25.5 C
Bangalore
Monday, December 16, 2019

ಆಶಯಗಳು ಈಡೇರುತ್ತಿರುವ ಕಾಲ

Latest News

ರಾಜರಾಜೇಶ್ವರಿ ನಗರದ ಸಮಸ್ಯೆ ಬಗೆಹರಿಸುವಂತೆ ಬಿಜೆಪಿ ನಾಯಕರ ಬೆನ್ನುಹತ್ತಿರುವ ಅನರ್ಹ ಶಾಸಕ ಮುನಿರತ್ನ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಸಮಸ್ಯೆ ಬಗೆ ಹರಿಸಿ ಶೀಘ್ರವೇ ಉಪ ಚುನಾವಣೆ ನಡೆಯುವಂತೆ ಮಾಡಬೇಕು ಎಂದು ಅನರ್ಹ ಶಾಸಕ ಮುನಿರತ್ನ...

ಪೌರತ್ವ ತಿದ್ದುಪಡಿ ಕಾಯ್ದೆ, ಎನ್​ಆರ್​ಸಿ ವಿರುದ್ಧ ಕೋಲ್ಕತ್ತದಲ್ಲಿ ಬೃಹತ್​ ರ‍್ಯಾಲಿ; ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವ

ಕೋಲ್ಕತ್ತ: ಪೌರತ್ವ ತಿದ್ದುಪಡಿ ಕಾಯ್ದೆ ಈಗಾಗಲೇ ದೇಶದ ಕೆಲವು ರಾಜ್ಯಗಳಲ್ಲಿ ಕಿಡಿ ಹೊತ್ತಿಸಿದೆ. ದೇಶದ ಈಶಾನ್ಯ ಭಾಗದಲ್ಲಿ ಪ್ರಾರಂಭವಾದ ಪ್ರತಿಭಟನೆ ಈಗ ದೆಹಲಿ, ಉತ್ತರ ಪ್ರದೇಶ...

ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನದಾನ ಮಾಡಿದ : ಸಾಮರಸ್ಯದ ಕಾರ್ಯಕ್ರಮ

ಬಳ್ಳಾರಿ: ನಗರದ ಹೊಸಪೇಟೆ ರಸ್ತೆಯಲ್ಲಿರುವ ಏಳು ಮಕ್ಕಳ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಸೋಮವಾರ ಮುಸ್ಲಿಂರು ಊಟ ಬಡಿಸುವ ಮೂಲಕ ಸಾಮರಸ್ಯಕ್ಕೆ ಮುನ್ನುಡಿ ಬರೆದರು....

ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಎದೆಗೆ ನಾಟಿದ್ದ ಕಬ್ಬಿಣ ರಾಡ್​ ಹೊರತೆಗೆದ ವೈದ್ಯರು: ಪ್ರಾಣಾಪಾಯದಿಂದ ವ್ಯಕ್ತಿ ಪಾರು

ರಾಯಚೂರು: ಎದೆಗೆ ಕಬ್ಬಿಣದ ರಾಡ್ ತೂರಿದ್ದ ವ್ಯಕ್ತಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಸತತ ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣಾಪಾಯದಿಂದ ಪಾರು...

ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ

ಕೊಡಗು: ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ ಎಂದು ವಕೀಲ ಪಿ. ಕೃಷ್ಣಮೂರ್ತಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಿಂದು ಜನಜಾಗೃತಿ ಸಮಿತಿಯಿಂದ ಕುಶಾಲನಗರದ ಗಾಯತ್ರಿ ಕಲ್ಯಾಣ...

ಭಾರತದಲ್ಲಿ ಸಂವಿಧಾನ ರಚನೆ ಪ್ರಾರಂಭದಿಂದ ಇಲ್ಲಿಯವರೆಗೂ ಸಂವಿಧಾನದ ನಿಯಮ, ಆಶಯಗಳನ್ನು ವಂಚಿಸಿದ ಬಹುದೊಡ್ಡ ‘ಕೀರ್ತಿ’ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಮೊದಲ ಪ್ರಧಾನಿ ಜವಾಹರಲಾಲ ನೆಹರು ಶೇಖ್ ಅಬ್ದುಲ್ಲಾ ಕುಟುಂಬಕ್ಕೆ ನೆರವಾಗಲು ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿ ಅಳವಡಿಸಿದ ಸಂವಿಧಾನದ 370ನೇ ವಿಧಿ ಏಳು ದಶಕಗಳ ಕಾಲ ಆ ರಾಜ್ಯವನ್ನು ಇನ್ನಿಲ್ಲದಂತೆ ಕಾಡಿ, ಅಭಿವೃದ್ಧಿಯ ಮುಖ್ಯವಾಹಿನಿಯಿಂದ ದೂರವಿಟ್ಟಿತು. 370ನೇ ವಿಧಿ ಅಳವಡಿಕೆಯ ಬೇಡಿಕೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಸಾರಾಸಗಟಾಗಿ ತಿರಿಸ್ಕರಿಸಿದ್ದರೂ, ನೆಹರು ಹಠ ಸಾಧಿಸಿದರು ಎಂಬ ಸಂಗತಿ ಇತಿಹಾಸದ ಪುಟಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

- Advertisement -

ಇದೇ ಕಾಂಗ್ರೆಸ್ ಪ್ರೇರಿತ ಸದಸ್ಯ ಕೆ.ಟಿ.ಷಾ, ಮೂಲ ಸಂವಿಧಾನದಲ್ಲಿ ‘ಸೆಕ್ಯುಲರಿಸಂ’ ಪದ ಸೇರಿಸಲು ಪಟ್ಟು ಹಿಡಿದಾಗ ಬಾಬಾಸಾಹೇಬ್, ‘ಇಂಥ ಪದ ಮತ್ತು ಸಂಸ್ಕೃತಿ ಎರಡೂ ಭಾರತಕ್ಕೆ ಹೊಂದುವುದಿಲ್ಲ’ ಎಂದು ಹೇಳಿ, ಆ ಬಗ್ಗೆ ವಿಸõತ ಚರ್ಚೆ ಮಾಡಿದ್ದರು.

ಹೀಗೆ ಸಂವಿಧಾನ ರಚನೆಯ ಪ್ರಾರಂಭಿಕ ಹಂತದಿಂದ ಮೊದಲ್ಗೊಂಡು, 1975ರ ತುರ್ತು ಪರಿಸ್ಥಿತಿ ಸಂದರ್ಭದ ಅನೇಕಾನೇಕ ಸಾಂವಿಧಾನಿಕ ಉಲ್ಲಂಘನೆಗಳು, ಕಾಂಗ್ರೆಸ್ ಪಕ್ಷ ಸಂವಿಧಾನದ ಕರ್ತೃ ಅಂಬೇಡ್ಕರ್​ರಿಗೆ ಮಾಡಿದ ಐತಿಹಾಸಿಕ ಅವಮಾನಗಳ ದ್ಯೋತಕವಾಗಿವೆ.

1971ರಲ್ಲಿ ಮಾಡಿದ 24ನೇ ತಿದ್ದುಪಡಿ, (ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಸಂಸತ್ತು ತಿದ್ದುಪಡಿ ಮಾಡಬಹುದು.) 1976ರಲ್ಲಿ 42ನೇ ತಿದ್ದುಪಡಿ 368/4 ವಿಧಿಯನ್ವಯ ಸಂಸತ್ತು ಮಾಡಿದ ತಿದ್ದುಪಡಿಗಳ ವಿರುದ್ಧ ನ್ಯಾಯಾಲಯಕ್ಕೆ ಹೋಗುವಂತಿಲ್ಲ ಮತ್ತು ರಾಜ್ಯ ತುರ್ತು ಪರಿಸ್ಥಿತಿ ಅಧಿಕಾರ ದುರ್ಬಳಕೆ (356ನೇ ವಿಧಿ), ತ್ರಿಸದಸ್ಯ ಚುನಾವಣಾ ಆಯೋಗ ಮಾರ್ಪಾಡು (1989ರಲ್ಲಿ ದಿನೇಶ್ ಗೋಸ್ವಾಮಿ ಸಮಿತಿ ಶಿಫಾರಸ್ಸಿನ ಅನ್ವಯ), ಸುಪ್ರೀಂ ಕೋರ್ಟಿನ ಅಧಿಕಾರ ಮೊಟಕುಗೊಳಿಸುವ ನಡಾವಳಿಗಳು.

ರಾಜ್ಯ ವಿಧಾನಸಭೆಯ ನಿಕಟಪೂರ್ವ ಸ್ಪೀಕರ್ ರಮೇಶ್​ಕುಮಾರ್ ಇತ್ತೀಚೆಗೆ ಶಾಸಕರನ್ನು ಸಹಜ ನ್ಯಾಯದಡಿಯಲ್ಲಿ ವಿಚಾರಣೆ ಮಾಡದೆ ಅನರ್ಹಗೊಳಿಸಿದ ನಿದರ್ಶನ, ಸಂವಿಧಾನವಿರೋಧಿ ನಡೆಗೆ ಪುರಾವೆ. ಸಂವಿಧಾನಕ್ಕೆ ತಾನು ಮಾಡಿದ ಅಪಚಾರಗಳನ್ನೆಲ್ಲ ಮರೆತ ಕಾಂಗ್ರೆಸ್ 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದ ತಕ್ಷಣ, ‘ಸಂವಿಧಾನ ಉಳಿಸಿ’ ಆಂದೋಲನ ಪ್ರಾರಂಭಿಸಿ ದೇಶವ್ಯಾಪಿ ಅದನ್ನು ತೀವ್ರಗೊಳಿಸಿತು. ಅದಕ್ಕೆ ಡಾಂಭಿಕ ಬುದ್ಧಿಜೀವಿಗಳು ಹೆಗಲುಕೊಟ್ಟರು. ಇವರ ‘ಸಂವಿಧಾನ ಉಳಿಸುವ’ ನಡೆ ಮತ್ತು ನರೇಂದ್ರ ಮೋದಿ ಸಂವಿಧಾನ ಬಲಪಡಿಸುವತ್ತ ಇಟ್ಟ ಹೆಜ್ಜೆಗಳ ಪರಾಮರ್ಶೆ ಈಗಿನ ಅಗತ್ಯ.

  • ಎಪ್ಪತ್ತು ವರ್ಷಗಳಿಂದ ಬಳಕೆಯಾಗದೆ, ತ್ವರಿತ ಮತ್ತು ಸಮಾನ ನ್ಯಾಯ ನಿರ್ಣಯಕ್ಕೆ ಅಡ್ಡಿಯಾಗಿದ್ದ ಹದಿನಾಲ್ಕು ಸಾವಿರ ಅನುಪಯುಕ್ತ ಕಾನೂನುಗಳನ್ನು ರದ್ದುಪಡಿಸಲಾಯಿತು.
  • ಮೇಲ್ವರ್ಗದ ಬಡಜನರಿಗೆ ಶೇಕಡ 10ರಷ್ಟು ಮೀಸಲಾತಿ ಕಲ್ಪಿಸಿರುವುದು.
  • ಜನಧನ್ ಮೂಲಕ ಎಲ್ಲರೂ ಬ್ಯಾಂಕ್ ಖಾತೆ ಹೊಂದಿರಬೇಕೆಂಬ ನಿರ್ಣಯ, ಕಾನೂನಿನ ಮುಂದೆ ಸಮಾನರು ಎಂಬ ಸಂವಿಧಾನದ ಅಭಿಲಾಷೆಯಾಗಿದೆ.

ಸಂವಿಧಾನದ ಪ್ರಸ್ತಾವನೆಯ ಧ್ಯೇಯವಾದ ‘ಭಾರತೀಯ ಪ್ರಜೆಗಳಾದ ನಾವು’ ಎಂಬ ತತ್ತ್ವವನ್ನು ಮೋದಿಯವರು, ಸಾವಿರಾರು ಹೆರಿಗೆ ಮಾಡಿಸಿದ ಸೂಲಗಿತ್ತಿ ನರಸವ್ವನಿಗೆ ನೀಡಿದ ‘ಪದ್ಮಶ್ರೀ’ ಪ್ರಶಸ್ತಿ ಮೂಲಕ ದೃಢಪಡಿಸಿದರು. ಬಾಲಾಪರಾಧ ಕಾಯ್ದೆಗೆ ತಿದ್ದುಪಡಿ, ತ್ರಿವಳಿ ತಲಾಕ್ ರದ್ದತಿ, 370 ಮತ್ತು 35ಎ ವಿಧಿ ರದ್ದತಿ, ಸಂವಿಧಾನ 15(1) ವಿಧಿಯನ್ವಯ ರಾಜ್ಯ ಯಾರ ನಡುವೆಯೂ ಪಕ್ಷಪಾತ ಮಾಡಬಾರದೆಂಬ ನಿಯಮ ಹಾಗೂ 19(1)ನೇ ವಿಧಿಯನ್ವಯ ಮೂಲಭೂತ ಹಕ್ಕುಗಳ ಸಾರ್ವತ್ರೀಕರಣ ನಿಯಮಗಳ ಅನುಸರಣೆಯೇ ಆಗಿದೆ. 5 ಲಕ್ಷ ರೂ.ವರೆಗಿನ ಉಚಿತ ವೈದ್ಯಕೀಯ ಚಿಕಿತ್ಸೆ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ವಿಮೆ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಸಂವಿಧಾನದ 36-51ನೇ ವಿಧಿಗಳವರೆಗಿನ ರಾಜ್ಯನೀತಿ ನಿರ್ದೇಶಕ ತತ್ತ್ವಗಳ ಪಾಲನೆಯೇ ಹೌದು.

2019ರಲ್ಲಿ ಒಡಿಶಾದ ಪ್ರತಾಪ್​ಚಂದ್ರ ಸಾರಂಗಿಗೆ, ಕೇಂದ್ರ ಮಂತ್ರಿಮಂಡಲದಲ್ಲಿ ಸ್ಥಾನ ಕಲ್ಪಿಸಿದ್ದು-ಅಂಬೇಡ್ಕರರ ಸಾಮಾನ್ಯನ ಕೈಯಲ್ಲಿ ಅಧಿಕಾರ ಅಲಂಕೃತವಾಗಬೇಕೆಂಬ ಅಭಿಮತವೇ ಆಗಿದೆ. ಸದಾ ಅಂಬೇಡ್ಕರರ ಅಸ್ಮಿತೆ, ಬೋಧನೆಗಳನ್ನು ಉಲ್ಲಂಘಿಸುತ್ತಲೇ ಬಂದ ಕಾಂಗ್ರೆಸಿಗರಿಗೆ, ಅವರ ಬೆಂಬಲಿಗ ಬುದ್ಧಿಜೀವಿಗಳಿಗೆ, ಜಗತ್ತಿನ 157 ದೇಶಗಳ ಸಂವಿಧಾನವನ್ನು ಪರಾಮರ್ಶೆ ಮಾಡಿ ಭಾರತಕ್ಕೆ ವಿಶ್ವಶ್ರೇಷ್ಠ ಸಂವಿಧಾನವನ್ನು ಕೊಟ್ಟ ಸಂವಿಧಾನ ಶಿಲ್ಪಿಗಾಗಿ, ರಾಷ್ಟ್ರದ ಸಂಸತ್ತನ್ನೇ ಎರಡು ದಿವಸಗಳ ಕಾಲ ಸಂಪೂರ್ಣ ಮೀಸಲಿಟ್ಟ ಮೋದಿಯವರ ಬಗ್ಗೆ ಮಾತನಾಡುವ ನೈತಿಕತೆ ಉಳಿದಿದೆಯೇ?

ಅಧಿಕಾರದ ಲಾಲಸೆಯಿಂದ ಜಯಪ್ರಕಾಶ ನಾರಾಯಣ, ಲಾಲಕೃಷ್ಣ ಆಡ್ವಾಣಿಯಂಥ ಸಜ್ಜನ ಹೋರಾಟಗಾರರಿಗೆ ಜೈಲುವಾಸ ತೋರಿಸಿದ್ದು ಸಂವಿಧಾನ ಗೌರವಿಸುವ ನಡೆಯೇ? ಮೀಸಾದಂಥ ಕಾಯಿದೆಯ ಹೇರಿಕೆ, ಮಾಧ್ಯಮಗಳ ಹೆಡೆಮುರಿಕಟ್ಟಿದ್ದು ಸಂವಿಧಾನ ಪೂರಕ ನಡೆಯೇ? ‘ಕಾಶ್ಮೀರ ಭಾರತದ ಆಂತರಿಕ ವಿಷಯ ಹೇಗೆ?’ ಎಂದು ಪ್ರಶ್ನಿಸುವ ಕಾಂಗ್ರೆಸ್ ಮನಸ್ಥಿತಿ ಸಂವಿಧಾನ ಶ್ರೇಷ್ಠತೆ ಕಾಪಾಡುವ ನಡಾವಳಿಯೇ? ಇವರು ಹೇಳುವ ಗಿಳಿಪಾಠಕ್ಕೆ ತಲೆಬಗ್ಗುವ ಸ್ಥಿತಿಯಲ್ಲಿ ನವಭಾರತದ ಪ್ರಜೆಗಳು ಇಲ್ಲವೆಂಬುದನ್ನು 2019ರ ಚುನಾವಣೆ ಸಾಬೀತು ಮಾಡಿದೆ. ಕಾಂಗ್ರೆಸ್ಸಿಗರ ಮುಂದೆ ಈಗ ಹೆಚ್ಚು ಆಯ್ಕೆಗಳಿಲ್ಲ. ಸಂವಿಧಾನದ ಆಶಯದಂತೆ ಸಮಾನ ನಾಗರಿಕ ಸಂಹಿತೆ ತನ್ನಿ ಎಂದು ಮೋದಿಯವರ ವಿರುದ್ಧ ಹೊಸ ಹೋರಾಟ ಪ್ರಾರಂಭಿಸುವುದು, ಇಲ್ಲವೇ ಅವರ ಹೋರಾಟ ಮಾರ್ಗವನ್ನೇ ಬದಲಿಸಿಕೊಳ್ಳುವುದು. ಅವರು ಯಾವ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಕುತೂಹಲಕರ.

(ಲೇಖಕರು ಸಂವಿಧಾನ ವಿಶ್ಲೇಷಕರು ಹಾಗೂ ಪ್ರಾದೇಶಿಕ ನಿರ್ದೇಶಕರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ)

Stay connected

278,752FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...