಿತಿ ಭಾರತಕ್ಕಿಂತ ಹೆಚ್ಚಿದೆ. ಆದರೆ, ಚೀನಾದ ಆರ್ಥಿಕತೆ ದಶಕದಿಂದ ಸುಭದ್ರವಾಗಿರುವ ಕಾರಣ ಇದರ ಬಿಸಿ ಅಷ್ಟಾಗಿ ತಟ್ಟುತ್ತಿಲ್ಲ. ಭಾರತದ ಜನಸಂಖ್ಯೆ ಚೀನಾದಷ್ಟು ವೇಗವಾಗಿ ತಗ್ಗದಿದ್ದರೂ ನಮ್ಮ ಸರ್ಕಾರಿ ನೀತಿಗಳು ಜನಸಂಖ್ಯೆ ನಿಯಂತ್ರಣಕ್ಕೆ ಸೀಮಿತವಾಗದೆ ಅದನ್ನು ಮೀರಿ ಸಂಪತ್ತು ವೃದ್ಧಿಸುವ ಕಾರ್ಯ ಚುರುಕಿನಿಂದ ಆಗಬೇಕಿದೆ. ಹಾಗಾದರೆ, ಸರ್ಕಾರಗಳು ಸಂಪತ್ತು ವೃದ್ಧಿಗೆ ಏನು ಮಾಡಬಹುದು? ಕೆಲವು ಹೊಳಹುಗಳು ಇಲ್ಲಿವೆ.

ಮಹಿಳೆಗೆ ಮಣೆ: ಶ್ರಮಿಕ ವರ್ಗದ ಸಂಪತ್ತು ವೃದ್ಧಿಸುವ ನಿಟ್ಟಿನಲ್ಲಿ ದುಡಿಯುವ ವಯಸ್ಸಿನ-ಸಾಮರ್ಥ್ಯದ ಮಹಿಳೆಯರ ಕೊಡುಗೆ ಬಗ್ಗೆ ನಾವು ಹೆಚ್ಚು ಗಮನಹರಿಸಬೇಕಿದೆ. 2018ರ ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಶ್ರಮಿಕ ವರ್ಗದ ಮಹಿಳೆಯ ಪ್ರಮಾಣ ಶೇ. 27. ಆದರೆ, ವಿಶ್ವದ ಶ್ರಮಿಕ ವರ್ಗದ ಸ್ತ್ರೀಯರ ಪ್ರಮಾಣ ಶೇ. 48.5 ಇದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೂಡ ಹೆಚ್ಚುಕಡಿಮೆ ಇದೇ ಅಂಕಿಅಂಶ ನೀಡಿದೆ. ದೇಶದ ನಿವ್ವಳ ಪ್ರಗತಿ ದರಕ್ಕೆ (ಜಿಡಿಪಿ) ಪುರುಷರು ಶೇ. 27ರಷ್ಟು ಕೊಡುಗೆ ನೀಡುವಂತಿದ್ದರೆ, ಶ್ರಮಿಕ ಮಹಿಳೆಯರೂ ಅಷ್ಟೇ ಪ್ರಮಾಣದಲ್ಲಿ ಕೊಡುಗೆ ನೀಡಬಲ್ಲರು ಎಂದು ಐಎಂಎಫ್ ಹೇಳಿದೆ.

ಪಿಂಚಣಿಗೆ ಮಹತ್ವ: ನಿವೃತ್ತಿ ಯೋಜನೆಗಳಲ್ಲಿ ಹೂಡಿಕೆಗೆ ಉತ್ತೇಜನ ಇಂದಿನ ಅದ್ಯತೆ ಆಗಬೇಕಿದೆ. ಏಕೆಂದರೆ ಭಾರತದ ಜನಸಂಖ್ಯಾ ಚಿತ್ರಣ ದಿನದಿಂದ ದಿನಕ್ಕೆ ಬದಲಾಗುತ್ತಿರುವ ಕಾರಣ ಪಿಂಚಣಿ ಯೋಜನೆ ವೃದ್ಧರನ್ನು ಆರ್ಥಿಕವಾಗಿ ಸಬಲಗೊಳಿಸುತ್ತದೆ. ಭಾರತದಲ್ಲಿ ಪ್ರತಿ 10 ಕಾರ್ವಿುಕರಲ್ಲಿ 8 ಮಂದಿ ಅಸಂಘಟಿತ ವಲಯದಲ್ಲಿ ದುಡಿಯುತ್ತಾರೆ. ಇವರಿಗೆ ನಿವೃತ್ತಿ ಸೌಲಭ್ಯಗಳು ಬಹಳ ಸೀಮಿತವಾಗಿ ದೊರೆಯುತ್ತವೆ.

ಮಧ್ಯಮ ವರ್ಗದವರಿಗೆ ಸಂಬಳ ತಕ್ಕಮಟ್ಟಿಗೆ ಇರುವುದರಿಂದ ಅವರು ಜೀವನ ಸಾಕಷ್ಟು ಗುಣಮಟ್ಟದಿಂದ ಕೂಡಿದೆ ಎನ್ನಲಡ್ಡಿಯಿಲ್ಲ. ಇದರಿಂದ ಈ ವರ್ಗದವರ ನಿವೃತ್ತಿ ಸೌಲಭ್ಯ ನಿರೀಕ್ಷಿತ ಮಟ್ಟದಲ್ಲೇ ಇರುತ್ತದೆ.

ಭವಿಷ್ಯಕ್ಕಾಗಿ ಶಿಕ್ಷಣ: ಈಗಿನ ಮಾರುಕಟ್ಟೆ ವ್ಯವಸ್ಥೆ ಒಂದು ದಶಕದ ಹಿಂದೆ ಇದ್ದಂತಿಲ್ಲ. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಕೌಶಲರಹಿತ ಯುವ ಸಮುದಾಯವು ಉತ್ಪಾದನೆಯಾಗುತ್ತಿದೆ. ಇದು ಸರಿಹೋಗಬೇಕಾದರೆ ಶಿಕ್ಷಣದ ಪಠ್ಯ ಮತ್ತು ವಿದ್ಯಾಭ್ಯಾಸದ ಪ್ರತಿಫಲದಲ್ಲಿ ಆಮೂಲಾಗ್ರ ಬದಲಾವಣೆಗಳು ಆಗಬೇಕು. ಕೌಶಲವಿಲ್ಲದ ಬೃಹತ್ ಗಾತ್ರದ ಯುವ ಸಮುದಾಯಕ್ಕೆ ಕೌಶಲದ ಕಸುವನ್ನು ತುರ್ತಾಗಿ ತುಂಬಬೇಕು. ಉದ್ಯೋಗಾವಕಾಶ ಹೇರಳವಾಗಿರುವ ಕೈಗಾರಿಕೆಗಳಲ್ಲಿ ಕೌಶಲಾಭಿವೃದ್ಧಿಯ ತರಬೇತಿ ಕಾರ್ಯಗಳು ಭರದಿಂದ ಸಾಗಬೇಕು.

ಆರೋಗ್ಯಸೇವೆಯಲ್ಲಿ ತಂತ್ರಜ್ಞಾನ: ವೃದ್ಧರ ಸಂಖ್ಯೆ ಹೆಚ್ಚುತ್ತಿರುವ ಭಾರತದಲ್ಲಿ ಆರೋಗ್ಯ ಸೇವೆಗಳು ತಂತ್ರಜ್ಞಾನ ಆಧಾರಿತವಾಗುವುದು ಅತ್ಯಗತ್ಯ. ಏಕೆಂದರೆ ಬೃಹತ್ ಜನಸಂಖ್ಯೆಯ ದೇಶದಲ್ಲಿ ತಂತ್ರಜ್ಞಾನದ ಮೂಲಕ ಆರೋಗ್ಯಸೇವೆಯಲ್ಲಿ ಕ್ರಾಂತಿಯನ್ನೇ ಉಂಟು ಮಾಡಬಹುದು. ಸದ್ಯ ಸ್ಥಿತಿಯಲ್ಲಿ 1,700 ಜನರಿಗೆ ಒಬ್ಬ ವೈದ್ಯರು ಇದ್ದಾರೆ ಮತ್ತು ದೇಶದಲ್ಲಿ ಗುಣಮಟ್ಟದ ವೈದ್ಯ ಪ್ರತಿಭೆಗಳ ಕೊರತೆಯೂ ಇದೆ. ಈ ಸಮಸ್ಯೆಗಳು ದೂರವಾಗಬೇಕಾದರೆ ತಂತ್ರಜ್ಞಾನದ ಮೊರೆ ಅವಶ್ಯಕ. ಇದರಿಂದ ಆರೋಗ್ಯ ಸೇವೆಯ ಖರ್ಚನ್ನು ಗಣನೀಯವಾಗಿ ತಗ್ಗಿಸಬಹುದು.

(ಲೇಖಕರು ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸಂಸ್ಥೆ ಅಧ್ಯಕ್ಷರು)

Stay connected

278,752FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...